ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅತ್ಯಾಚಾರ ಆರೋಪಿಗೆ ತಕ್ಕ ಶಾಸ್ತಿ; ಅಂಗಡಿ ಧ್ವಂಸ, ಆತನ ಮೇಲೆ ಹಲ್ಲೆಗೆ ಯತ್ನ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ವಿರುದ್ಧ ಜನಸಮೂಹ ರೊಚ್ಚಿಗೆದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉದ್ರಿಕ್ತ ಜನರ ಗುಂಪೊಂದು ಆರೋಪಿಯನ್ನು ಪೊಲೀಸ್ ಜೀಪಿನಿಂದ ಹೊರಗೆಳೆದು ಹಲ್ಲೆಗೆ ಯತ್ನಸಿದೆ ಅಲ್ಲದೇ ಆತನ ಅಂಗಡಿಯನ್ನು ಧ್ವಂಸ ಕೂಡ ಮಾಡಿದೆ. ಇದನ್ನು ನಿಯಂತ್ರಿಸಲು ಪೊಲೀಸರು ಬಿಗಿ ಭದ್ರತೆ ಕೈಗೊಂಡರು.

ಅತ್ಯಾಚಾರ ಆರೋಪಿ ವಿರುದ್ಧ ಸಿಡಿದೆದ್ದ ಜನಸಮೂಹ

ಸಂಗ್ರಹ ಚಿತ್ರ -

ಉತ್ತರ ಪ್ರದೇಶ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ (minor kidnapping and rape case) ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಲು ಬಂದಿದ್ದ ವೇಳೆ ಉದ್ರಿಕ್ತ ಗುಂಪೊಂದು ಆರೋಪಿಯನ್ನು ಪೊಲೀಸ್ ಜೀಪಿನಿಂದ ಹೊರಗೆಳೆದು ಹಲ್ಲೆಗೆ (UP crime) ಯತ್ನಸಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ. ಅಲ್ಲದೇ ಆರೋಪಿಯ ಅಂಗಡಿಯನ್ನು ಕೂಡ ಧ್ವಂಸ ಮಾಡಲಾಗಿದೆ. ಉತ್ತರಪ್ರದೇಶದ ಪ್ರತಾಪಗಢದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಗುಲ್ಜಾರ್ ಅಹ್ಮದ್‌ನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಜನರು ಉದ್ವಿಗ್ನತೆಯನ್ನು ಉಂಟು ಮಾಡಿದರು.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದಲ್ಲಿ ಉದಯದಿಹ್ ಮೋಡ್ ಬಸ್ ನಿಲ್ದಾಣದ ಬಳಿ ಗುಲ್ಜಾರ್ ಅಹ್ಮದ್‌ನನ್ನು (31) ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಉದ್ರಿಕ್ತಗೊಂಡಿದ್ದರಿಂದ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಬೇಕಾಯಿತು.

8 ತಿಂಗಳ ಹೆಣ್ಣು ಮಗುವಿಗೆ ಆ್ಯಸಿಡ್ ಕುಡಿಸಿದ ಪಾಪಿ ತಾಯಿ; ಅಮ್ಮನ ಕ್ರೌರ್ಯಕ್ಕೆ ಬೆಚ್ಚಿಬಿದ್ದ ದೇಶ

ಪೊಲೀಸರು ಅಹ್ಮದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸುತ್ತಿದ್ದ ವೇಳೆ ಬಲಪಂಥೀಯ ಸಂಘಟನೆಯ ಬಜರಂಗದಳದ ಕಾರ್ಯಕರ್ತರೊಂದಿಗೆ ಸೇರಿ ಪೊಲೀಸ್ ವಾಹನವನ್ನು ತಡೆದರು. ಅಲ್ಲದೇ ವಾಹನದೊಳಗೆ ಇದ್ದ ಆರೋಪಿಯನ್ನು ಹಿಡಿದೆಳೆದು ಹಲ್ಲೆ ನಡೆಸಲು ಮುಂದಾದರು. ತಕ್ಷಣವೇ ಪೋಲಾಯಿಸರು ಜನರ ಗುಂಪಿನಿಂದ ಆರೋಪಿಯನ್ನು ರಕ್ಷಿಸಿ ಸ್ಥಳದಿಂದ ಕರೆದುಕೊಂಡು ಹೋದರು.

ಇದರ ಬಳಿಕ ಈ ಘಟನೆಯನ್ನು 'ಲವ್ ಜಿಹಾದ್' ಪ್ರಕರಣ ಎಂದು ಕರೆದ ಬಜರಂಗದಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಪಟ್ಟಿ ಕೊಟ್ವಾಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ನಡುವೆ ಉದ್ರಿಕ್ತ ಜನರ ಗುಂಪೊಂದು ಪಟ್ಟಿ ಮಾರುಕಟ್ಟೆಯಲ್ಲಿದ್ದ ಆರೋಪಿಯ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಭಯ ಮತ್ತು ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿದ್ದು, ಮಾರುಕಟ್ಟೆಯನ್ನು ಬಂದ್ ಮಾಡಲಾಯಿತು.

ಜನ ಸೇರುವುದನ್ನು ತಡೆದು ಉದ್ವಿಗ್ನತೆಯನ್ನು ನಿಯಂತ್ರಿಸಲು ಪೊಲೀಸರು ಬಿಗಿ ಭದ್ರತೆ ಕೈಗೊಂಡರು. ಸ್ಥಳಕ್ಕೆ ಬುಲ್ಡೋಜರ್ ತರಿಸಿ ಗುಲ್ಜಾರ್ ಅಹ್ಮದ್ ಗೆ ಸೇರಿದ ಅಂಗಡಿಯನ್ನು ಕೆಡವಿದರು.

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆಯ ಪ್ರಮುಖ ಶೂಟರ್‌ ಅರೆಸ್ಟ್‌; ಹೊಂಚುಹಾಕಿ ಟೋಲ್‌ ಪ್ಲಾಜಾದಲ್ಲಿ ಸೆರೆ ಹಿಡಿದ ಸಿಬಿಐ ಅಧಿಕಾರಿಗಳು

ಮೇ 11ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದರು. ಇದೀಗ ಆಕೆ ಚೇತರಿಸಿಕೊಂಡಿದ್ದು, ಗುಲ್ಜಾರ್ ಅಹ್ಮದ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಅಪಹರಣ ಆರೋಪ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.