ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಳುನಾಡಿನ ‘ಟಾಸ್’ ಚಿತ್ರಕ್ಕೆ ಗೋಲ್ಡನ್ ಟಚ್!‌ ನಟ ಅರ್ಜುನ್ ದೇವ್ ಹೊಸ ಸಿನಿಮಾಗೆ ಸಾಥ್‌ ನೀಡಿದ ಶಿಲ್ಪಾ ಗಣೇಶ್

ತುಳುನಾಡಿನ ನಟ ಅರ್ಜುನ್ ದೇವ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕನ್ನಡ ಮತ್ತು ತುಳು ದ್ವಿಭಾಷಾ ಚಿತ್ರ ‘ಟಾಸ್’ ಬಿಡುಗಡೆಗೆ ಸಜ್ಜಾಗಿದೆ. ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಗಣೇಶ್-ಶಿಲ್ಪಾ ದಂಪತಿ ಸಾಥ್ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯದ ‘ಹಲೋ ಹಲೋ ನೀಲಾಂಬರಿ’ ಹಾಡು ಅರ್ಮಾನ್ ಮಲಿಕ್ ಕಂಠದಲ್ಲಿ ಮೂಡಿಬಂದಿದೆ.

'ಟಾಸ್' ತುಳು ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್ ಪತ್ನಿ ಶಿಲ್ಪಾ ಸಾಥ್‌

-

Avinash GR
Avinash GR Aug 18, 2026 1:00 PM

ತುಳುನಾಡಿನ ಖ್ಯಾತ ನಟ ಅರ್ಜುನ್ ದೇವ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕನ್ನಡ ಹಾಗೂ ತುಳು ಭಾಷೆಯ ದ್ವಿಭಾಷಾ ಚಿತ್ರ ‘ಟಾಸ್’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ʻಗೋಲ್ಡನ್ ಸ್ಟಾರ್ʼ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಸಾಥ್ ನೀಡಿದ್ದು, ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸುತ್ತಿದ್ದಾರೆ.

ಅವಿಕಾ ಪ್ರೊಡಕ್ಷನ್ಸ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ‘ಟಾಸ್’ ಚಿತ್ರವನ್ನು ವೀಕ್ಷಿಸಿದ ಗಣೇಶ್ ದಂಪತಿ, ಚಿತ್ರದ ಮೇಕಿಂಗ್ ಮತ್ತು ಕಂಟೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ.

ಶನೀಲ್ ಗೌತಮ್ ಕ್ರಿಯೇಟಿವ್ ಹೆಡ್

ಡಾ. ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದು, ಅರ್ಜುನ್ ದೇವ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ ಹಾಗೂ ಯಾಶ್ವಿನ್ ಕೆ. ಶೆಟ್ಟಿಗಾರ್ ಅವರ ಸಂಕಲನ ಚಿತ್ರಕ್ಕಿದೆ. ʻಸು ಫ್ರಮ್‌ ಸೋʼ ಖ್ಯಾತಿಯ ಶನೀಲ್ ಗೌತಮ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ʻಕೆಲವೊಂದು ಶಾಕಿಂಗ್‌ ಘಟನೆಗಳನ್ನ ಹೇಳೋದಕ್ಕೆ ಆಗಲ್ಲʼ; 18 ವರ್ಷಗಳ ಹಿಂದಿನ ವಿಚಾರಗಳನ್ನು ಬಿಚ್ಚಿಟ್ಟ ಗಣೇಶ್‌ ಪತ್ನಿ ಶಿಲ್ಪಾ!

ಯೋಗರಾಜ್‌ ಭಟ್‌ ಸಾಹಿತ್ಯ, ಅರ್ಮಾನ್‌ ಮಲಿಕ್‌ ಗಾಯನ

ಚಿತ್ರದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ‘ಹಲೋ ಹಲೋ ನೀಲಾಂಬರಿ’ ಎಂಬ ಸುಮಧುರ ಡ್ಯುಯೆಟ್ ಗೀತೆ ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ-ಸಾಹಿತಿ ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಬಾಲಿವುಡ್‌ನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಹಾಡಿನಲ್ಲಿ ನಾಯಕ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಅವರ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರತಂಡ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿದ್ದು, ಚಿತ್ರವನ್ನು ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲಿದೆ.