ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani Crime: ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ಚಿಂತಾಮಣಿ ನಗರದ ಟಿಎಪಿಎಂಸಿ ಮಾರುಕಟ್ಟೆಯ ಆವರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ ಐ ಟಿ ಸಿ ಕಂಪನಿಯ ಹೆಸರಿನ ನಕಲಿ ಸಿಗರೇಟ್ ಪ್ಯಾಕೆಟ್ ಮತ್ತು ಮೂವರು ಆರೋಪಿಗಳ ಸಮೇತ ಒಂದು ಬಲೆನೋ ಕಾರು ವಶಪಡಿಸಿಕೊಳ್ಳುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

-

Ashok Nayak
Ashok Nayak Dec 15, 2025 11:13 PM

ಚಿಂತಾಮಣಿ ನಗರದ ಟಿಎಪಿಎಂಸಿ ಮಾರುಕಟ್ಟೆಯ ಆವರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ ಐ ಟಿ ಸಿ ಕಂಪನಿಯ ಹೆಸರಿನ ನಕಲಿ ಸಿಗರೇಟ್ ಪ್ಯಾಕೆಟ್ ಮತ್ತು ಮೂವರು ಆರೋಪಿಗಳ ಸಮೇತ ಒಂದು ಬಲೆನೋ ಕಾರು ವಶಪಡಿಸಿಕೊಳ್ಳುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಆರೋಪಿಗಳಾದ ಮಂಡ್ಯ ತಾಲ್ಲೂಕಿನ ನಂಬಿನಾಯಕನಹಳ್ಳಿ ಗ್ರಾಮ,ದರ್ಶನ್ ಬಿನ್ ರಾಜು.ಕೆ ಆ‌ರ್ ಪೇಟೆ ತಾಲ್ಲೂಕಿನ ನಾಟನಹಳ್ಳಿ ಗ್ರಾಮ ಕಾರ್ತಿಕ್ ಬಿನ್ ಪುಟ್ಟರಾಜು. ನಾಮಕಲ್ ಜಿಲ್ಲೆ, ತಮಿಳುನಾಡಿನ ಮುಪ್ಪಟಮ್ ಪಾಳ್ಯ, ದೇವನಕುರ್ಚಿ ಗ್ರಾಮದ ಗೋಪಾಲ್ ಬಿನ್ ಮುರುಗೇಶ ಸೇರಿದಂತೆ 6,71,484 ರೂ ಬೆಲೆ ಬಾಳುವ ನಕಲಿ ಸಿಗರೇಟ್ ಪ್ಯಾಕೆಟ್‌ಗಳನ್ನು ಮತ್ತು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ,ಕೆಎ41 MF 8865 ಬಲೆನೋ ಕಾರ್‌ನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Bengaluru Crime News: ಪಾರ್ಟಿಗೆ ದಾಳಿ ಮಾಡಿ ಹಣ ಕೇಳಿದ ಪೊಲೀಸರು, ಬಾಲ್ಕನಿಯಿಂದ ಜಿಗಿದ ಯುವತಿ ಗಂಭೀರ

ಇನ್ನೂ ಅಕ್ರಮವಾಗಿ ಐಟಿಸಿ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟ್ ಪ್ಯಾಕೆಟ್ ತಂದು ಚಿಂತಾಮ ಣಿಯಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ ಪಿ ಕುಶಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗ್ನಾಥ ರೈ ಇವರ ಮಾರ್ಗದರ್ಶನದ ಮೇರೆಗೆ ಡಿವೈಎಸ್‌ಪಿ ಪಿ ಮುರಳೀಧರ್ ರವರ ಮುಂದಾಳತ್ವದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀಜಿಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿಯವರುಗಳಾದ ಮಂಜುನಾಥ, ಮುನಿರಾಜು ಸಿ, ಶ್ರೀನಿವಾಸ, ಲೋಕೇಶ್, ಗಿರೀಶ್, ಅನೀಲ್ ಕುಮಾರ್, ಸುರೇಶ್ ರವರ ತಂಡವು ದಾಳಿಯಲ್ಲಿ ಭಾಗಿ ಆಗಿದ್ದರು.