ತ್ರಿವಳಿ ಕೊಲೆ ಪ್ರಕರಣ: ತಾಯಿ ಹತ್ಯೆಗೆ ಸಂಚು, ಅನಿರೀಕ್ಷಿತವಾಗಿ ಬಂದ ತಂದೆ, ತಂಗಿಯ ಕಥೆಯನ್ನೂ ಮುಗಿಸಿದಳು
ಆಸ್ತಿ ವಿವಾದದ ಕಾರಣದಿಂದ ಮಗಳೊಬ್ಬಳು ತಾಯಿಯನ್ನು ಕೊಂದಿದ್ದು ಶವ ವಿಲೇವಾರಿ ಮಾಡುವಾಗ ಅನಿರೀಕ್ಷಿತವಾಗಿ ಬಂದ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾಳೆ. ಇದಕ್ಕೆ ಆಕೆಯ ಗೆಳೆಯ ಸಹಕರಿಸಿದ್ದಾನೆ. ತಂದೆ, ತಂಗಿಯನ್ನು ಕೊಲೆ ಮಾಡುವ ಯೋಜನೆ ಅವಳು ಹಾಕಿಕೊಂಡಿರಲಿಲ್ಲ. ಆದರೆ ಎಲ್ಲವೂ ಅನಿರೀಕ್ಷಿತವಾಗಿ ನಡೆದಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ (bengaluru crime) ನಡೆದ ತ್ರಿವಳಿ ಕೊಲೆ (bengaluru triple murder case) ಪ್ರಕರಣ ಸಂಪೂರ್ಣ ಯೋಜಿತವಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮಗಳು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯ ಕೊಲೆ (mother murder case) ಮಾಡಿದ್ದಾಳೆ. ಶವವನ್ನು ವಿಲೇವಾರಿ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ತಂದೆ ಮತ್ತು ಸಹೋದರಿ ಬಂದಿದ್ದು, ಬಳಿಕ ಅವರನ್ನು ಕೂಡ ಕೊಲೆ ಮಾಡಿದ್ದಾರೆ. ಪ್ರಕರಣದ ಬಳಿಕ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಯ ಸ್ನೇಹಿತ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಕೆಆರ್ ಪುರಂ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದು ತಾಯಿಯ ಹತ್ಯೆಗೆ ಮಗಳು ರೂಪಿಸಿದ ಯೋಜನೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಶ್ವೇತಾ (24) ತನ್ನ ಗೆಳೆಯ ಕೆನ್ನೆತ್ (26) ಜೊತೆ ಸೇರಿ ತಾಯಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು.
"ನನ್ನ ಮಗಳು ತಪ್ಪು ಮಾಡಿದ್ದರೆ ಅದೇ ಕೋಟೆಯಿಂದ ಆಕೆಯನ್ನು ತಳ್ಳಿ ಬಿಡಿ"; ಕಣ್ಣೀರು ಹಾಕಿದ ಆರೋಪಿ ಸಿಯಾ ತಂದೆ
ಶ್ವೇತಾಳ ತಾಯಿ ಮುತ್ತುಲಕ್ಷ್ಮಿಯನ್ನು ಯಾರಿಗೂ ಅನುಮಾನ ಬಾರದಂತೆ ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದ ಶ್ವೇತಾ ಮತ್ತು ಕೆನ್ನೆತ್ ರಾತ್ರಿ ವೇಳೆ ಶವವನ್ನು ಸಾಗಿಸುವ ಯೋಜನೆ ಮಾಡಿಕೊಂಡಿದ್ದರು. ಆರೋಪಿಗಳಿಬ್ಬರು ಮುತ್ತುಲಕ್ಷ್ಮಿಯನ್ನು ಕೊಂದು ಮೃತದೇಹವನ್ನು ಮತ್ತೊಂದು ಬಾಡಿಗೆ ಫ್ಲಾಟ್‌ಗೆ ಸ್ಥಳಾಂತರಿಸಲು ಉದ್ದೇಶಿಸಿದ್ದರು. ಆದರೆ ಅಷ್ಟರಲ್ಲಿ ಶ್ವೇತಾಳ ತಂದೆ ಮತ್ತು ತಂಗಿ ಮನೆಗೆ ಮರಳಿದ್ದಾರೆ. ಇದರಿಂದ ಭಯಭೀತರಾದ ಅವರು ಅವರಿಬ್ಬರನ್ನೂ ಕೊಲೆ ಮಾಡಿದ್ದಾರೆ.
ಈ ಕುರಿತು ಗುರುವಾರ ಮಾಹಿತಿ ನೀಡಿರುವ ವೈಟ್‌ಫೀಲ್ಡ್ ಪೊಲೀಸ್ ಉಪ ಆಯುಕ್ತ ಸೈದುಲು ಅಡವತ್, ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದ ಕೆನ್ನೆತ್ ಒಂದು ಅಪಾರ್ಟ್‌ಮೆಂಟ್ ಜೊತೆಗೆ ದೊಡ್ಡನೆಕ್ಕುಂಡಿಯ ಗುರುರಾಜ್ ಲೇಔಟ್‌ನಲ್ಲಿ ಒಂದು ಬೆಡ್ ರೂಮ್ ನ ಫ್ಲಾಟ್ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದನು. ಮುತ್ತುಲಕ್ಷ್ಮಿ ಅವರ ಕೊಲೆಯ ಬಳಿಕ ಶವವನ್ನು ಅಲ್ಲಿ ಮರೆಮಾಡುವ ಯೋಜನೆ ಹಾಕಿಕೊಂಡಿದ್ದರು ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಇದುವರೆಗೆ ಸಂಗ್ರಹಿಸಿದ ಪುರಾವೆಗಳಿಂದ ಆರೋಪಿಗಳು ಸಾಕಷ್ಟು ಮೊದಲೇ ಕೊಲೆಗೆ ಯೋಜನೆ ಹಾಕಿಕೊಂಡಿದ್ದರು. ತನಿಖೆ ವೇಳೆ ಪೊಲೀಸರು ದೊಡ್ಡನೆಕ್ಕುಂಡಿ ಫ್ಲಾಟ್‌ನಲ್ಲಿ ಪ್ಲಾಸ್ಟಿಕ್ ಡ್ರಮ್, ಕಟ್ಟರ್ ಮತ್ತು ಸುತ್ತಿಗೆಯನ್ನು ವಶಕ್ಕೆ ಪಡೆದಿದ್ದಾರೆ.
ಮೂವರ ಕೊಲೆಯ ಬಳಿಕ ಶ್ವೇತಾ ಮತ್ತು ಕೆನ್ನೆತ್ ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನ ಮಾಡಿದ್ದು ಆವರಣದೊಳಗೆ ಮೆಣಸಿನ ಪುಡಿಯೊಂದಿಗೆ ಬೆರೆಸಿದ ಬಿಸಿ ನೀರನ್ನು ಹಾಕಿ ರಕ್ತದ ಕಲೆಗಳು ತೊಳೆಯಲೆತ್ನಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕುಟುಂಬದ ನಡುವಿನ ಆಸ್ತಿ ವಿವಾದ ಕೊಲೆಗೆ ಕಾರಣವಾಗಿರಬಹುದು. ಶ್ವೇತಾ ಮತ್ತು ಕೆನ್ನೆತ್ ಸುಮಾರು 30 ಲಕ್ಷ ರೂ. ಸಾಲ ಹೊಂದಿದ್ದು, ಇದಕ್ಕಾಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪುಣೆ ಉದ್ಯಮಿ ಹತ್ಯೆ ಪ್ರಕರಣ: ನನ್ನ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರೋಪಿ ಚೇತನ್ ತಂದೆ
ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಶ್ವೇತಾಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದರು. ಆಕೆಯ ಗೆಳೆಯ ಕೆನ್ನೆತ್ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.