ಮಹಿಳಾ ಪೊಲೀಸ್ ಅಧಿಕಾರಿಯ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ ನಿಹಾಂಗ್ ಸಿಖ್ಖರು; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
Woman Police Officer Attacked: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ನಿಹಾಂಗ್ ಸಿಖ್ಖರು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ. ಅಮೃತಸರದ ಝಾಬಲ್ ರಸ್ತೆಯಲ್ಲಿ ಕೆಲವು ನಿಹಾಂಗ್ ಸಿಖ್ಖರು (ಸಿಖ್ ಸಮುದಾಯದ ಸಾಂಪ್ರದಾಯಿಕ ಯೋಧರ ಗುಂಪು) ನಡೆಸಿದ ದಿಗ್ಬಂಧನ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ಗದ್ದಲ ಭುಗಿಲೆದ್ದಿತು.
ಪಂಜಾಬ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆಯೇ ಹಲ್ಲೆ ನಡೆಸಿದ ನಿಹಾಂಗ್ ಸಿಖ್ಖರು -
ಚಂಡೀಗಢ, ಸೆ. 19: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ನಿಹಾಂಗ್ ಸಿಖ್ಖರು (ಸಿಖ್ ಸಮುದಾಯದ ಸಾಂಪ್ರದಾಯಿಕ ಯೋಧರ ಗುಂಪು) ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಅಮೃತಸರದಲ್ಲಿ ನಡೆದಿದೆ. ನಿಹಾಂಗ್ ಸಿಖ್ಖರಿಂದ ಹಲ್ಲೆಗೊಳಗಾಗುತ್ತಿದ್ದ ಎದುರಾಳಿ ಗುಂಪಿಗೆ ಸೇರಿದ ಮತ್ತೊಬ್ಬ ನಿಹಾಂಗ್ ಸಿಖ್‌ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ, ಕೆಲವರು ಮಹಿಳಾ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ತಳ್ಳಿದ್ದಾರೆ (Police Officer Attacked). ಅಮೃತಸರದ ಝಾಬಲ್ ರಸ್ತೆಯಲ್ಲಿ ಕೆಲವು ನಿಹಾಂಗ್ ಸಿಖ್ಖರುನಡೆಸಿದ ದಿಗ್ಬಂಧನ ಮತ್ತು ಪ್ರತಿಭಟನೆ ಸಂದರ್ಭದಲ್ಲಿ ಈ ಗದ್ದಲ ಭುಗಿಲೆದ್ದಿತು.
ನಿಹಾಂಗ್ ಸಿಖ್ ಒಬ್ಬರು ಬೈಕ್‌ನಲ್ಲಿ ಬಂದಾಗ, ಪ್ರತಿಭಟನಾಕಾರರು ಅವರನ್ನು ತಡೆದು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಎದುರಾಳಿ ಬಣದವರು ತಮ್ಮ ಮೇಲೆ ಬೇಹುಗಾರಿಕೆ ನಡೆಸಲು ಆತನನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ, ಆತನ ಫೋನ್ ಕಸಿದುಕೊಂಡು ದೊಣ್ಣೆಗಳಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.
ಇಲ್ಲಿದೆ ವಿಡಿಯೊ:
"ਲੱਤਾਂ ਬੰਨੋ ਇਹਦੀਆਂ ਆਹ ਫੜ੍ਹੋ CID ਵਾਲਾ ਇਹ" ਨਿਹੰਗ ਸਿੰਘਾਂ ਨੇ ਫੜ੍ਹ ਲਿਆ ਬੰਦਾ, ਮੌਕੇ 'ਤੇ ਪਹੁੰਚੇ SHO ਮੈਡਮ ਨਾਲ ਹੋਈ ਧੱਕਾ-ਮੁੱਕੀ,ਆਹ ਵੇਖੋ ਕੀ ਬਣਿਆ ਮਾਹੌਲ#amritsar #punjab #jagbani #cid pic.twitter.com/HHrRNpHuL2
— JagBani (@JagbaniOnline) September 19, 2026
ಘಟನೆಯ ಬಗ್ಗೆ ಮಾಹಿತಿ ಪಡೆದ ಗೇಟ್ ಹಕಿಮಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮಂಜಿತ್ ಕೌರ್, ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾನಿರತ ನಿಹಾಂಗ್ ಸಿಖ್ಖರು ಮತ್ತು ಪೊಲೀಸ್ ಅಧಿಕಾರಿ ಮಂಜಿತ್ ಕೌರ್ ನಡುವೆ ಮಾತಿನ ಚಕಮಕಿ ನಡೆಯಿತು. ಉದ್ರಿಕ್ತ ನಿಹಾಂಗ್ ಸಿಖ್ಖರು ಮಂಜಿತ್ ಕೌರ್ ಅವರ ಕೊರಳ ಪಟ್ಟಿ ಹಿಡಿದು ಹಲ್ಲೆ ನಡೆಸಿದರು. ಇದ್ಯಾವುದಕ್ಕೆ ಬೆದರದ ಮಂಜಿತ್ ಕೌರ್ ಹಿಂದೆ ಸರಿಯದೆ, ಗಾಯಗೊಂಡಿದ್ದ ನಿಹಾಂಗ್ ಸಿಖ್ ವ್ಯಕ್ತಿಯನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಕರೆದೊಯ್ದರು.
ಬೀದಿ ಬದಿ ವ್ಯಾಪಾರಿಯ ಆಹಾರವನ್ನು ರಸ್ತೆಗೆ ಎಸೆದು ಹಲ್ಲೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ!
ಏನಿದು ಗಲಾಟೆ?
ಎರಡು ಗುಂಪುಗಳ ನಡುವಿನ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯು ನಡೆದಿತ್ತು ಎನ್ನಲಾಗಿದೆ. ಈ ಹಿಂದೆ ಎದುರಾಳಿ ಬಣದವರು ತಮ್ಮ ಮೇಲೆ ಹಲ್ಲೆ ನಡೆಸಿ, ಗುಂಡು ಹಾರಿಸಿದ್ದರು ಎಂದು ಆರೋಪಿಸಿ ಪ್ರತಿಭಟನಾಕಾರರು ಧರಣಿ ಕುಳಿತಿದ್ದರು. ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ತಮ್ಮ ಮೇಲೆ ಗೂಢಚಾರಿಕೆ ನಡೆಸಲು ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೆ, ಪೊಲೀಸರು ಸಹ ಎದುರಾಳಿ ಬಣದೊಂದಿಗೆ ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಇದರಿಂದ ಪರಿಸ್ಥತಿ ವಿಕೋಪಕ್ಕೆ ತಿರುಗಿತು.
ರಸ್ತೆಯಲ್ಲಿ ಕೆಲವು ವಾಹನಗಳು ಸಂಚರಿಸಿದ ವಿಚಾರದಿಂದ ಈ ವಿವಾದ ಉಂಟಾಗಿದೆ ಎಂದು ಮಂಜೀತ್ ಕೌರ್ ತಿಳಿಸಿದ್ದಾರೆ. ಈ ವಾಹನಗಳು ಮೇಜರ್ ಸಿಂಗ್ ಅವರಿಗೆ ಸೇರಿದ್ದವು ಎಂದು ಪ್ರತಿಭಟನಾ ನಿಹಾಂಗ್ ಸಿಖ್ಖರು ಧಾವಿಸಿದ್ದರು. ಈ ಉಭಯ ಬಣಗಳ ನಡುವೆ ದೀರ್ಘಕಾಲದ ವಿವಾದವಿದೆ. ವಾಹನಗಳು ಹಾದುಹೋಗುವಾಗ ಪ್ರತಿಭಟನಾಕಾರರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಪ್ರತಿಭಟನೆಯಿಂದಾಗಿ ಜ್ಞಾಬಲ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನಗಳು ಪರ್ಯಾಯ ಮಾರ್ಗಗಳ ಮೂಲಕ ಚಲಾಯಿಸಬೇಕಾಯಿತು.
ಅಮೃತಸರದಲ್ಲಿ ಗುರುವಾರ (ಸೆಪ್ಟೆಂಬರ್ 17) ತಡರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅಸಿಸ್ಟೆಂಟ್ ಸಬ್-ಇನ್ಸ್‌ಪೆಕ್ಟರ್ ಹರ್ಜಿತ್ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಕೇವಲ ಒಂದು ದಿನದಲ್ಲೇ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಈ ರೀತಿ ದೈಹಿಕ ದೌರ್ಜನ್ಯ ನಡೆಸಿರುವುದು ಪೊಲೀಸ್ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.