S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ
S Janaki: ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಭಾರತೀಯ ಸಂಗೀತಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಶ್ಲಾಘಿಸಿ ದೇಶಾದ್ಯಂತದಿಂದ ಅವರಿಗೆ ಅನೇಕ ಗೌರವಗಳು ಬರುತ್ತಿವೆ. ಪ್ರಧಾನಿ ಮೋದಿ ಎಸ್. ಜಾನಕಿಯವರ ನಿಧನವನ್ನು 'ಭರಿಸಲಾಗದ ನಷ್ಟ' ಎಂದು ಕರೆದಿದ್ದಾರೆ.
ಎಸ್ ಜಾನಕಿ -
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 88 ವರ್ಷದ ದಂತಕಥೆ ಎಸ್ ಜಾನಕಿ (S Janaki) ಅಮ್ಮ ಅವರು ಮೈಸೂರಿನಲ್ಲಿ ಶನಿವಾರ (ಜು 11) ಕೊನೆಯುಸಿರೆಳೆದಿದ್ದಾರೆ. ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಭಾರತೀಯ ಸಂಗೀತಕ್ಕೆ (Indian Music) ಅವರು ನೀಡಿದ ಅಪಾರ ಕೊಡುಗೆಗಳನ್ನು ಶ್ಲಾಘಿಸಿ ದೇಶಾದ್ಯಂತದಿಂದ ಅವರಿಗೆ ಅನೇಕ ಗೌರವಗಳು ಬರುತ್ತಿವೆ. ಪ್ರಧಾನಿ ಮೋದಿ (Narendra Modi) ಎಸ್. ಜಾನಕಿಯವರ ನಿಧನವನ್ನು 'ಭರಿಸಲಾಗದ ನಷ್ಟ' ಎಂದು ಕರೆದಿದ್ದಾರೆ.
ಹೃತ್ಪೂರ್ವಕ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೃತ್ಪೂರ್ವಕ ಸಂದೇಶದ ಮೂಲಕ ಹಿರಿಯ ಗಾಯಕಿಗೆ ಗೌರವ ಸಲ್ಲಿಸಿದ್ದಾರೆ. "ಪ್ರತಿಭಾನ್ವಿತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿ ಅವರ ಹಾಡುಗಳು ತಲೆಮಾರುಗಳಿಂದ ಜನಪ್ರಿಯವಾಗಿದ್ದವು. ಅವರು ಪ್ರತಿ ಭಾವನೆಗೂ ಅಪ್ರತಿಮ ಸೊಬಗು ಮತ್ತು ಬಹುಮುಖತೆಯಿಂದ ಧ್ವನಿ ನೀಡಿದರು.
ಇದನ್ನೂ ಓದಿ: Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್! ಶಿವಣ್ಣ ಕಷ್ಟದ ದಿನಗಳ ಸಂಪೂರ್ಣ ಚಿತ್ರವಿದು
ಅವರ ಮಧುರ ಸಂಗೀತವು ಮುಂಬರುವ ವರ್ಷಗಳಲ್ಲಿ ಕೇಳುಗರನ್ನು ಮೋಡಿ ಮಾಡುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಸಂಖ್ಯಾತ ಅಭಿಮಾನಿಗಳು ಮತ್ತು ಇಡೀ ಸಂಗೀತ ಭ್ರಾತೃತ್ವಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ಭಾರತದ ಗಾನ ಕೋಗಿಲೆ ಗಾನ ನಿಲ್ಲಿಸಿದ್ದು ಎಸ್. ಜಾನಕಿ ನಿಧನಕ್ಕೆ ಬಹಳಷ್ಟು ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತ ಲೋಕದಲ್ಲಿ ಮೌನ ಆವರಿಸಿದೆ.
The passing of the distinguished playback singer S. Janaki Amma is an irreparable loss to the world of music and culture. Her songs in various languages were popular across generations. They gave voice to every emotion with unparalleled grace as well as versatility. Her melodies…
— Narendra Modi (@narendramodi) July 12, 2026
ಮೈಸೂರಿನ ಬೋಗಾದಿ ಮನೆಯಲ್ಲಿ ಪಾರ್ಥಿವ ಶರೀರವಿದ್ಧು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇಂದು ಮೈಸೂರಿನಲ್ಲಿ S. ಜಾನಕಿ ಅಂತ್ಯಸಂಸ್ಕಾರ ನಡೆಯಲಿದ್ದು ಮೈಸೂರಿನ ತೋಟದ ಮನೆಯಲ್ಲಿ ವಿಧಿ ವಿಧಾನ ನಡೆಯಲಿದೆ. ಕಣಿಯನಹುಂಡಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.
ಸುಮಾರು 6 ವರ್ಷಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದ ಎಸ್‌ಪಿಬಿ ಮತ್ತು ಈಗ ಜಾನಕಮ್ಮ ಇಬ್ಬರೂ ಸಂಗೀತ ಲೋಕದಲ್ಲಿ ಸೃಷ್ಟಿಸಿದ ಮೋಡಿ ಅನನ್ಯವಾದುದು. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶ-ವಿದೇಶಗಳ ಅಭಿಮಾನಿಗಳು ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಜಾನಕಿ ಅಮ್ಮನ ಧ್ವನಿ ಹೇಗೆ ಎಲ್ಲರನ್ನೂ ತಲುಪಿತ್ತು ಎಂಬುದನ್ನು ನೆಟ್ಟಿಗರು ನೆನೆದಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್. ಜಾನಕಿ ಅವರು 1950ರ ದಶಕದಲ್ಲಿಯೇ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಸುಮಾರು ಆರು ದಶಕಗಳ ಕಾಲ ಸುದೀರ್ಘವಾಗಿ ಗಾಯನ ವೃತ್ತಿಜೀವನ ನಡೆಸಿದ ಅವರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟು 45 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: 6 ತಿಂಗಳ ಹಿಂದಷ್ಟೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದ ಎಸ್. ಜಾನಕಿ; ಇಳಿವಯಸ್ಸಿನಲ್ಲಿ ಕಾಡಿತೇ ಪುತ್ರಶೋಕ?
2016ರಲ್ಲಿ ಅವರು ಮಲಯಾಳಂ ಸಿನಿಮಾವೊಂದಕ್ಕಾಗಿ ಹಾಡಿದ 'ಅಮ್ಮಪೂವಿನುಮ್...' ಅವರ ವೃತ್ತಿಜೀವನದ ಅಧಿಕೃತ ಕೊನೆಯ ಗೀತೆಯಾಗಿದೆ.