ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಎಎಸ್ ಅಧಿಕಾರಿಯಿಂದ ವ್ಯಕ್ತಿಗೆ 95 ಲಕ್ಷ ರೂಪಾಯಿ ವಂಚನೆ ಆರೋಪ; ತನಿಖೆಗೆ ಆದೇಶ

ಒಡಿಶಾ ರಾಜ್ಯ ಗೃಹ ಇಲಾಖೆಯಲ್ಲಿ ಪ್ರಸ್ತುತ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರು ಭೂಮಿ ನೀಡುವ ನಕಲಿ ಭರವಸೆ ನೀಡಿ ವ್ಯಕ್ತಿಯೊಬ್ಬರು 95 ಲಕ್ಷ ರೂ.ಗಳನ್ನು ವಂಚಿಸಿ, ನಂತರ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಐಎಎಸ್ ಅಧಿಕಾರಿಯಿಂದ ವ್ಯಕ್ತಿಗೆ 95 ಲಕ್ಷ ರೂಪಾಯಿ ವಂಚನೆ ಆರೋಪ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 11, 2026 8:45 PM

ಭುವನೇಶ್ವರ: ಒಡಿಶಾ ರಾಜ್ಯ ಗೃಹ ಇಲಾಖೆಯಲ್ಲಿ ಪ್ರಸ್ತುತ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರು (Fraud Case) ಭೂಮಿ ನೀಡುವ ನಕಲಿ ಭರವಸೆ ನೀಡಿ ವ್ಯಕ್ತಿಯೊಬ್ಬರು 95 ಲಕ್ಷ ರೂ.ಗಳನ್ನು ವಂಚಿಸಿ, ನಂತರ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಟಕ್ ಜಿಲ್ಲೆಯ ಸಿಡಿಎ (ಕಟಕ್ ಅಭಿವೃದ್ಧಿ ಪ್ರಾಧಿಕಾರ) ಪ್ರದೇಶದಲ್ಲಿ ಭೂಮಿ ನೀಡುವುದಾಗಿ ಭರವಸೆ ನೀಡಿ 95 ಲಕ್ಷ ರೂ. ಪಡೆದು ವಿಶೇಷ ಚೇತನ ವ್ಯಕ್ತಿ ಕಮಲ್ ಕುಮಾರ್ ಭಾವಸಿಂಕಾ ಎಂಬ ದೂರುದಾರರಿಗೆ ಆರಾಧನಾ ದಾಸ್ 95 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದೂರುದಾರರ ಪತ್ನಿ ಬೀನಾ ಭಾವಸಿಂಕಾ, ದಾಸ್ ಪರವಾಗಿ ಎರಡು ವಿಭಿನ್ನ ದಿನಾಂಕಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಪಾವತಿಗಳನ್ನು ಮಾಡಿದ್ದಾರೆ. ಸಿಡಿಎ ಹಂತ-II ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ವರದಿಯು ಭೂಮಿ ವಾಗ್ದಾನಕ್ಕೆ ಸಂಬಂಧಿಸಿದಂತೆ 95 ಲಕ್ಷ ರೂ.ಗಳ ವಹಿವಾಟು ನಡೆದಿರುವುದನ್ನು ದೃಢಪಡಿಸಿದೆ. ಅದರಲ್ಲಿ ಒಂದು ಭಾಗವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ.

ಸದ್ಯ ದೂರು ದಾಖಲಾಗಿದ್ದು, ಐಎಎಸ್ ಅಧಿಕಾರಿಯ ವಿರುದ್ಧ ಪಚಾರಿಕ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಪೊಲೀಸ್ ಆಯುಕ್ತರ ಕಚೇರಿ ರಾಜ್ಯ ಗೃಹ ಇಲಾಖೆ ಮತ್ತು ಸಾಮಾನ್ಯ ಆಡಳಿತ ಇಲಾಖೆಗೆ (ಜಿಎಡಿ) ಪತ್ರ ಬರೆದಿದೆ. ಅಧಿಕಾರಿ ದೂರುದಾರರಿಗೆ ನಿಂದನೀಯ ಮತ್ತು ಜೀವ ಬೆದರಿಕೆಯೊಡ್ಡಿದ ಆರೋಪವನ್ನೂ ಎದುರಿಸುತ್ತಿದ್ದಾರೆ.

ಪೊಲೀಸರಿಂದ ಬೆದರಿಕೆ?

ಪೊಲೀಸ್ ಅಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಯೂಟ್ಯೂಬರ್ (Youtuber) ಒಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ಎಸ್‌ಪಿ ಸೇರಿ ಜಿಲ್ಲೆಯ ಪೊಲೀಸರಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ ಫೇಸ್‌ಬುಕ್‌ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಕಣ್ಣೀರು ಹಾಕಿ ಯೂಟ್ಯೂಬರ್ ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶಾಂತಿ ಸಭೆ ಇದೆ ಎಂದು ಕಚೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದು, ಇವರು ನನ್ನ ಜೀವ ತೆಗೆದುಕೊಳ್ಳತ್ತಾರೆ ಎಂದು ಆತ ಆರೋಪಿಸಿದ್ದಾನೆ.