ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs IRE: ಮೊದಲನೇ ಟಿ20ಐ ಪಂದ್ಯದ ಸೋಲಿಗೆ ಬಲವಾದ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

IND vs IRE: ಐರ್ಲೆಂಡ್‌ ಎದುರು 34 ರನ್‌ಗಳ ಶಾಕಿಂಗ್‌ ಸೋಲಿನ ಬಳಿಕ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ತಮ್ಮ ತಂಡದ ಸಹ ಆಟಗಾರರಿಂದ ಸಂದೇಶವನ್ನು ಸಾರಿದ್ದಾರೆ. ಅಲ್ಲದೆ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವೇನೆಂದು ಕೂಡ ತಿಳಿಸಿದ್ದಾರೆ. 183 ರನ್‌ಗಳನ್ನು ಗುರಿಯನ್ನು ಹಿಂಬಾಲಿಸಿದ ಭಾರತ ತಂಡ 148 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಮೊದಲನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

ಭಾರತದ ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Jun 26, 2026 11:03 PM

ನವದೆಹಲಿ: ಐರ್ಲೆಂಡ್‌ ಎದುರು ಮೊದಲನೇ ಟಿ20ಐ ಪಂದ್ಯದಲ್ಲಿ (IND vs IRE) 34 ರನ್‌ಗಳ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರು ತಮ್ಮ ಸಹ ಆಟಗಾರರಿಗೆ ಶಕ್ತಿಯುತ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ಮೊದಲನೇ ಪಂದ್ಯದಲ್ಲಿ ತಮ್ಮ ತಂಡ ಮಾಡಿದ ತಪ್ಪೇನು ಎಂಬುದನ್ನು ಅವರು ರಿವೀಲ್‌ ಮಾಡಿದ್ದಾರೆ. ಈ ಪಂದ್ಯದಲ್ಲಿ ಐರ್ಲೆಂಡ್‌ ನೀಡಿದ್ದ 183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಬ್ಯಾಟಿಂಗ್‌ ವೈಫಲ್ಯದಿಂದಾಗಿ 148 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಪ್ರವಾಸಿಗರು 0-1 ಹಿನ್ನಡೆ ಅನುಭವಿಸಿದ್ದಾರೆ.

ಭಾರತದ ನಾಯಕನಾಗಿ ಮೊದಲ ಟಿ20ಐ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಆರಂಭದಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ನಂತರ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ವಿಫಲವಾದ ಕಾರಣ ಪಂದ್ಯ ಕೈತಪ್ಪಿತು ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಹೇಳಿದ್ದಾರೆ.

"ಆರಂಭದಲ್ಲಿ ನಮ್ಮ ಬೌಲರ್‌ಗಳು ಅತ್ಯಂತ ಪರಿಣಾಮಕಾರಿಯಾಗಿ ಬೌಲ್‌ ಮಾಡಿದರು. ಆದರೆ ಮಧ್ಯಮ ಓವರ್‌ಗಳಲ್ಲಿ ನಾವು ನಮ್ಮ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ವಿಫಲರಾದೆವು. ಎದುರಾಳಿ ಬ್ಯಾಟರ್‌ಗಳಿಗೆ ನೇರವಾಗಿ ಹೊಡೆಯುವ ಅವಕಾಶ ನೀಡಿದೆವು. ಆ ಭಾಗದಲ್ಲಿ ಬೌಂಡರಿ ಚಿಕ್ಕದಾಗಿದ್ದರಿಂದ ಅವರು ಅದನ್ನು ಚೆನ್ನಾಗಿ ಬಳಸಿಕೊಂಡರು."

IND vs IRE: ಬೆಲ್‌ಫಾಸ್ಟ್‌ನಲ್ಲಿ ಟಾಸ್‌ಗೆ ಬಂದು ರೋಹಿತ್‌ ಶರ್ಮಾರ ದಾಖಲೆ ಮುರಿದ ಶ್ರೇಯಸ್‌ ಅಯ್ಯರ್‌!

"ನಮ್ಮ ಬೌಲಿಂಗ್ ಆರಂಭವನ್ನು ನೋಡಿದರೆ, 140 ರನ್‌ಗಳ ಗುರಿಯನ್ನು ಪಡೆಯಬಹುದೆಂದು ಭಾವಿಸಿದ್ದೆ. ಆದರೆ ನಾಯಕನಾಗಿ ಇದು ನನ್ನ ಮೊದಲ ಪಂದ್ಯ. ಈ ಸೋಲನ್ನು ಮರೆತು, ಇದರಿಂದ ಸಾಕಷ್ಟು ಪಾಠಗಳನ್ನು ಕಲಿಯುತ್ತೇವೆ. ಮುಂದಿನ ಪಂದ್ಯದಲ್ಲಿ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತೇವೆ," ಎಂದು ಅಯ್ಯರ್ ಹೇಳಿದರು.

ವೇಗಿಗಳಿಗೆ ಶ್ರೇಯಸ್‌ ಅಯ್ಯರ್‌ ಮೆಚ್ಚುಗೆ

"ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಉತ್ತಮ ನೆರವು ಸಿಕ್ಕಿತ್ತು. ಶಿವಂ ದುಬೆ ಯಾವಾಗಲೂ ನಿರ್ಣಾಯಕ ಓವರ್‌ಗಳನ್ನು ಬೌಲ್‌ ಮಾಡುತ್ತಾರೆ. ಆದ್ದರಿಂದ ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಗಾಯದಿಂದ ಮರಳಿದ ಬಳಿಕ ಹರ್ಷಿತ್ ರಾಣಾ ಅದ್ಭುತವಾಗಿ ಬೌಲ್‌ ಮಾಡಿದರು," ಎಂದು ಶ್ಲಾಘಿಸಿದರು.

"ತಂಡಕ್ಕೆ ನನ್ನ ಸಂದೇಶ ಒಂದೇ – ಯಾವುದನ್ನೂ ಲಘುವಾಗಿ ಪರಿಗಣಿಸಬಾರದು. ಪ್ರತಿಯೊಂದು ಪಂದ್ಯದಲ್ಲೂ ಕಠಿಣ ಪರಿಶ್ರಮ ಮಾಡಬೇಕು, ಪ್ರಸ್ತುತ ಕ್ಷಣದಲ್ಲಿ ಗಮನ ಕೇಂದ್ರೀಕರಿಸಬೇಕು. ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಅವಕಾಶ ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಕೈಚೆಲ್ಲಬಾರದು," ಎಂದು ಶ್ರೇಯಸ್‌ ಅಯ್ಯರ್ ತಿಳಿಸಿದ್ದಾರೆ.

IND vs IRE: ಮೊಟ್ಟ ಮೊದಲ ಬಾರಿ ಭಾರತ ತಂಡವನ್ನು ಮಣಿಸಿ ಇತಿಹಾಸ ಬರೆದ ಐರ್ಲೆಂಡ್‌!

ಪಂದ್ಯವನ್ನು ತಿರುಗಿಸಿದ್ದ ಗ್ಯಾರೆಥ್‌ ಡೆಲಾನಿ

ಮೊದಲ ಟಿ20ಐ ಪಂದ್ಯದಲ್ಲಿ ಆರಂಭಿಕ ಹಂತದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತ್ತು. 14.3 ಓವರ್‌ಗಳ ಅಂತ್ಯಕ್ಕೆ ಐರ್ಲೆಂಡ್ 5 ವಿಕೆಟ್ ಕಳೆದುಕೊಂಡು ಕೇವಲ 115 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಪಂದ್ಯಕ್ಕೆ ಮಹತ್ವದ ತಿರುವು ನೀಡಿದವರು ಗ್ಯಾರೆಥ್‌ ಡೆಲಾನಿ. ಅವರು 8 ರನ್ ಗಳಿಸಿದ್ದಾಗ ಅಭಿಷೇಕ್ ಶರ್ಮಾ ನೀಡಿದ ಜೀವದಾನವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 32 ಎಸೆತಗಳಲ್ಲಿ 49 ರನ್ ಸಿಡಿಸಿದರು. ಆ ಮೂಲಕ ಐರ್ಲೆಂಡ್ ತಂಡವನ್ನು 150 ರನ್‌ಗಳ ಗಡಿ ದಾಟಿಸಿದರು. ಡೆಲಾನಿ ಅವರ ಈ ಅಮೂಲ್ಯ ಇನಿಂಗ್ಸ್ ಪಂದ್ಯದ ಗತಿಯನ್ನೇ ಬದಲಿಸಿತು. ಅದರ ಫಲವಾಗಿ ಐರ್ಲೆಂಡ್ ಭಾರತ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ತನ್ನ ಇತಿಹಾಸದಲ್ಲೇ ಮೊದಲ ಜಯ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿತು.