"ಕೆಲಸ ಹೋಯಿತು ಎಂದು ಧೃತಿಗೆಡಲಿಲ್ಲ"; ಹುಟ್ಟೂರಲ್ಲೇ ಸೂಪರ್ ಮಾರ್ಕೆಟ್ ತೆರೆದು ಯಶಸ್ಸು ಕಂಡ ಸಾಫ್ಟ್‌ವೇರ್ ಇಂಜಿನಿಯರ್!
Viral News: ಸಾಫ್ಟ್‌ವೇರ್ ಇಂಜಿನಿಯರ್ ಯೊಬ್ಬರು ಉದ್ಯೋಗವನ್ನು ಕಳೆದುಕೊಂಡಿದ್ದು ಇದಕ್ಕೆ ಎದೆಗುಂದದೆ ಸ್ವಂತ ಉದ್ಯಮವನ್ನು ಆರಂಭ ಮಾಡಿ ಯಶಸ್ಸು ಕಂಡಿದ್ದಾರೆ. ಯಾವುದೇ ಐಟಿ ಕ್ಷೇತ್ರ ಅಥವಾ ಪ್ರತಿಷ್ಠಿತ ಕಂಪನಿಯ ಕೆಲಸ ಎಂದು ಕಾಯದೇ ತನ್ನ ಹಳ್ಳಿಯಲ್ಲೇ ಸ್ವಂತ ಉದ್ಯಮ ಆರಂಭ ಮಾಡಿದ್ದಾರೆ. ತಮ್ಮ ಗ್ರಾಮದಲ್ಲಿ ಸಣ್ಣ ಸೂಪರ್‌ಮಾರ್ಕೆಟ್ ಅನ್ನು ತೆರೆದಿದ್ದು ಅವರ ಸಣ್ಣ ಕಲ್ಪನೆಯು ದೈನಂದಿನ ಮಾರಾಟದೊಂದಿಗೆ ಸ್ಥಳೀಯ ವ್ಯವಹಾರವಾಗಿ ಬೆಳೆದಿದೆ..ಇವರ ಈ ಯಾಶೋಗಾಥೆಯೂ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಸೂಪರ್ ಮಾರ್ಕೆಟ್ ತೆರೆದು ಯಶಸ್ಸು ಕಂಡ ಸಾಫ್ಟ್‌ವೇರ್ ಇಂಜಿನಿಯರ್ -
ಕೊಲೊಂಬೊಜೂ.26: ಜೀವನದಲ್ಲಿ ಕಷ್ಟಗಳು ಸಾಮಾನ್ಯ. ಆದ್ರೆ ಇದಕ್ಕೆ ಭಯಪಡದೇ ಸಮಸ್ಯೆಗಳನ್ನು ಎದುರಿಸದರೆ ಜೀವನ ಸಾರ್ಥಕ. ಈ ಕಷ್ಟಗಳೇ ಕೆಲವೊಮ್ಮೆ ನಮ್ಮ ಯಶಸ್ಸಿಗೂ ಕಾರಣವಾಗಬಹುದು. ಇದಕ್ಕೆ ಶ್ರೀಲಂಕಾದ ಯುವಕನೊಬ್ಬ ನಮಗೆ ಸ್ಪೂರ್ತಿಯಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಯೊಬ್ಬರು ಉದ್ಯೋಗವನ್ನು ಕಳೆದುಕೊಂಡಿದ್ದು ಇದಕ್ಕೆ ಎದೆಗುಂದದೆ ಸ್ವಂತ ಉದ್ಯಮವನ್ನು ಆರಂಭ ಮಾಡಿ ಯಶಸ್ಸು ಕಂಡಿದ್ದಾರೆ. ಯಾವುದೇ ಐಟಿ ಕ್ಷೇತ್ರ ಅಥವಾ ಪ್ರತಿಷ್ಠಿತ ಕಂಪನಿಯ ಕೆಲಸ ಎಂದು ಕಾಯದೇ ತನ್ನ ಹಳ್ಳಿಯಲ್ಲೇ ಸ್ವಂತ ಉದ್ಯಮ ಆರಂಭ ಮಾಡಿದ್ದಾರೆ. ತಮ್ಮ ಗ್ರಾಮದಲ್ಲಿ ಸಣ್ಣ ಸೂಪರ್‌ಮಾರ್ಕೆಟ್ ಅನ್ನು ತೆರೆದಿದ್ದು ಅವರ ಸಣ್ಣ ಕಲ್ಪನೆಯು ದೈನಂದಿನ ಮಾರಾಟದೊಂದಿಗೆ ಸ್ಥಳೀಯ ವ್ಯವಹಾರವಾಗಿ ಬೆಳೆದಿದೆ. ಇವರ ಈ ಯಾಶೋಗಾಥೆಯೂ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಆಗುತ್ತಿದೆ.
ಶ್ರೀಲಂಕಾದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಕೆಲಸವನ್ನು ಕಳೆದುಕೊಂಡ ನಂತರ ಉದ್ಯಮಶೀಲತೆಯತ್ತ ಮುಖ ಮಾಡಿದ್ದಾರೆ. ಯಾವುದೇ ಇತರ ಕಂಪನಿಯ ಕೆಲಸಕ್ಕೆ ಕಾಯುವ ಬದಲು ತಮ್ಮ ಗ್ರಾಮದಲ್ಲಿ ಸಣ್ಣ ಸೂಪರ್‌ಮಾರ್ಕೆಟ್ ತೆರೆಯಲು ನಿರ್ಧರಿಸಿದ್ದಾರೆ. ಇಂದು ಇವರು ಇದೇ ಉದ್ಯಮದಲ್ಲಿ ಸಕ್ಸಸ್ ಪಡೆದಿದ್ದು ಆರ್ಥಿಕವಾಗಿಯೂ ಯಶಸ್ಸು ಕಂಡಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರಿಂಗ್ ಪದವೀಧರರಾದ ಸಮಿತ ಸುಲಕ್ಷಣಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಒಮ್ಮೆಲೆ ಅವರಿಗೆ ಕೆಲಸ ಕಳೆದುಕೊಳ್ಳುವ ಸಂದರ್ಭ ಎದುರಾಯಿತು. ಸಾಫ್ಟ್‌ವೇರ್ ಕ್ಷೇತ್ರವೇ ಅವರ ಕನಸು ಎಂದುಕೊಂಡರೂ ಅವರ ಹಳ್ಳಿಯಲ್ಲೇ ಉದ್ಯಮ ಮಾಡಲು ಆಸಕ್ತಿ ವಹಿಸಿದರು. ತಮ್ಮ ಗ್ರಾಮದಲ್ಲಿ ಒಂದು ಸುಸಜ್ಜಿತ ಮಿನಿ ಸೂಪರ್ ಮಾರ್ಕೆಟ್ ತೆರೆಯಲು ನಿರ್ಧರಿಸಿದ್ದಾರೆ
ಸಾಮಾನ್ಯ ಅಂಗಡಿಗಿಂತ ವಿಭಿನ್ನವಾಗಿ ಇಲ್ಲಿ ಕೆಲಸಗಳನ್ನು ಮಾಡಲು ಆರಂಭ ಮಾಡಿದರು.ತಮ್ಮ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಗ್ರಾಹಕರು ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಲು ಸುಲಭವಾದ 'ಆನ್‌ಲೈನ್ ಅರ್ಡರ್ ಹಾಗೂ 'ಕ್ಯಾಶ್ ಆನ್ ಡೆಲಿವರಿ' ಸೌಲಭ್ಯವನ್ನು ಇಲ್ಲಿ ಆರಂಭಿಸಿದರು.. ಕೆಲವೇ ತಿಂಗಳುಗಳಲ್ಲಿ, ಅಂಗಡಿಯು ಉತ್ತಮ ಬೆಳವಣಿಗೆಯನ್ನು ಕಾಣಲು ಪ್ರಾರಂಭಿಸಿತು. ಕೇವಲ ಮೂರು ತಿಂಗಳಲ್ಲಿ, ವ್ಯವಹಾರವು ದೈನಂದಿನ ಮಾರಾಟದಲ್ಲಿ 50,000 ರೂ.ಗಳಿಗಿಂತ ಹೆಚ್ಚಿನ ಗಳಿಕೆಯೂ ಕಂಡಿತು ಎಂದು ಲಿಂಕ್ಡಿನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿತು. ಹೆಚ್ಚಿನವರು ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.. ಒಬ್ಬ ವ್ಯಕ್ತಿ ಬರೆದಿದ್ದಾರೆ, "ಅದ್ಭುತ. ನೀವು ನಿಜವಾಗಿಯೂ ಸ್ಪೂರ್ತಿದಾಯಕರು.. ಮತ್ತೊಬ್ಬರು "ಮುಂದುವರಿಯಿರಿ, ಏಣಿ ಏರಲು ಹೆಚ್ಚಿನ ಮೆಟ್ಟಿಲುಗಳಿವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.