Electric Shock: ಮಾವನಿಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ; ಗಾಯ ಮರೆ ಮಾಚಲು ಅರಶಿನ ಹಚ್ಚಿದ್ಳು ಹಂತಕಿ!
ಗಾಢ ನಿದ್ದೆಯಲ್ಲಿದ್ದ ಮಾವನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ್ದು ಮಾತ್ರವಲ್ಲದೇ ಮೃತದೇಹದ ಮೇಲಿನ ಗಾಯಕ್ಕೆ ಅರಶಿನ ಹಚ್ಚಿ ಪಾತಕಿಗಳು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಗೀತಾ ನಿರ್ಮಲ್ಕರ್ ಮತ್ತು ಲೇಖ್ರಾಮ್ ನಿಶಾದ್ ಎಂದು ಗುರುತಿಸಲಾಗಿದೆ.


ರಾಯ್‌ಪುರ: ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಮಾವನನ್ನು ಬರ್ಬರವಾಗಿ ಹತ್ಯೆ(Electric Shock) ಮಾಡಿರುವ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ. ಗಾಢ ನಿದ್ದೆಯಲ್ಲಿದ್ದ ಮಾವನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ್ದು ಮಾತ್ರವಲ್ಲದೇ ಮೃತದೇಹದ ಮೇಲಿನ ಗಾಯಕ್ಕೆ ಅರಶಿನ ಹಚ್ಚಿ ಪಾತಕಿಗಳು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಗೀತಾ ನಿರ್ಮಲ್ಕರ್ ಮತ್ತು ಲೇಖ್ರಾಮ್ ನಿಶಾದ್ ಎಂದು ಗುರುತಿಸಲಾಗಿದೆ. ಛತ್ತೀಸ್‌ಗಢದ ಬಲೋಡ್‌ನ ದೋಂಡಿ ಲೋಹರಾ ಪೊಲೀಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇನ್ನು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದೇ ರೋಚಕ.
ಏನಿದು ಪ್ರಕರಣ?
ಗೀತಾಳಿಗೆ ಆರಂಭದಿಂದಲೂ ತನ್ನ 60 ವರ್ಷದ ಮಾವ ಮನೋಹರ್ ನಿರ್ಮಲ್ಕರ್ ಜೊತೆ ಸರಿ ಹೋಗುತ್ತಿರಲಿಲ್ಲ. ದಿನ ನಿತ್ಯ ಜಗಳವಾಡುತ್ತಿದ್ದಳು. ಹೀಗಾಗಿ ಗೀತಾ ತನ್ನ ಪ್ರಿಯಕರನ ಜೊತೆಗೂಡಿ ಮಾವನಿಗೇ ಚಟ್ಟ ಕಟ್ಟಲು ಪ್ಲ್ಯಾನ್ ಮಾಡಿದ್ದಳು. ಎಲೆಕ್ಟ್ರಿಷಿಯನ್‌ಗಳು ಧರಿಸುವ ಗ್ಲೌಸ್ ಅನ್ನು ಧರಿಸಿ ರಾಡ್‌ವೊಂದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟು ಅದನ್ನು ಮನೋಹರ್‌ಗೆ ಶಾಕ್ ಕೊಟ್ಟಿದ್ದಾಳೆ. ಹಾಗೆಯೇ ವಿದ್ಯುತ್ ಸ್ಪರ್ಶ ಆಗ್ತಿದ್ದಂತೆ ಮನೋಹನ್ ಸಾವನ್ನಪ್ಪಿದ್ದಾನೆ. ಮಾವನನ್ನು ಕೊಂದ ನಂತರ, ಗೀತಾ ಎಲ್ಲರಿಗೂ ಆ ವ್ಯಕ್ತಿ ಕುಡಿದ ಮತ್ತಿನಲ್ಲಿ ಸೈಕಲ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಳು. ಆದಾಗ್ಯೂ, ಅಂತ್ಯಕ್ರಿಯೆಗೆ ಮುನ್ನ ಗ್ರಾಮಸ್ಥರು ಮನೋಹರ್ ಅವರ ದೇಹದ ಮೇಲೆ ಹಲವಾರು ಗಾಯದ ಗುರುತುಗಳನ್ನು ಗಮನಿಸಿದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ 60 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ಬಯಲಾಗಿದೆ.
ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
ಮನೋಹರ್ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಹಂತಕಿ ಕೃತ್ಯ ಎಸಗಿದ್ದಾಳೆ. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ ಗ್ರಾಮಸ್ಥರು ದೇಹದ ಮೇಲೆ ಗಾಯಗಳನ್ನು ನೋಡಿ ಕೊಲೆ ಶಂಕೆ ವ್ಯಕ್ತಪಡಿಸಿದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಶವವನ್ನು ಪರೀಕ್ಷಿಸಿ ವಿಧಿವಿಜ್ಞಾನ ತಂಡಕ್ಕೆ ಕರೆ ಮಾಡಿದ ನಂತರ, ಇದು ಕೊಲೆ ಪ್ರಕರಣ ಎಂದು ನಾವು ದೃಢಪಡಿಸಿದ್ದೇವೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಪಟೇಲ್ ತಿಳಿಸಿದರು. ಮನೋಹರ್‌ನನ್ನು ಕೊಂದ ನಂತರ ಹಂತಕಿ ಗಾಯಗಳನ್ನು ಮರೆಮಾಚಲುರು ಗಾಯಗಳಿಗೆ ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿದ್ದರು ಎನ್ನಲಾಗಿದೆ.