Asian Games 2026: ಯಶ್ವೀರ್ ಸಿಂಗ್, ಮುರಳಿ ಶೀಶಂಕರ್‌ಗೆ ಬೆಳ್ಳಿ, ರೋಹಿತ್ ಯಾದವ್‌ಗೆ ಕಂಚು!
ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಕ್ರೀಡಾಕೂಟದ 10ನೇ ದಿನ ಭಾರತಕ್ಕೆ ಒಟ್ಟು 9 ಪದಕಗಳು ಲಭಿಸಿದ್ದು, ಇದೀಗ ಭಾರತದ ಪದಕಗಳ ಪಟ್ಟಿಯಲ್ಲಿ ಒಟ್ಟು 45 ಸೇರಿವೆ. ಆ ಮೂಲಕ ಪದಕಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ.
2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ 10ನೇ ದಿನದ ಹೈಲೈಟ್ಸ್. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) 10ನೇ ದಿನ ಭಾರತ ಕ್ರೀಡಾಪಟುಗಳು 9 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅಥ್ಲೆಟಿಕ್ಸ್‌ನಿಂದಲೇ ಆರು ಪದಕಗಳು ಲಭಿಸಿವೆ. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಜಾವೆಲಿನ್ ಎಸೆತ, 1500 ಮೀಟರ್ ಓಟ, ಲಾಂಗ್ ಜಂಪ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾರತೀಯರು ಸೋಮವಾರ ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ.
ಜಾವೆಲಿನ್ ಎಸೆತದಲ್ಲಿ ಯಶ್ವೀರ್ ಸಿಂಗ್ ಬೆಳ್ಳಿ ಹಾಗೂ ರೋಹಿತ್ ಯಾದವ್ ಕಂಚಿನ ಪದಕ ಗೆದ್ದರು. ಯಶ್ವೀರ್ 85.72 ಮೀಟರ್ ದೂರ ಎಸೆದರೆ, ರೋಹಿತ್ 84.35 ಮೀಟರ್ ದೂರ ಎಸೆದು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಶ್ರೀಲಂಕಾದ ರುಮೇಶ್ ಪತಿರಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
Asian Games 2026: ಮಹಿಳೆಯರ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇಶಾ ಸಿಂಗ್!
ಗುಲ್ವೀರ್ ಸಿಂಗ್‌ಗೆ ಎರಡನೇ ಬೆಳ್ಳಿ ಪದಕ
ಪುರುಷರ 1500 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಬೆಳ್ಳಿ ಪದಕ ಗೆದ್ದರು. ಇದು ಈ ಕ್ರೀಡಾಕೂಟದಲ್ಲಿ ಅವರ ಎರಡನೇ ಬೆಳ್ಳಿ ಪದಕವಾಗಿದೆ. ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಕೂಡ ಬೆಳ್ಳಿ ಪದಕ ಗೆದ್ದು ಭಾರತದ ಪದಕದ ಸಂಖ್ಯೆಯನ್ನು ಹೆಚ್ಚಿಸಿದರು. ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್ ಹಾಗೂ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಕಂಚಿನ ಪದಕ ಜಯಿಸಿದರು.
ಇಶಾ ಸಿಂಗ್‌ಗೆ ಬೆಳ್ಳಿ ಪದಕ
ಶೂಟಿಂಗ್‌ನಲ್ಲೂ ಭಾರತಕ್ಕೆ ಪದಕ ಲಭಿಸಿತು. ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ನಡೆದ ಶೂಟ್‌ಆಫ್‌ನಲ್ಲಿ ಸೋತ ಇಶಾ ಸಿಂಗ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಕುರುಶ್ ಸ್ಪರ್ಧೆಯಲ್ಲಿ ಪಿಂಕಿ ಬಲ್ಹಾರಾ ಕಂಚಿನ ಪದಕ ಗೆದ್ದರು.
Asian Games 2026: 400 ಮೀಟರ್ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್‌ಗೆ ಕಂಚು, ಗುಲ್ವೀರ್ ಸಿಂಗ್‌ಗೆ ಬೆಳ್ಳಿ!
ಬಾಂಗ್ಲಾ ಎದುರು ಭಾರತ ಹಾಕಿ ತಂಡಕ್ಕೆ ಜಯ
ಮತ್ತೊಂದೆಡೆ, ಬಾಕ್ಸಿಂಗ್‌ನಲ್ಲಿ ಕಪಿಲ್ ಪೋಖರಿಯಾ (90 ಕೆ.ಜಿ.), ಪ್ರಿಯಾ ಘಂಘಾಸ್ ಮತ್ತು ಲವ್ಲಿನಾ ಬೊರ್ಗೊಹೈನ್ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಪುರುಷರ ಹಾಕಿಯಲ್ಲಿ ಭಾರತ ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತು. ಕ್ರಿಕೆಟ್‌ನಲ್ಲಿಯೂ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.
10ನೇ ದಿನದ ಸ್ಪರ್ಧೆಗಳಲ್ಲಿ ಅವಿನಾಶ್ ಸಾಬ್ಳೆ, ಮಹಿಳೆಯರ 4x100 ಮೀಟರ್ ರಿಲೇ ತಂಡ ಹಾಗೂ ಡಿಸ್ಕಸ್ ಎಸೆತಗಾರ್ತಿ ಸೀಮಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಶೂಟಿಂಗ್‌ನಲ್ಲಿ ಮನು ಭಾಕರ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು.
ಒಟ್ಟಾರೆಯಾಗಿ, ಅಥ್ಲೆಟಿಕ್ಸ್‌ನಲ್ಲಿ ದೊರೆತ ಪದಕಗಳು ಭಾರತದ ಪದಕ ಪಟ್ಟಿಗೆ ಮಹತ್ವದ ಕೊಡುಗೆ ನೀಡಿವೆ. ಬಾಕ್ಸಿಂಗ್‌ನಲ್ಲಿ ಪದಕ ಖಚಿತಪಡಿಸಿಕೊಂಡಿರುವ ಕ್ರೀಡಾಪಟುಗಳು ಹಾಗೂ ಸೆಮಿಫೈನಲ್‌ಗೆ ಪ್ರವೇಶಿಸಿರುವ ಹಾಕಿ ಮತ್ತು ಕ್ರಿಕೆಟ್ ತಂಡಗಳು ಮುಂದಿನ ಹಂತದ ಸ್ಪರ್ಧೆಗಳಿಗೆ ಸಜ್ಜಾಗಿವೆ.
Asian Games 2026: ಬಾಂಗ್ಲಾ ಎದುರು 10-0 ಅಂತರದಲ್ಲಿ ಗೆದ್ದ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಪಾಕ್ ಎದುರಾಳಿ!
ಭಾರತ vs ಅಫ್ಘಾನಿಸ್ತಾನ ಪಂದ್ಯ ಮಳೆಗೆ ಬಲಿ
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಕ್ರಿಕೆಟ್ ತಂಡ, ಸೋಮವಾರ ಅಫ್ಘಾನಿಸ್ತಾನ ವಿರುದ್ಧ ಪಂದ್ಯವನ್ನು ಆಡಬೇಕಾಗಿತ್ತು. ಆದರೆ, ಮಳೆಯ ಕಾರಣ ಈ ಪಂದ್ಯ ಟಾಸ್ ಕಾಣದೆ ರದ್ದಾಯಿತು. ಐಸಿಸಿ ಟಿ20ಐ ತಂಡಗಳ ಶ್ರೇಯಾಂಕದಲ್ಲಿ ಉತ್ತಮ ಸ್ಥಾನದಲ್ಲಿರುವ ಕಾರಣ ಟೀಮ್ ಇಂಡಿಯಾ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದಿದೆ.