ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿವೃತಿಯ ಅಂಚಿನಲ್ಲಿರುವ ವಿಶೇಷ ಚೇತನ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ವಿಶೇಷ ಚೇತನ ಶಿಕ್ಷಕನೊಬ್ಬ ಶಾಲಾ ಕ್ಯಾಂಪಸ್ ನಲ್ಲಿ ಸುಮಾರು ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಜರಾತ್ ನ ಉಪ್ಲೆಟಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪ್ರಕರಣದ ಆರೋಪಿ ಶಿಕ್ಷಕ ದೇವಾನಂದ್ ಬೇರಾ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಚೇತನ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ಸಂಗ್ರಹ ಚಿತ್ರ -

ಗುಜರಾತ್: ಸರ್ಕಾರಿ ಶಾಲೆಯ (government primary school teacher) ವಿಶೇಷ ಚೇತನ ಶಿಕ್ಷಕನೊಬ್ಬ (Specially abled teacher) ಹಲವಾರು ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಗುಜರಾತ್ (gujarat)ನ ಉಪ್ಲೆಟಾದಲ್ಲಿ ನಡೆದಿದೆ. ಶಾಲೆಯ ಕ್ಯಾಂಪಸ್ ನಲ್ಲಿ ಶಿಕ್ಷಕ ಹಲವಾರು ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ (crime news) ಎಸಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಯೊಬ್ಬಳು ಈ ಕುರಿತು ಪೋಷಕರ ಬಳಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿ ಶಿಕ್ಷಕ ದೇವಾನಂದ್ ಬೇರಾ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು ಒಂದು ವರ್ಷದಿಂದ ಉಪ್ಲೆಟಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ದೇವಾನಂದ್ ಶಾಲಾ ಕ್ಯಾಂಪಸ್ ಆವರಣದಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಆತನನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಮಣಿಪುರದಲ್ಲಿ ಉದ್ವಿಗ್ನತೆ; ಅಪಹರಿಸಿ 3 ತಿಂಗಳ ನಂತರ ಪತ್ತೆಯಾಯ್ತು 6 ನಾಗಾ ಒತ್ತೆಯಾಳುಗಳ ಮೃತದೇಹ!

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಉಪ್ಲೆಟಾದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಿಕ್ಷಕನಾಗಿರುವ ದೇವಾನಂದ್ ಬೇರಾ ದೈಹಿಕವಾಗಿ ಅಂಗವಿಕಲನಾಗಿದ್ದ ಮಾತ್ರವಲ್ಲದೆ ನಿವೃತ್ತಿಗೆ ಸಮೀಪವಾಗಿದ್ದನು. ಆತ ಕಳೆದ ಒಂದು ವರ್ಷದಿಂದ ಶಾಲಾ ಆವರಣದೊಳಗೆ ಹಲವಾರು ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ತಿಳಿಸಿದ್ದಾರೆ.

2025ರ ಜೂನ್ 28ರಿಂದ 2026ರ ಮೇ 2ರ ನಡುವೆ ಆತ ಹಲವಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿದ್ಯಾರ್ಥಿಗಳ ಮುಗ್ಧತೆಯ ಲಾಭವನ್ನು ಪಡೆದುಕೊಂಡು ಅವರೊಂದಿಗೆ ಅನುಚಿತ ಸಂಪರ್ಕ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಘಟನೆಯ ಕುರಿತು ಒಬ್ಬ ವಿದ್ಯಾರ್ಥಿನಿ ತನ್ನ ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಳಿಕ ಹಲವು ಪೋಷಕರು ತಮ್ಮ ಮಕ್ಕಳ ಮೇಲೂ ಆತ ಇದೇ ರೀತಿಯ ದೌರ್ಜನ್ಯ ಎಸಗಿರುವುದಾಗಿ ತಿಳಿಸಿದ್ದಾನೆ. ಈ ಘಟನೆಯು ಪೋಷಕರು ಮತ್ತು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Bengaluru theft case: ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ 25 ಲಕ್ಷ ರೂ. ಕಳ್ಳತನ; ನೇಪಾಳ ಮೂಲದ ಚಾಲಾಕಿ ದಂಪತಿ ಅರೆಸ್ಟ್

ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿರುವ ಪತನ್ವಾವ್ ಠಾಣೆ ಪೊಲೀಸರು, ಸಂತ್ರಸ್ತರು ಮತ್ತು ಅವರ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಮತ್ತು ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಲೆಯಲ್ಲಿ ಸಿಸಿಟಿವಿ ಕೆಮರಾ ಇಲ್ಲದೇ ಇರುವುದರಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.