ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿಸಿಎಸ್ ಮತಾಂತರ ಪ್ರಕರಣ; ನಿದಾ ಖಾನ್ ಬಂಧನಕ್ಕೆ ಒಳಗಾಗಿದ್ದು ಹೇಗೆ? ರೋಚಕ ಕಾರ್ಯಾಚರಣೆಯ ಇಂಚಿಂಚು ಮಾಹಿತಿ ಇಲ್ಲಿದೆ

ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡ ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಳನ್ನು ಕೊನೆಗೂ ಪೊಲೀಸರು ಬಂಧಿಸಿದರು. ಅವಳ ಬಂಧನಕ್ಕೆ ಪೊಲೀಸರು ರೂಪಿಸಿದ ಯೋಜನೆ ಹೇಗಿತ್ತು, ಅವಳು ಹೇಗೆ ಸಿಕ್ಕಿಬಿದ್ದಳು, ಬಂಧನದ ಸಮಯದಲ್ಲಿ ನಡೆದ ಘಟನೆಗಳು ಏನು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ನಿದಾ ಖಾನ್ ನನ್ನು ಪೊಲೀಸರು ಬಂಧಿಸಿದ್ದು ಹೇಗೆ?

ಸಂಗ್ರಹ ಚಿತ್ರ -

ಮುಂಬೈ: ಹಲವು ವಾರಗಳಿಂದ ಬಂಧನಕ್ಕೆ ಒಳಗಾಗದೆ ತಪ್ಪಿಸಿಕೊಂಡಿದ್ದ ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಮತಾಂತರ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ, ಅಮಾನತುಗೊಂಡ ಟಿಸಿಎಸ್ (TCS case) ಉದ್ಯೋಗಿ ನಿದಾ ಖಾನ್‌ಳನ್ನು (Nida Khan case) ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಮೇಲೆ ನಿರಂತರ ಅವಳ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಈಗ ಅವಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ (Maharastra) ಛತ್ರಪತಿ ಸಂಭಾಜಿನಗರದಲ್ಲಿ ಗುರುವಾರ ತಡರಾತ್ರಿ ಆಕೆಯನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ದೊಡ್ಡ ವಿವಾದ ಉಂಟು ಮಾಡಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ನಾಸಿಕ್‌ ಶಾಖೆಯಲ್ಲಿ ನಡೆದ ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಮತಾಂತರ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದರೆ ಅವಳನ್ನು ಬಂಧಿಸಲು ಯೋಜನೆ ರೂಪಿಸಿದ ಪೊಲೀಸರು ಜೀಪ್, ಸಮವಸ್ತ್ರ ಬಿಟ್ಟು ಹೋದರು. ಹೀಗಾಗಿ ಅವಳು ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಟಿಸಿಎಸ್ ಮತಾಂತರ ಪ್ರಕರಣ; ಕೊನೆಗೂ ಸಿಕ್ಕಿಬಿದ್ದ ಕಿಂಗ್‌ಪಿನ್‌ ನಿದಾ ಖಾನ್‌

ಛತ್ರಪತಿ ಸಂಭಾಜಿನಗರದ ನರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯಲ್ಲಿರುವ ಬಾಡಿಗೆ ಫ್ಲಾಟ್‌ನಲ್ಲಿಅಡಗಿಕೊಂಡಿರುವ ಸುಳಿವು ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಯ ಬಂಧನಕ್ಕೆ ಯೋಜನೆ ಹಾಕಿಕೊಂಡರು. ಆಕೆ ಅಲ್ಲಿ ಒಬ್ಬಂಟಿಯಾಗಿರಲಿಲ್ಲ. ತಂದೆ, ತಾಯಿ, ಸಹೋದರ ಮತ್ತು ತಾಯಿಯ ಚಿಕ್ಕಮ್ಮ ಜೊತೆ ಇರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಮೊದಲ ಮೂರು ನಾಲ್ಕು ದಿನ ನಿರಂತರ ಕಣ್ಗಾವಲು ಇರಿಸಿದರು. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ವಾಹನ, ಸಮವಸ್ತ್ರವಿಲ್ಲದೆ ನಿಯೋಜಿಸಲಾಯಿತು.

ಈ ನಡುವೆ ನಿದಾ ಖಾನ್ ಅವರ ವಕೀಲರು ಕಾನೂನು ಸಲಹೆ ಪಡೆಯುತ್ತಿದ್ದರು. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಇದಕ್ಕೂ ಮೊದಲೇ ಈಗ ಪೊಲೀಸರು ಆಕೆಯನ್ನು ಬಂಧಿಸಿದರು.

ನಾಸಿಕ್ ಟಿಸಿಎಸ್ ಪ್ರಕರಣ: ನಿದಾ ಖಾನ್‌ಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

ಬಂಧನದ ಬಳಿಕ ನಿದಾ ಖಾನ್ ಳನ್ನು ಸುತ್ಗಿರ್ನಿ ಚೌಕ್‌ನಲ್ಲಿರುವ ನ್ಯಾಯಾಂಗ ಅಧಿಕಾರಿಯ ಅಧಿಕೃತ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ನಾಸಿಕ್ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ ಎಂಟನೇ ಆರೋಪಿಯಾಗಿ ನಿದಾ ಖಾನ್ ಳನ್ನು ಗುರುತಿಸಲಾಗಿದೆ.