ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಂಡಾದ ಖಾಸಗಿ ಅಂಗ, ರೂಮಲ್ಲಿ ರಕ್ತಸಿಕ್ತ ಗ್ರೈಂಡರ್‌: ಪ್ರೇಮಾನಂದ ಮಹಾರಾಜ್‌ ಶಿಷ್ಯನ ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ

Deepak Lodhi: ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ನಾಯಕ ಸಂತ ಪ್ರೇಮಾನಂದ ಮಹಾರಾಜ್‌ ಅವರ ಶಿಷ್ಯ ರಸಿಕ್‌ ದುಲಾರಿ ಆಲಿಯಾಸ್‌ ದೀಪಕ್‌ ಲೋಧಿ ಅವರ ಸಾವಿಗೆ ಮಹತ್ವದ ತಿರುವು ಸಿಕ್ಕಿದೆ. ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಬೆಚ್ಚಿ ಬೀಳಿಸುವ ವಿಚಾರಗಳಿದ್ದು, ಸಾವಿನ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಪ್ರೇಮಾನಂದ ಮಹಾರಾಜ್‌ ಶಿಷ್ಯನ ಸಾವಿಗೆ ಟ್ವಿಸ್ಟ್‌

ದೀಪಕ್‌ ಲೋಧಿ ಮತ್ತು ಆಶ್ರಮ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Sep 28, 2026 10:19 PM

ಲಖನೌ, ಸೆ. 28: ದೇಶವನ್ನೇ ಬೆಚ್ಚಿ ಬೀಳಿಸಿದ ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ನಾಯಕ, ಸಂತ ಪ್ರೇಮಾನಂದ ಮಹಾರಾಜ್‌ (Premanand Maharaj) ಅವರ ಶಿಷ್ಯ ರಸಿಕ್‌ ದುಲಾರಿ ಆಲಿಯಾಸ್‌ ದೀಪಕ್‌ ಲೋಧಿ (Deepak Lodhi) ಅವರ ಸಾವಿಗೆ ಮಹತ್ವದ ತಿರುವು ಸಿಕ್ಕಿದೆ. ಶುಕ್ರವಾರ (ಸೆಪ್ಟೆಂಬರ್‌ 25) ಉತ್ತರ ಪ್ರದೇಶದ ವೃಂದಾವನದಲ್ಲಿರುವ ಗುರು ಕೃಪಾ ಕುಂಜ್‌ ಆಶ್ರಮದ 4ನೇ ಮಹಡಿಯಿಂದ ಬಿದ್ದು ದೀಪಕ್‌ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಇದೀಗ ಈ ನಿಗೂಢ ಸಾವಿನ ಬಗ್ಗೆ ಹಲವು ಅನುಮಾನಾಸ್ಪದ ಅಂಶ ಬೆಳಕಿಗೆ ಬಂದಿದೆ. ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಬೆಚ್ಚಿ ಬೀಳಿಸುವ ವಿಚಾರಗಳಿದ್ದು, ಸಾವಿನ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಮಧ್ಯ ಪ್ರದೇಶದ ಜಬಲ್‌ಪುರ ಮೂಲದ ದೀಪಕ್‌ ಬಿದ್ದ ರಭಸಕ್ಕೆ ತಲೆಗೆ ಗಂಭಿರ ಗಾಯವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೀಪಕ್‌ ಲೋಧಿ ಕಟ್ಟಡದಿಂದ ಬಿದ್ದ ದೃಶ್ಯ:



ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿದೆ ಬೆಚ್ಚಿ ಬೀಳಿಸುವ ಅಂಶ

ಇದೀಗ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಪೊಲೀಸರ ಕೈ ಸೇರಿದ್ದು, ಹಲವು ಬೆಚ್ಚಿ ಬೀಳಿಸುವ ಅಂಶ ಬಹಿರಂಗಗೊಂಡಿದೆ. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗದಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ದೇಹದಿಂದ ಅಧಿಕ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದ್ದೇ ಸಾವಿಗೆ ಕಾರಣ ಎನ್ನುವುದು ಗೊತ್ತಾಗಿದೆ. ಅಲ್ಲದೆ ಅವರ ಖಾಸಗಿ ಅಂಗ ತುಂಡಾಗಿರುವುದು ಪತ್ತೆಯಾಗಿದೆ ಎಂದು ತನಿಖೆಯ ನೇತೃತ್ವ ವಹಿಸಿರುವ ಸಿಒ ಸಂದೀಪ್‌ ಕುಮಾರ್‌ ತಿಳಿಸಿದ್ದಾರೆ.

ಮಲಯಾಳಂ ನಟ ದಿಲೀಪ್‌ ಶಂಕರ್‌ ನಿಗೂಢ ಸಾವು-ಆತ್ಮಹತ್ಯೆ ಶಂಕೆ

ʼʼದೀಪಕ್ 4ನೇ ಮಹಡಿಯಿಂದ ಬಿದ್ದು ಗಾಯವಾಗಿದ್ದು, ಇದರಿಂದಾಗಿ ವಿಪರೀತ ರಕ್ತಸ್ರಾವವಾಗಿದೆ. ಆದಾಗ್ಯೂ ಅತಿಯಾದ ರಕ್ತಸ್ರಾವಕ್ಕೆ ನಿಖರ ಕಾರಣವನ್ನು ವೈದ್ಯಕೀಯ ತಜ್ಞರು ಮಾತ್ರವೇ ನಿರ್ಧರಿಸಲು ಸಾಧ್ಯʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಕ್ತಸಿಕ್ತ ಗ್ರೈಂಡರ್‌ ಪತ್ತೆ

ಆಶ್ರಮ ಪರಿಶೀಲನೆ ವೇಳೆ ದೀಪಕ್ ಅವರ ರೂಮ್‌ನಲ್ಲಿ ಟೈಲ್ ಕತ್ತರಿಸಲು ಬಳಸುವ ಗ್ರೈಂಡರ್‌ ಪತ್ತೆಯಾಗಿದೆ. ಆ ಯಂತ್ರದ ಮೇಲೆ ರಕ್ತದ ಕಲೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಸಿಒ ಸಂದೀಪ್ ಕುಮಾರ್ ಅವರ ಪ್ರಕಾರ, ಸಾವಿಗೂ ಮುನ್ನ ದೀಪಕ್ ತಮ್ಮ ಗುಪ್ತಾಂಗ ಕತ್ತರಿಸಲು ಈ ಯಂತ್ರವನ್ನು ಬಳಸಿರುವ ಸಾಧ್ಯತೆ ಇದೆ. ಈ ಗಾಯದ ಸ್ವರೂಪ ಮತ್ತು ಸಾವಿನ ಸಂದರ್ಭದ ನಡುವಿನ ಸಂಬಂಧವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸ್ವತಃ ಮಾಡಿಕೊಂಡರೆನ್ನಲಾದ ಆ ಗಾಯದ ಹಿಂದಿನ ಸನ್ನಿವೇಶಗಳ ಕುರಿತೂ ತನಿಖೆ ನಡೆಯುತ್ತಿದೆ. ಅವರು ಸ್ವತಃ ಗಾಯ ಮಾಡಿಕೊಂಡಿದ್ದೇಕೆ ಎನ್ನುವ ಬಗ್ಗೆ ಸಂಶಯ ಮೂಡಿದೆ.

ಅಮೆರಿಕನ್‌ ಐಡಲ್ ರಿಯಾಲಿಟ್‌ ಶೋ ಖ್ಯಾತಿಯ ರಾಬಿನ್ ಕೇಯ್ ದಂಪತಿ ನಿಗೂಢ ಸಾವು-ಕೊಲೆ ಶಂಕೆ!

ಸಿಸಿಟಿವಿ ಕ್ಯಾಮೆರಾ ದೃಶ್ಯ ಪತ್ತೆ

ಸದ್ಯ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸುತ್ತಿದ್ದಾರೆ. ದೀಪಕ್‌ ಕಟ್ಟಡದಿಂದ ಹಾರುವ ಮುನ್ನ ಆಶ್ರಮದ ಹೊರಗಿನ ರಸ್ತೆಯಲ್ಲಿ ಅಪರಿಚಿತರು ಓಡಾಡುತ್ತಿರುವುದು ಕಂಡು ಬಂದಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳು, ಮರಣೋತ್ತರ ಪರೀಕ್ಷಾ ವರದಿ, ಆಶ್ರಮದ ಕೊಠಡಿಯಲ್ಲಿ ಪತ್ತೆಯಾದ ವಸ್ತುಗಳು ಹಾಗೂ ಇತರ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ದೀಪಕ್ ಅವರ ಸಾವಿನ ನಿಖರ ಕಾರಣ ಮತ್ತು ಸಾವಿಗೆ ಮುನ್ನ ನಡೆದ ಘಟನೆಗಳ ಸಂಪೂರ್ಣ ವಿವರ ಇನ್ನಷ್ಟೇ ಗೊತ್ತಾಗಬೇಕಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.