ಮಾನವೀಯತೆಯೇ ಸತ್ತು ಹೋಯಿತಾ?: ತೀವ್ರ ಬಿಸಿಲಿನ ನಡುವೆ ಕಾರಿನೊಳಗೆ ಶ್ವಾನ ಲಾಕ್ ಮಾಡಿದ ಮಾಲೀಕ!
Viral News: ಪುಟ್ಟ ನಾಯಿಮರಿ, ಬೆಕ್ಕಿನ ಮರಿಗಳನ್ನು ಸುತ್ತ ಮುತ್ತಲಿನ ಬೀದಿಗಳಲ್ಲಿ ಬಿಟ್ಟು ಅವುಗಳು ನರಳಾಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ಕಂಡುಬಂದಿವೆ..ಇಷ್ಟಾದರೂ ಮನುಷ್ಯನಿಗೆ ಪಾಪ ಪ್ರಜ್ಞೆ ಅನ್ನೋದು ಕಾಡಿಲ್ಲ..ಇದಕ್ಕೆ ಸಾಕ್ಷಿ ಎಂಬಂತೆ ಧಗಧಗಿಸುವ ಬಿಸಿಲಿನಲ್ಲಿ ಮಾಲೀಕನೊಬ್ಬ ಕಾರಿನೊಳಗೆ ನಾಯಿಯನ್ನು ಲಾಕ್ ಮಾಡಿ ಹೋಗಿದ್ದಾನೆ. ನಾಯಿ ಉಸಿರಾಡಲು ಸಾಧ್ಯವಾಗದೆ ಪರದಾಡುತ್ತಿರುವ ವಿಡಿಯೊ ವೈರಲ್ ಆಗಿದೆ..
ತೀವ್ರ ಬಿಸಿಲಿನ ನಡುವೆ ಕಾರಿನೊಳಗೆ ಶ್ವಾನ ಲಾಕ್ -
ಲಕ್ನೋ,ಜೂ.26: ಸಾಕು ಪ್ರಾಣಿಗಳನ್ನು ಆರೈಕೆ ಮಾಡುವ ಜವಾಬ್ದಾರಿ ನಮ್ಮಲ್ಲಿ ಇದ್ದರೆ ಮಾತ್ರ ಅವುಗಳನ್ನು ನಾವು ಸಾಕಬೇಕು, ಪ್ರೀತಿಯಿಂದ ಸಲಹಬೇಕು.. ಪುಟ್ಟ ನಾಯಿಮರಿ, ಬೆಕ್ಕಿನ ಮರಿ ಗಳನ್ನು ಸುತ್ತ ಮುತ್ತಲಿನ ಬೀದಿಗಳಲ್ಲಿ ಬಿಟ್ಟು ಅವುಗಳು ನರಳಾಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ಕಂಡು ಬಂದಿವೆ..ಇಷ್ಟಾದರೂ ಮನುಷ್ಯನಿಗೆ ಪಾಪ ಪ್ರಜ್ಞೆ ಅನ್ನೋದು ಕಾಡಿಲ್ಲ..ಇದಕ್ಕೆ ಸಾಕ್ಷಿ ಎಂಬಂತೆ ಧಗಧಗಿಸುವ ಬಿಸಿಲಿನಲ್ಲಿ ಮಾಲೀಕನೊಬ್ಬ ಕಾರಿನೊಳಗೆ ನಾಯಿಯನ್ನು ಲಾಕ್ ಮಾಡಿ ಹೋಗಿದ್ದಾನೆ. ನಾಯಿ ಉಸಿರಾಡಲು ಸಾಧ್ಯವಾಗದೆ ಪರದಾಡುತ್ತಿರುವ ವಿಡಿಯೊ ವೈರಲ್ (Viral News) ಆಗಿದೆ..
ಲಕ್ನೋದ ಪತ್ರಕರ್‌ಪುರಂ ನಲ್ಲಿ ಈ ಘಟನೆ ನಡೆದಿದೆ. ಮಾರು ಕಟ್ಟೆಯಲ್ಲಿ ನಿಲ್ಲಿಸಿದ ಕಾರಿನೊಳಗೆ ಸಾಕು ನಾಯಿಯನ್ನು ಲಾಕ್ ಮಾಡಿರುವುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಶಾಖದ ನಡುವೆ ಕಾರಿನ ಗ್ಲಾಸ್ ಕ್ಲೋಸ್ ಮಾಡಲಾಗಿದ್ದು ನಾಯಿ ಬೊಗಳುವುದನ್ನು ತೋರಿಸಿದೆ. ಕಾರಿನೊಳಗೆ ಶ್ವಾನವು ಗಾಳಿ, ಬೆಳಕಿಲ್ಲದೆ ನರಕಯಾತನೆ ಅನುಭವಿಸುತ್ತಿದೆ.
ವಿಡಿಯೋ ನೋಡಿ:
DON’T IGNORE, SHARE NOW 🙏🏼👈🏽
— Aasra the helping hands (@charukhare99) June 26, 2026
तपती धूप में गाड़ी में डॉग को कर दिया लॉक, @lkopolice @uppolice कृपया संज्ञान लीजिए 🙏🏼लखनऊ के पत्रकारपुरम का मामला pic.twitter.com/iIQeoBOxWX
ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಒಳಗೆ ತಾಪಮಾನವು ವೇಗವಾಗಿ ಏರಬಹುದು. ಇದು ಪ್ರಾಣಿಗಳಿಗೆ ಜೀವಕ್ಕೆ ಅಪಾಯ ಕಾರಿ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಸಾಕುಪ್ರಾಣಿಗಳು ನಿರ್ಜಲೀ ಕರಣ, ಶಾಖದ ಬಳಲಿಕೆಯಿಂದ ತೀವ್ರ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ದಾರಿಹೋಕ ರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ತಾಪಮಾನವು ಹೆಚ್ಚುತ್ತಲೇ ಇದ್ದು ಕಾರಿನೊಳಗೆ ನಾಯಿಯೊಂದು ಸಿಲುಕಿ ಕೊಂಡಿದೆ.
Viral Video: ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ
ಕಿಟಕಿಗಳನ್ನು ಮುಚ್ಚಿದ್ದು ನಾಯಿ ಉಸಿರಾಟ ಮಾಡಲು ಸಾಧ್ಯವಾಗದೆ ನರಳುತ್ತಿತ್ತು. ಇದು ಪ್ರಾಣಿಗಳ ಜೀವಕ್ಕೆ ಕುತ್ತು ತರಬಲ್ಲದು ಎಂಬುದನ್ನು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ತಿಳಿಸಿದ್ದಾನೆ. ಮಾಲೀಕನು ತನ್ನ ವೈಯಕ್ತಿಕ ಕೆಲಸಕ್ಕಾಗಿ ಶ್ವಾನವನ್ನು ದೀರ್ಘಕಾಲದವರೆಗೆ ಕಾರಿನೊಳಗೇ ಬಿಟ್ಟು ಹೋಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.