ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ದಾಳಿ: 6 ಮಂದಿಗೆ ಗಾಯ, ಹಲವು ಮನೆಗಳು ಧ್ವಂಸ

ಉಗ್ರರ ದಾಳಿಗೆ ಹಲವಾರು ಮನೆಗಳು ಧ್ವಂಸಗೊಂಡು, ಆರು ಮಂದಿ ಗಾಯಗೊಂಡ ಘಟನೆ ಮಣಿಪುರದ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಬುಧವಾರ ಮತ್ತು ಗುರುವಾರ ನಡೆದಿದೆ. ಉಖ್ರುಲ್ ಮತ್ತು ಕಾಮ್ಜಾಂಗ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳು ನಡೆದಿದ್ದು, ಗಡಿ ಗ್ರಾಮಗಳ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ದಾಳಿ

ಸಂಗ್ರಹ ಚಿತ್ರ -

ಮಣಿಪುರ: ಉಗ್ರರ ದಾಳಿಯಿಂದ (terror attack) ಮಣಿಪುರದಲ್ಲಿ ಹಿಂಸಾಚಾರ (Manipur violence) ಉಂಟಾಗಿದ್ದು, ಸುಮಾರು ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಇಂಡೋ-ಮ್ಯಾನ್ಮಾರ್ ಗಡಿ (Indo-Myanmar border) ಭಾಗವಾದ ಮಣಿಪುರದ ಉಖ್ರುಲ್ ಮತ್ತು ಕಾಮ್ಜಾಂಗ್ ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಪ್ರತ್ಯೇಕ ದಾಳಿಗಳು (attack) ನಡೆದಿದ್ದು, ಗಡಿ ಗ್ರಾಮಗಳ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಹಳ್ಳಿಗಳ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದೆ. ಸಶಸ್ತ್ರ ಸಜ್ಜಿತ ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ಗ್ರಾಮಗಳಲ್ಲಿ ಉದ್ವಿಗ್ನತೆ ಉಂಟಾಗಿದೆ.

ಮಣಿಪುರದ ಉಖ್ರುಲ್ ಮತ್ತು ಕಾಮ್ಜಾಂಗ್ ಜಿಲ್ಲೆಗಳಲ್ಲಿ ಬುಧವಾರ ನಡೆದ ಘಟನೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಲುಂಗ್ಟರ್ ಬೆಟ್ಟದ ಬಳಿ ಶಂಕಿತ ಉಗ್ರನೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಉಖ್ರುಲ್ ಜಿಲ್ಲೆಯ ಸಿನಾಕೈಥೈಯ ಗ್ರಾಮಸ್ಥನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಪ್ರತಿ ದಾಳಿ ನಡೆಸಿದ್ದು ಇದರಿಂದ ಗುಂಡಿನ ಚಕಮಕಿ ನಡೆದಿದೆ.

ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್​ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಉಖ್ರುಲ್ ಜಿಲ್ಲೆಯ ಸಿನಾಕೈಥೈಯನಲ್ಲಿ ಬುಧವಾರ ಉಗ್ರರ ದಾಳಿಯಿಂದ ಚಿಪೆಮ್‌ಶಾಂಗ್ ರುಯಿವಾ (33) ಎಂಬವರಿಗೆ ತೀವ್ರ ಗಾಯಗಳಾಗಿವೆ. ಗುಂಡಿನ ದಾಳಿ ಪ್ರಾರಂಭವಾದಾಗ ಅವರು ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



6ನೇ ಮಣಿಪುರ ರೈಫಲ್ಸ್‌ನ ಸಿಬ್ಬಂದಿ ತಕ್ಷಣವೇ ಪ್ರತಿ ದಾಳಿ ನಡೆಸಿದ್ದರಿಂದ ಗುಂಡಿನ ಚಕಮಕಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಾಯಾಳುವನ್ನು ಚಿಕಿತ್ಸೆಗಾಗಿ ಉಖ್ರುಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಗಡಿ ಸ್ತಂಭ ಸಂಖ್ಯೆ 89 ಮತ್ತು 95ರ ನಡುವೆ ಇರುವ ಕಾಮ್‌ಜಾಂಗ್ ಜಿಲ್ಲೆಯ ಕಾಸೋಮ್ ಖುಲ್ಲೆನ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಬೆಳಗ್ಗೆ ನಡೆದ ಮತ್ತೊಂದು ದಾಳಿಯಲ್ಲಿ ಸುಮಾರು ಐದು ಮಂದಿ ಗಾಯಗೊಂಡಿದ್ದಾರೆ. ತಂಗ್ಖುಲ್ ನಾಗಾ ಗ್ರಾಮಗಳಾದ ನಮ್ಲೀ, ವಾಂಗ್ಲೀ ಮತ್ತು ಚೋರೋಗಳಲ್ಲಿ ಗುರುವಾರ ಬೆಳಗ್ಗೆ 3.30ರ ಸುಮಾರಿಗೆ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ಕುಕಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಈ ಗ್ರಾಮಗಳು ನಮ್ಲೀ ಕಾಸೋಮ್ ಖುಲ್ಲೆನ್ ಪೊಲೀಸ್ ಠಾಣೆಯಿಂದ ವಾಂಗ್ಲೀ ಸುಮಾರು 18 ಕಿ.ಮೀ ದೂರದಲ್ಲಿದ್ದು, ನಮ್ಲೀ ಮತ್ತು ಚೋರೋ ಸುಮಾರು 50 ಕಿ.ಮೀ ದೂರದಲ್ಲಿದೆ. ಇಲ್ಲಿನ ಸುಮಾರು 15 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಈ ದಾಳಿಯನ್ನು ಖಂಡಿಸಿರುವ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕ ಲೀಶಿಯೊ ಕೀಶಿಂಗ್, ಇದು ಬಾಹ್ಯ ಆಕ್ರಮಣ. ಪೀಪಲ್ಸ್ ಡಿಫೆನ್ಸ್ ಫೋರ್ಸ್ ನಿಂದ ಬೆಂಬಲಿತವಾಗಿರುವ ಕುಕಿ ನ್ಯಾಷನಲ್ ಆರ್ಮಿ-ಬರ್ಮಾಗೆ ಸೇರಿದ ಮ್ಯಾನ್ಮಾರ್ ಮೂಲದ ಉಗ್ರರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಗಳ ಕುರಿತು ಕುಕಿ ಸಮುದಾಯ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೆಚ್ಚಿನ ಗಾಯಾಳುಗಳು ಕುಕಿ ಸಮುದಾಯದವರು. ಈ ಘಟನೆಯನ್ನು ಕೋಮು ಘರ್ಷಣೆ ಎಂದು ನೋಡಬಾರದು. ಗಡಿಯಾಚೆಗಿನ ಉಗ್ರರ ದಾಳಿ ಎಂದು ಪರಿಗಣಿಸುವಂತೆ ಅವರು ತಿಳಿಸಿದ್ದಾರೆ.

ಗಡಿ ಗ್ರಾಮಗಳಲ್ಲಿ ದಾಳಿಯ ಭೀತಿ ಹೆಚ್ಚಾಗಿರುವುದರಿಂದ ಅಲ್ಲಿಗೆ ರಾಜ್ಯ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಏಪ್ರಿಲ್ 24 ರಂದು ಮುಖ್ಯಮಂತ್ರಿ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವುದು ಸಮಸ್ಯೆಯಲ್ಲ. ಅದಕ್ಕೂ ಮೊದಲು ಗಡಿ ವಿವಾದವನ್ನು ಪರಿಹರಿಸಲು ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಹೇಳಿದರು.

Channapatna News: 26 ವರ್ಷದ ಯುವತಿ ಜತೆ ಪ್ರೀತಿಗೆ ಮನೆಯವರ ಅಡ್ಡಿ: ಮನನೊಂದು 15 ವರ್ಷದ ಬಾಲಕ ಆತ್ಮಹತ್ಯೆ

ದಾಳಿಯನ್ನು ಖಂಡಿಸಿರುವ ತಂಗ್ಖುಲ್ ನಾಗಾ ಸಮುದಾಯವನ್ನು ಪ್ರತಿನಿಧಿಸುವ ಕಾರ್ಯಕಾರಿ ಸಮಿತಿಯು, ಕೆಎನ್‌ಎ-ಬಿಗೆ ಸಂಬಂಧಿಸಿದ ಪಿಡಿಎಫ್ ಬೆಂಬಲಿತ ಉಗ್ರರು ದಾಳಿಗೆ ಡ್ರೋನ್‌ಗಳನ್ನು ಬಳಸಿದ್ದಾರೆ, ಗ್ರಾಮಸ್ಥರನ್ನು ಲೂಟಿ ಮಾಡಿದ್ದಾರೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

ಮಣಿಪುರದ ಭಾರತದ ಗಡಿ ಭಾಗದಲ್ಲಿ ಬುಧವಾರ ಮತ್ತು ಗುರುವಾರ ನಡೆದಿರುವ ದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದು ಕುಕಿ ನ್ಯಾಷನಲ್ ಆರ್ಮಿ-ಬರ್ಮಾ ತಿಳಿಸಿದೆ.