ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ಬಳಿಕ ಹಿಮಂತ ಬಿಸ್ವಾ ಶರ್ಮಾ ಮೇಲೆ ದಾಳಿಗೆ ಸಂಚು? ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗುಂಡುಗಳೊಂದಿಗೆ ಬಂದಿದ್ದ ವ್ಯಕ್ತಿಯ ಬಂಧನ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಕ್ತಿಯೊಬ್ಬ ಮದ್ದುಗುಂಡುಗಳೊಂದಿಗೆ ಆಗಮಿಸಿದ್ದು, ಆತನನ್ನು ತಕ್ಷಣವೇ ಬಂಧಿಸಲಾಗಿದೆ. ಪಶುವೈದ್ಯಕೀಯ ಕಾಲೇಜು ಮೈದಾನದ ಪ್ರವೇಶದ್ವಾರದಲ್ಲಿ ಸ್ಕ್ರೀನಿಂಗ್ ಸಮಯದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆಗಾಗಿ ಆತನನ್ನು ಬಸಿಷ್ಠ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

ಹಿಮಂತ ಬಿಸ್ವಾ ಶರ್ಮಾ ಮೇಲೆ ದಾಳಿಗೆ ಸಂಚು?

ಸಂಗ್ರಹ ಚಿತ್ರ -

ಅಸ್ಸಾಂ: ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ (Assembly election) ಗೆದ್ದು ಅಸ್ಸಾಂನ ಮುಖ್ಯಮಂತ್ರಿಯಾಗಿ (Assam CM) ಆಯ್ಕೆಯಾದ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರ ಪ್ರಮಾಣ ವಚನ (swearing ceremony) ಸ್ವೀಕಾರ ಸಮಾರಂಭಕ್ಕೆ ಮದ್ದುಗುಂಡುಗಳೊಂದಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಹಿಮಂತ ಬಿಸ್ವಾ ಶರ್ಮಾ ಅವರ ಪ್ರಮಾಣ ವಚನ ಸಮಾರಂಭವನ್ನು ಮಂಗಳವಾರ ಗುವಾಹಟಿಯ (Guwahati) ಖಾನಪಾರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಮದ್ದುಗುಂಡುಗಳೊಂದಿಗೆ ಸಿಕ್ಕಿ ಬಿದ್ದಿದ್ದಾನೆ.

ಖಾನಪಾರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದ ಪ್ರವೇಶದ್ವಾರದಲ್ಲಿ ಭದ್ರತೆಗಾಗಿ ಪೊಲೀಸರು ಸ್ಕ್ರೀನಿಂಗ್ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮದ್ದು ಗುಂಡುಗಳೊಂದಿಗೆ ಪತ್ತೆಯಾಗಿದ್ದಾನೆ. ಆತನ ಬಳಿ ಕೆಲವು ಸುತ್ತಿನ ಜೀವಂತ ಗುಂಡುಗಳು ಸಿಕ್ಕಿವೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆನ್ನೈಯಿಂದ ಅಬುಧಾಬಿಗೆ ಹೊರಟಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ದುರಂತ

ಸತತ ಎರಡನೇ ಅವಧಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಇದಕ್ಕೂ ಮುನ್ನ ಮದ್ದು ಗುಂಡುಗಳೊಂದಿಗೆ ಪತ್ತೆಯಾದ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಬಸಿಷ್ಠ ಪೊಲೀಸ್ ಠಾಣೆಗೆ ಆತನನ್ನು ಕರೆದುಕೊಂಡು ಹೋಗಲಾಗಿದೆ. ಆತನಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗುವಾಹಟಿಯ ಖಾನಪಾರ ಪಶುವೈದ್ಯಕೀಯ ಮೈದಾನದ ಸುತ್ತಮುತ್ತ ಭದ್ರತಾ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಹಿಮಂತ ಅವರಿಗೆ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಡಗು ಸಚಿವೆ ಸರ್ಬಾನಂದ ಸೋನೋವಾಲ್ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, 40ಕ್ಕೂ ಹೆಚ್ಚು ಎನ್‌ಡಿಎ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

ಪ್ರಧಾನಿ ಹೆಸರಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೇಳಿದ ಉದ್ಯೋಗಿ: ಇಮೇಲ್ ಮೂಲಕ ಮನವಿ

ಹಿಮಂತ ಅವರೊಂದಿಗೆ ಬಿಜೆಪಿಯ ರಾಮೇಶ್ವರ್ ತೇಲಿ, ಅಜಂತಾ ನಿಯೋಗ್, ಎಜಿಪಿಯ ಅತುಲ್ ಬೋರಾ ಮತ್ತು ಬಿಪಿಎಫ್‌ನ ಚರಣ್ ಬೊರೊ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.