ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಕ್ಕಳಿಲ್ಲದ ಮಹಿಳೆಗೆ ಆಶೀರ್ವಾದ ಮಾಡುವುದಾಗಿ ಮಂಗಳಮುಖಿಯಂತೆ ನಟಿಸಿ ಫ್ಲಾಟ್ ಗೆ ನುಗ್ಗಿ ಅತ್ಯಾಚಾರವೆಸಗಿದ ಕಾಮುಕ

ಮಕ್ಕಳಿಲ್ಲದ ಮಹಿಳೆಗೆ ಆಶೀರ್ವಾದ ಮಾಡುವುದಾಗಿ ಬುಧವಾರ ಮಂಗಳಮುಖಿಯಂತೆ ನಟಿಸಿ ಬಂದ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿ, 2,000 ರೂಪಾಯಿಯನ್ನು ಕಸಿದುಕೊಂಡು ಪರಾರಿಯಾಗಿದ್ದ ಘಟನೆ ಮುಂಬೈಯಲ್ಲಿ ನಡೆದಿದೆ. ಆರೋಪಿಯನ್ನು ಅನಿಲ್ ಶಿಂಧೆ (30) ಎಂದು ಗುರುತಿಸಲಾಗಿದ್ದು, ಘಟನೆ ನಡೆದ ದಿನವೇ ರಾತ್ರಿ ಬಂಧಿಸಲಾಗಿದೆ.

ಮಂಗಳಮುಖಿಯಂತೆ ನಟಿಸಿ ಮಹಿಳೆ ಮೇಲೆ ಅತ್ಯಾಚಾರ

ಸಂಗ್ರಹ ಚಿತ್ರ -

ಮುಂಬೈ: ಮಂಗಳಮುಖಿಯಂತೆ ನಟಿಸಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ (physically abuse case) ನಡೆಸಿರುವ ಘಟನೆ ಮುಂಬೈಯಲ್ಲಿ (Mumbai crime) ನಡೆದಿದೆ. ಮಕ್ಕಳಿಲ್ಲದ ಮಹಿಳೆಗೆ ಆಶೀರ್ವಾದ ಮಾಡುವುದಾಗಿ ಹೇಳಿಕೊಂಡು ಮಂಗಳಮುಖಿಯಂತೆ (transgender) ನಟಿಸಿ ಬಂದ ಅನಿಲ್ ಶಿಂಧೆ (30) ಎಂಬಾತ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯಿಂದ 2,000 ರೂಪಾಯಿಯನ್ನು ಕಸಿದುಕೊಂಡು ಪರಾರಿಯಾಗಿದ್ದನು. ಘಟನೆ ನಡೆದ ದಿನ ರಾತ್ರಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮುಂಬೈನ (mumbai crime) ಪೊವೈನಲ್ಲಿ ನಡೆದಿದೆ.

ಮಂಗಳಮುಖಿಯಂತೆ ನಟಿಸಿ ಬಂದ ಅನಿಲ್ ಶಿಂಧೆ ಎಂಬಾತ ಪೊವೈನ ವಸತಿ ಕಟ್ಟಡದಲ್ಲಿ ವಾಸವಾಗಿದ್ದ ಮಹಿಳೆಯೇ ಮಗು ಕರುಣಿಸುವ ವಿಧಿವಿಧಾನಗಳನ್ನು ಮಾಡುವುದಾಗಿ ಹೇಳಿ ಬಂದಿದ್ದಾನೆ. ಇದನ್ನು ನಂಬಿದ ಮಹಿಳೆ ಆತನನ್ನು ಮನೆಯೊಳಗೆ ಕರೆದುಕೊಂಡು ಬಂದಿದ್ದು,ಬಳಿಕ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸಂಸದ ಲಿಂಗಮನೇನಿ ರಮೇಶ್ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ: ಮಹಿಳೆ ಸಾವು

ಮಂಗಳಮುಖಿಯರಂತೆ ಮಹಿಳೆಯರ ಬಟ್ಟೆಗಳನ್ನು ಧರಿಸಿದ ಅನಿಲ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 2,000 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಪೊಲೀಸರು ಕಟ್ಟಡದ ಸಮೀಪದಿಂದ ಆತ ಪಡೆದುಕೊಂಡಿದ್ದ ಆಟೋ ರಿಕ್ಷಾವನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಅದೇ ದಿನ ರಾತ್ರಿ ಕಲ್ವಾದಲ್ಲಿ ಬಂಧಿಸಿದ್ದಾರೆ.

ಪತಿ ಮತ್ತು ವೃದ್ಧ ಸಂಬಂಧಿಯೊಂದಿಗೆ ಪೊವೈನಲ್ಲಿ ಮಹಿಳೆ ವಾಸಿಸುತ್ತಿದ್ದು, ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಬುಧವಾರ ಮಧ್ಯಾಹ್ನ ಶಿಂಧೆ ಮಹಿಳೆಯಂತೆ ವೇಷ ಧರಿಸಿ ಅವರಿದ್ದ ಫ್ಲಾಟ್‌ಗೆ ಬಂದಿದ್ದನು. ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದು, ವೃದ್ಧ ವ್ಯಕ್ತಿ ಆತನನ್ನು ಮನೆಯೊಳಗೇ ಬಂದು ಮಹಿಳೆಗೆ ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದರು.

ಮಹಿಳೆಯೊಂದಿಗೆ ಕೆಲವು ನಿಮಿಷಗಳ ಕಾಲ ಮಾತನಾಡಿದ ಆತ ಆಕೆಯನ್ನು ಹಾಸಿಗೆಯ ಮೇಲೆ ಮಲಗುವಂತೆ ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆಕೆಯಿಂದ 2,000 ರೂ. ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸುಮಾರು ಒಂದು ಗಂಟೆಯ ಬಳಿಕ ಆಕೆಯ ಪತಿ ಮನೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದರು.

ನಿಷೇಧಿತ ವಸ್ತು ಸೇವಿಸಿ ಹದಿಹರೆಯದ ಬಾಲಕ ಸಾವು: ಮೀಶೋ ವಿರುದ್ಧ ಎಫ್‌ಐಆರ್ ದಾಖಲು

ಈ ಕುರಿತು ಪೊವೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಜಾಲಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದರು. ತನಿಖೆ ವೇಳೆ ಆತ ಮಂಗಳಮುಖಿಯಲ್ಲ ಎಂಬುದು ತಿಳಿದು ಬಂದಿದೆ. ಶಿಂಧೆಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.