ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಹೆಸರಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೇಳಿದ ಉದ್ಯೋಗಿ: ಇಮೇಲ್ ಮೂಲಕ ಮನವಿ

Viral News: ಸುಪ್ರಿಯಾ ಎಂಬ ಉದ್ಯೋಗಿ ಎಚ್‌ಆರ್‌ಗೆ ಕಳುಹಿಸಿದ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಇಮೇಲ್‌ನಲ್ಲಿ ಆಕೆ ಉಲ್ಲೇಖಿಸಿದ್ದು ವರ್ಕ್ ಫ್ರಮ್‌ ಹೋಂ ಆಯ್ಕೆ ಕೇಳಿದ್ದಾರೆ.

ಪ್ರಧಾನಿ ಹೆಸರಿನಲ್ಲಿ 1 ವರ್ಷ ವರ್ಕ್‌ ಫ್ರಮ್‌ ಹೋಂ ಕೋರಿ ಉದ್ಯೋಗಿಯ ಇಮೇಲ್

ಪ್ರಧಾನಿ ನರೆಂದ್ರ ಮೋದಿ, 'WFH' ಕೇಳಿದ ಯುವತಿಯ ಇಮೇಲ್‌ನ ಸ್ಕ್ರೀನ್‌ ಶಾಟ್‌ -

Profile
Pushpa Kumari May 12, 2026 4:34 PM

ನವದೆಹಲಿ, ಮೇ 12: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯ ಬೆಂಬಲಿಸಿ ವರ್ಕ್ ಫ್ರಮ್ ಹೋಂಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದರು. ಈ ನಡುವೆ ಉದ್ಯೋಗಿಯೊಬ್ಬರು ಪ್ರಧಾನಿ ಹೆಸರು ಬಳಸಿ ವರ್ಕ್ ಫ್ರಮ್ ಹೋಂ ಆಯ್ಕೆ ಕೇಳುವ ಮೂಲಕ ಎಚ್‌ಆರ್‌ಗೆ ಮೇಲ್ ಕಳುಹಿಸಿದ್ದಾರೆ. ಸದ್ಯ ಈ ಪೋಸ್ಟ್ ಆನ್‌ಲೈನ್‌ನಲ್ಲಿ (Viral News) ಮೀಮ್ಸ್ ಮತ್ತು ಹಾಸ್ಯಾಸ್ಪದ ಪ್ರತಿಕ್ರಿಯೆ ಹುಟ್ಟುಹಾಕಿದೆ.

ಸುಪ್ರಿಯಾ ಎಂಬ ಉದ್ಯೋಗಿ ಎಚ್‌ಆರ್‌ಗೆ ಕಳುಹಿಸಿದ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಇಮೇಲ್‌ನಲ್ಲಿ ಆಕೆ ಉಲ್ಲೇಖಿಸಿದ್ದು ವರ್ಕ್ ಫ್ರಮ್‌ ಹೋಂ ಆಯ್ಕೆಯನ್ನು ಕೇಳಿದ್ದಾರೆ.

ʼʼದೇಶದಲ್ಲಿ ಇಂಧನ ಉಳಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅವರ ಈ ಮನವಿಗೆ ಕೊಡುಗೆ ನೀಡಲು ತಯಾರಿದ್ದೇನೆ. ನಾನು 2027ರ ಮೇ 10ರವರೆಗೆ ಮನೆಯಿಂದ ಕೆಲಸ ಮಾಡುತ್ತೇನೆ. ನನ್ನ ದೇಶಕ್ಕಾಗಿ ನಾನು ಮಾಡಬಹುದಾದ ಕನಿಷ್ಠ ಸೇವೆ ಇದುʼʼ ಎಂದು ಬರೆದುಕೊಂಡಿದ್ದಾರೆ. ಈ ಸ್ಕ್ರೀನ್‌ಶಾಟ್‌ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಅವರು, "ನಾನು ದೇಶಕ್ಕಾಗಿ ನನ್ನ ಪಾತ್ರವನ್ನು ಮಾಡಿದ್ದೇನೆ... ಈಗ ನಿಮ್ಮ ಸರದಿʼʼ ಎಂಬದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಈ ಬಗ್ಗೆ ನೆಟ್ಟಿಗರು ತಮಾಷೆಯ ಕಮೆಂಟ್ ಮಾಡಿದ್ದಾರೆ. ʼʼಆತ್ಮೀಯ ಸುಪ್ರಿಯಾ, ನೀವು ಮೋದಿ ಜಿ ಅವರಿಂದ ನಿಮ್ಮ ಸಂಬಳವನ್ನು ಕೇಳಬಹುದು ಎಂದು ನಿಮಗೆ ತಿಳಿಸಲು ಈ ಸಂದೇಶ. ಧನ್ಯವಾದಗಳು, ಶುಭಾಶಯಗಳು, ನಿಮ್ಮ ಎಚ್‌ಆರ್‌," ಎಂದು ಒಬ್ಬರು ತಮಾಷೆ ಮಾಡಿದ್ದಾರೆ.‌ ಮತ್ತೊಬ್ಬರು, ʼʼವರ್ಕ್ ಫ್ರಮ್ ಹೋಂ ಕೇಳಲು ಹೋಗಿ ಕೆಲಸ ಕಳೆದುಕೊಳ್ಳಬೇಡಿʼʼ ಎಂದು ಬರೆದಿದ್ದಾರೆ. ಇರಾನ್ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿ ರಾಜಕೀಯ ಉದ್ವಿಗ್ನತೆಯ ನಡುವೆ ಅಮೆರಿಕ ಮತ್ತು ಪಾಕಿಸ್ತಾನ ಸೇರಿ ಹಲವು ದೇಶಗಳು ಇಂಧನ ಬೆಲೆಯನ್ನು ದಾಖಲೆಯ ಮಟ್ಟಕ್ಕೆ ಏರಿಸಿವೆ.‌