ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾನ್ಪುರದಲ್ಲಿ ವಿಮಾನ ಅಪಘಾತ: ಇಬ್ಬರು ಪೈಲಟ್‌ಗಳ ದುರ್ಮರಣ

ಉತ್ತರಪ್ರದೇಶದ ಕಾನ್ಪುರದಲ್ಲಿ ವಿಮಾನ ಅಪಘಾತವಾಗಿದ್ದು ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ. ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ಅವಳಿ ಎಂಜಿನ್ ತರಬೇತಿ ವಿಮಾನ ಗುರುವಾರ ಅಪಘಾತಕ್ಕೀಡಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದು ದೃಢಪಟ್ಟಿಲ್ಲ. ವಿಮಾನ ನಿಯಂತ್ರಣ ಕಳೆದುಕೊಂಡ ಭೂಮಿಗೆ ಅಪ್ಪಳಿಸಿದೆ ಎನ್ನಲಾಗಿದೆ.

ವಿಮಾನ ಅಪಘಾತ:  ಪೈಲಟ್‌ಗಳಿಬ್ಬರು ಸಾವು

ಸಂಗ್ರಹ ಚಿತ್ರ -

ಕಾನ್ಪುರ: ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿ (Plane crash) ಪೈಲೆಟ್ ಮತ್ತು ಸಹ ಪೈಲೆಟ್ ಇಬ್ಬರೂ ಸಾವನ್ನಪ್ಪಿರುವ (pilots dead in plane crash) ಘಟನೆ ಗುರುವಾರ ಉತ್ತರಪ್ರದೇಶದ ಕಾನ್ಪುರದಲ್ಲಿ (Kanpur plane crash) ನಡೆದಿದೆ. ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ನಿಯಂತ್ರಣ ಕಳೆದುಕೊಂಡ ವಿಮಾನ ಭೂಮಿಗೆ ಅಪ್ಪಳಿಸಿದೆ. ಅವಳಿ ಎಂಜಿನ್ ತರಬೇತಿ ವಿಮಾನ ಇದಾಗಿದೆ. ವಿಮಾನ ಅಪಘಾಕ್ಕೀಡಾದ ಮಾಹಿತಿ ತಿಳಿದ ತಕ್ಷಣವೇ ತುರ್ತು ಸೇವೆ ತಂಡಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ನೇಪಾಳ ಜಲಸ್ಫೋಟ; ಕರ್ನಾಟಕದ ಇಬ್ಬರು ನಿವಾಸಿಗಳ ರಕ್ಷಣೆ

ಕಾನ್ಪುರದ ಗಂಗಾ ನದಿಯ ದಡದ ಬಳಿ ವಿಮಾನ ಅಪಘಾತಕ್ಕೀಡಾಗಳು ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೈಲೆಟ್ ಗಾಲ ನಿಯಂತ್ರಣ ಕಳೆದುಕೊಂಡ ತರಬೇತಿ ವಿಮಾನ ಭೂಮಿಗೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಎರಡು ಎಂಜಿನ್‌ಗಳ ನಾಲ್ಕು ಆಸನಗಳನ್ನು ಹೊಂದಿದ್ದ ತರಬೇತಿ ವಿಮಾನದಲ್ಲಿ ಬೋಧಕ ಪೈಲಟ್ ಮತ್ತು ತರಬೇತಿ ಪೈಲಟ್ ಗಳಿಬ್ಬರು ಮಾತ್ರ ಇದ್ದರು. ಇವರಿಬ್ಬರು ಕೂಡ ಸಾವನ್ನಪ್ಪಿದ್ದಾರೆ. ವಿಮಾನವು ಸಿವಿಲ್ ಏರೋಡ್ರೋಮ್‌ನಿಂದ ಹಾರುವ ಶಾಲೆಯನ್ನು ನಿರ್ವಹಿಸುವ ಗಾರ್ಗ್ ಏವಿಯೇಷನ್‌ಗೆ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಕಳೆದ ಜೂನ್‌ನಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ಎರಡು ಆಸನಗಳ ತರಬೇತಿ ವಿಮಾನವು ಹೊಲಕ್ಕೆ ಅಪ್ಪಳಿಸಿತ್ತು. ಈ ವಿಮಾನವು ಅಲಿಗಢ ವಿಮಾನ ನಿಲ್ದಾಣದಿಂದ ಹೊರಟು ಕಾಸ್ಗಂಜ್ ಜಿಲ್ಲಾ ಪ್ರಧಾನ ಕಚೇರಿ ಪ್ರದೇಶದ ಪೊಲೀಸ್ ಲೈನ್ಸ್ ಬಳಿ ಪತನಗೊಂಡಿತ್ತು. ಪತನಗೊಳ್ಳುವ ಮೊದಲು ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಕ್ಕಿಯಾಗಿತ್ತು. ಇದರ ಪ್ರಾಥಮಿಕ ತನಿಖೆಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿತ್ತು ಎಂಬುದು ತಿಳಿದು ಬಂದಿದೆ.

ಈ ಅಪಘಾತದಲ್ಲಿ ಗಾಯಗೊಂಡ ತರಬೇತಿ ಪೈಲೆಟ್ ಮಹಾರಾಷ್ಟ್ರದ ಕೈನಾತ್ ಖಾನ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿ ಅವರು ಮಾತ್ರ ಇದ್ದರು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಓ.ಪಿ. ಸಿಂಗ್, ವಿಮಾನವು ಇಲ್ಲಿ ಹಾರುತ್ತಿದ್ದಾಗ ಇದ್ದಕ್ಕಿದ್ದಂತೆ ಎತ್ತರ ಕಳೆದುಕೊಂಡು ಹೊಲಕ್ಕೆ ಅಪ್ಪಳಿಸಿತು. ಇದಕ್ಕೂ ಮೊದಲು ಅದು ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಡಿಕ್ಕಿ ಹೊಡೆದು, ತಂತಿ ತುಂಡಾಗಿ ವಿಮಾನಕ್ಕೆ ಅಪಾರ ಹಾನಿಯಾಗಿದೆ. ವ್ಯಾಪಕ ಹಾನಿಯಾಯಿತು ಎಂದರು.

ಇದಕ್ಕೂ ಮೊದಲು ಮೇ ತಿಂಗಳಿನಲ್ಲಿ ರೆಡ್‌ಬರ್ಡ್ ಫ್ಲೈಟ್ ತರಬೇತಿ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಮಹಾರಾಷ್ಟ್ರದ ಬಾರಾಮತಿಯ ಗೋಜುಬಾವಿ ಗ್ರಾಮದ ಬಳಿ ಕಠಿಣ ಭೂಸ್ಪರ್ಶ ಮಾಡಿತು.

ದಿಢೀರ್ ಪ್ರವಾಹದಲ್ಲಿ 300 ಕ್ಕೂ ಹೆಚ್ಚು ಭಾರತೀಯರು ನಾಪತ್ತೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಈ ಕುರಿತು ಮಾಹಿತಿ ನೀಡಿದ್ದ ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ , ಇದು ಅಪಘಾತವಲ್ಲ. ಇಳಿಯುವಾಗ, ವಿಮಾನವು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪೈಲಟ್ ವಿಮಾನದಲ್ಲಿ ಒಬ್ಬರೇ ಇದ್ದರು. ಅವರು ಸುರಕ್ಷಿತವಾಗಿದ್ದಾರೆ ಎಂದರು.