ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಸೀದಿಯೊಳಗೆ ಮುಸ್ಲಿಂ ಧರ್ಮಗುರು, ಸಹಾಯಕನಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೊ ಚಿತ್ರೀಕರಿಸಿ ಬೆದರಿಕೆ

Crime News: ಮಗನಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಸೀದಿ ಒಳಗೆ ಕರೆದೊಯ್ದು ಮುಸ್ಲಿಂ ಧರ್ಮಗುರು ಮತ್ತು ಆತನ ಸಹಾಯಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮುಸ್ಲಿಂ ಧರ್ಮಗುರು, ಸಹಾಯಕನಿಂದ ಮಹಿಳೆ ಮೇಲೆ ಅತ್ಯಾಚಾರ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Apr 19, 2026 4:09 PM

ಲಖನೌ, ಏ. 19: ಉತ್ತರ ಪ್ರದೇಶದಲ್ಲಿ ನಡೆದ ಪೈಶಾಚಿಕ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ದೇಶವೇ ಬೆಚ್ಚಿ ಬಿದ್ದಿದೆ (Uttar Pradesh Horror). ಮಗನಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಸೀದಿ ಒಳಗೆ ಕರೆದೊಯ್ದು ಮುಸ್ಲಿಂ ಧರ್ಮಗುರು ಮತ್ತು ಆತನ ಸಹಾಯಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಧಾರ್ಮಿಕ ಕಾರ್ಯ ನಡೆಯಬೇಕಾದ ಪವಿತ್ರ ಸ್ಥಳದಲ್ಲಿ ಅನಾಚಾರ ನಡೆದಿದ್ದು, ಮಹಿಳೆ ದೂರು ನೀಡುವ ಮೂಲಕ ಈ ಕೃತ್ಯ ಬೆಳಕಿಗೆ ಬಂದಿದೆ. ಏಪ್ರಿಲ್‌ 15ರಂದು ಈ ಘಟನೆ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ಅಮಾನುಷ ಘಟನೆ ನಡೆದಿದೆ. ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಕೃತ್ಯವನ್ನು ಚಿತ್ರೀಕರಿಸಿ ಎಲ್ಲೂ ಬಾಯ್ಬಿಡದಂತೆ ಪಾಪಿಗಳು ಬೆದರಿಕೆ ಒಡ್ಡಿರುವುದೂ ಗೊತ್ತಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

180 ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಬಂಧನ

ಘಟನೆ ವಿವರ

ಮಗನ ಕಾಯಿಲೆ ಬಗ್ಗೆ ತಿಳಿದ ಮುಸ್ಲಿಂ ಧರ್ಮಗುರು ಸಹಾಯಕನ್ನು ಕಳುಹಿಸಿ ಗುಣಪಡಿಸುವ ಭರವಸೆ ನೀಡಿ ತನ್ನನು ಮಸೀದಿ ಒಳಗೆ ಕರೆದುಕೊಂಡು ಹೋಗಿದ್ದಾಗಿ ಮಹಿಳೆ ಹೇಳಿದ್ದಾರೆ. ʼʼಧರ್ಮುಗುರುವಿನ ಸಹಾಯಕ ನನ್ನ ಬಳಿಗೆ ಬಂದು ಧರ್ಮಗುರು ಮಗುವಿನ ಕಾಯಿಲೆ ಗುಣಪಡಿಸುತ್ತಾರೆ ಎಂದು ಭರವಸೆ ನೀಡಿದ್ದ. ಆತನ ಮಾತು ನಂಬಿ ಮಗನನ್ನು ಕರೆದುಕೊಂಡು ಮಸೀದಿ ಒಳಗೆ ಹೋಗಿದ್ದೆʼʼ ಎಂದು ಹೇಳಿದ್ದಾರೆ.

ಮಸೀದಿ ಒಳ ಹೊಕ್ಕ ಬಳಿಕ ನಡೆದಿದ್ದೇ ಘೋರ ಕೃತ್ಯ. ಒಳಹೋಗುತ್ತಿದ್ಧಂತೆ ಮಹಿಳೆ ಮತ್ತು ಅವರ ಮಗನಿಗೆ ಅಮಲು ಪದಾರ್ಥ ಸೇರಿಸಿದ್ದ ನೀರು ಕುಡಿಯಲು ಕೊಟ್ಟರು. ನೀರಾಗಿದ್ದರಿಂದ ಇಬ್ಬರಿಗೂ ಯಾವುದೇ ಅನುಮಾನ ಬರಲಿಲ್ಲ. ಅದನ್ನು ಸೇವಿಸುತ್ತಿದ್ದಂತೆ ತಾಯಿ-ಮಗ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು.

ಬಳಿಕ ಧರ್ಮುಗುರು ಮತ್ತು ಆತನ ಸಹಾಯ ಮಹಿಳೆ ಮೇಲೆ ಎರಗಿದರು. ಇಬ್ಬರೂ ಸಾಮೂಹಿಕ ಅತ್ಯಾಚರ ಎಸಗಿದ್ದಲ್ಲದೇ ಈ ಕೃತ್ಯವನ್ನು ಚಿತ್ರೀಕರಿಸಿದರು. ಪ್ರಜ್ಞೆ ಮರಳಿ ಬಂದಾಗ ಮಹಿಳೆಗೆ ತನ್ನ ಮೇಲೆ ನಡೆದ ದೌರ್ಜನ್ಯ ಗೊತ್ತಾಯಿತು. ಈ ಬಗ್ಗೆ ಪ್ರಶ್ನಿಸಲು ಮುಂದಾಗ ವಿಡಿಯೊ ತೋರಿಸಿ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ಯಾರ ಬಳಿಯಲ್ಲಾದರೂ ಹೇಳಿದರೆ ವಿಡಿಯೊ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ವಿವರಿಸಿದರು.

ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಶಂಕೆ: ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದು ಕೊಂದ ಗ್ರಾಮಸ್ಥರು

ಪೊಲೀಸರಿಂದಲೂ ಅಸಹಕಾರ

ಹೀಗೆ ಭಯದಲ್ಲೇ ದಿನ ಕಳೆದು ಬಳಿಕ ಧೈರ್ಯ ಮಾಡಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೆ ಪೊಲೀಸರು ಸಹಕಾರ ನೀಡಲಿಲ್ಲ ಎಂದು ಮಹಿಳೆ ಹೇಳಿದರು. ದೂರು ಸ್ವೀಕರಿಸದ ಪೊಲೀಸರು ಕೂಡ ಈ ಬಗ್ಗೆ ಮೌನವಾಗಿರುವಂತೆ ಸೂಚಿಸಿದ್ದಾರೆ ಎಂದರು. ಕೊನೆಗೆ ಮಹಿಳೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಇದೀಗ ಅವರು ಕ್ರಮದ ಭರವಸೆ ನೀಡಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.