ಗಾಯಕ ಅಂಕಿತ್ ಬಲ್ಯಾನ್ ಮೇಲೆ ಗುಂಡಿನ ದಾಳಿ ಪ್ರಕರಣ; ಇಬ್ಬರು ಶಂಕಿತ ಶೂಟರ್‌ಗಳ ಎನ್ಕೌಂಟರ್
Crime News: ಹರಿಯಾಣ್ವಿ ಗಾಯಕ-ಯೂಟ್ಯೂಬರ್ ಅಂಕಿತ್ ಬಲ್ಯಾನ್ ಅವರನ್ನು ಹತ್ಯೆಗೈದಿದ್ದ ಇಬ್ಬರು ಶಂಕಿತ ದುಷ್ಕರ್ಮಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. 24 ವರ್ಷದ ಸುಮಿತ್ ಮತ್ತು 22 ವರ್ಷದ ಮೋಹಿತ್ ಎಂದು ಗುರುತಿಸಲಾದ ಇಬ್ಬರು ಶಂಕಿತರು ಗೋಗಿ ಗ್ಯಾಂಗ್‌ನ ಸದಸ್ಯರು ಎಂದು ಹೇಳಲಾಗಿದೆ.
ಎನ್ಕೌಂಟರ್ನಲ್ಲಿ ಹತರಾದವರು ಮತ್ತು ಅಂಕಿತ್ ಬಲ್ಯಾನ್ -
ಲಖನೌ, ಆ.31: ಹರಿಯಾಣ್ವಿ ಗಾಯಕ-ಯೂಟ್ಯೂಬರ್ ಅಂಕಿತ್ ಬಲ್ಯಾನ್ ಅವರನ್ನು ಹತ್ಯೆಗೈದಿದ್ದ ಇಬ್ಬರು ಶಂಕಿತ ದುಷ್ಕರ್ಮಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ (Uttar Pradesh) ಶಾಮ್ಲಿಯಲ್ಲಿ ಆರಕ್ಷಕರ ಕಾರ್ಯಾಚರಣೆ ವೇಳೆ ಸಾವಿಗೀಡಾಗಿದ್ದಾರೆ. 24 (Crime News) ವರ್ಷದ ಸುಮಿತ್ ಮತ್ತು 22 ವರ್ಷದ ಮೋಹಿತ್ ಎಂದು ಗುರುತಿಸಲಾದ ಇಬ್ಬರು ಶಂಕಿತರು ಗೋಗಿ ಗ್ಯಾಂಗ್‌ನ ಸದಸ್ಯರು ಎಂದು ಹೇಳಲಾಗಿದೆ.
ಇಬ್ಬರೂ ಹರಿಯಾಣದ ಸೋನಿಪತ್‌ನವರಾಗಿದ್ದು, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ತಲಾ 50,000 ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಮೋಹಿತ್ ವಿರುದ್ಧ ಹರಿಯಾಣದಲ್ಲಿ ಸುಮಾರು 14 ಪ್ರಕರಣಗಳು ದಾಖಲಾಗಿದ್ದರೆ, ಸುಮಿತ್ ಒಂದು ಪೊಲೀಸ್ ಪ್ರಕರಣವನ್ನು ಎದುರಿಸುತ್ತಿದ್ದ. ಆಗಸ್ಟ್ 26 ರಂದು ಶಾಮ್ಲಿಯಲ್ಲಿರುವ ಜಿಮ್‌ನಿಂದ ಹೊರಬರುತ್ತಿದ್ದಾಗ ಅಂಕಿತ್ ಬಲ್ಯಾನ್ ಮೇಲೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇನ್ನಿಬ್ಬರು ಶಂಕಿತರು ಪ್ರಸ್ತುತ ಪರಾರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ದಾಳಿಯ ವಿಡಿಯೊ ವೈರಲ್ ಆಗಿತ್ತು. ಬಲ್ಯಾನ್ ತನ್ನ ಜಿಮ್‌ನಿಂದ ಹೊರಬಂದು ತನ್ನ ಕಾರಿನತ್ತ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳು ಆತನ ಮೇಲೆ 16 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಕೊಲೆ ಮಾಡಿದ ಮರುದಿನ, ಗೋಗಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ.
ಭದ್ರತಾ ತಪಾಸಣೆ ವೇಳೆ ಭೀಕರ ಎನ್‌ಕೌಂಟರ್; ಶಸ್ತ್ರಾಸ್ತ್ರ ಹೊಂದಿದ ನಾಲ್ವರನ್ನು ಹೊಡೆದುರುಳಿಸಿದ ಪೊಲೀಸರು
ನಾಲ್ಕು ದಿನಗಳಲ್ಲಿ ಪೊಲೀಸರು ಹಂತಕರನ್ನು ಬಂಧಿಸದಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದ ಹೊರಗೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಅವರ ಪತ್ನಿ ಬೆದರಿಕೆ ಹಾಕಿದ್ದರು. ಶನಿವಾರ (ಆ.29) ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಕುಟುಂಬವನ್ನು ಭೇಟಿ ಮಾಡಿ, ಬಲ್ಯಾನ್ ಅವರ ಹತ್ಯೆಯ ಆರೋಪಿಗಳನ್ನು ಬಂಧಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಬಲ್ಯಾನ್ ಹತ್ಯೆಯನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಟೀಕಿಸಿದ್ದವು. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ವಿಪಕ್ಷಗಳು ಪ್ರಶ್ನೆ ಮಾಡಿದ್ದವು.
ಇನ್ನು ಕೊಲೆಯಾಗುವ ಕೆಲವೇ ಗಂಟೆಗಳ ಮೊದಲು, ಅಂಕಿತ್ ಬಲ್ಯಾನ್ ತನ್ನ ಹೊಸ ಹಾಡಿನ ಕೆಲವು ಸಾಲುಗಳನ್ನು ಮರ್ಡರ್ ಮಾರ್ ದೇ ಸಡಕ್ ಕೆ ಉಪರ್ (ರಸ್ತೆಯಲ್ಲೇ ಕೊಲೆ ನಡೆದಿದೆ) ಎಂದು ಇನ್‌ಸ್ಟಾಗ್ರಾಮ್‍ನಲ್ಲಿ ಹಾಡಿದ್ದರು. ವಿಡಿಯೊದಲ್ಲಿ, ಅವರು ತಮ್ಮ ಕಾರಿನಲ್ಲಿ ಕುಳಿತು ಕಳೆದ ತಿಂಗಳು ಬಿಡುಗಡೆಯಾದ ಬೇಬಿ ಬದ್ಮಾಶ್ ಹಾಡನ್ನೂ ಹಾಡಿದ್ದಾರೆ.
ಶಾಮ್ಲಿ ನಿವಾಸಿಯಾದ ಬಲ್ಯಾನ್, ಇನ್‌ಸ್ಟಾಗ್ರಾಮ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಮತ್ತು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದರು.