ಚಿಕ್ಕಮ್ಮನ ಕೈಯಲ್ಲಿದ್ದ 6 ತಿಂಗಳ ಮಗುವಿನ ಮೇಲೆ ಪಿಟ್‌ಬುಲ್ ಶ್ವಾನದ ದಾಳಿ; ಇಲ್ಲಿದೆ ಭಯಾನಕ ವಿಡಿಯೊ
ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ವಾಕಿಂಗ್ ಹೋಗುತ್ತಿದ್ದಾಗ ಪಿಟ್‌ಬುಲ್ ನಾಯಿಯೊಂದು ಮಗುವಿನ ಮೇಲೆ ದಾಳಿ ನಡೆಸಿರುವ ಭೀಕರ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ. ಇದರಿಂದ 6 ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿ ದಾಳಿಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಹರಿಯಾಣ: ಚಿಕ್ಕಮ್ಮನೊಂದಿಗೆ ವಾಕಿಂಗ್ ಹೋಗುತ್ತಿದ್ದ ಮಗುವಿನ ಮೇಲೆ ಪಿಟ್ ಬುಲ್ ನಾಯಿಯೊಂದು (pit bull attack) ಭೀಕರವಾಗಿ ದಾಳಿ ನಡೆಸಿದೆ. ಇದರಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಹರಿಯಾಣದ (Haryana) ಸೋನಿಪತ್‌ನಲ್ಲಿ (Sonipat) ನಡೆದಿದೆ. ಆರು ತಿಂಗಳ ಮಗುವನ್ನು ಎತ್ತಿಕೊಂಡು ಮಹಿಳೆಯೊಬ್ಬರು ವಾಕಿಂಗ್ ಹೋಗುತ್ತಿದ್ದರು. ಆಗ ಪಿಟ್‌ಬುಲ್ ನಾಯಿ (Pet dog attack) ಮಗುವಿನ ಮೇಲೆ ಎರಗಿದೆ. ಈ ಘಟನೆ ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳ ಸೆರೆಯಾಗಿದೆ. ಮಗುವನ್ನು ರಕ್ಷಿಸಲು ಮಹಿಳೆ ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಆದರೆ ನಾಯಿಯಿಂದ ಬಿಡಿಸಿಕೊಳ್ಳುವುದು ಕಷ್ಟವಾಯಿತು. ಸುತ್ತಮುತ್ತ ಹೆಚ್ಚಿನ ಜನ ಸೇರಿದ್ದು, ವ್ಯಕ್ತಿಯೊಬ್ಬರು ಬಂದು ಕೋಲಿನಿಂದ ಹೊಡೆದಾಗ ಮಗುವನ್ನು ನಾಯಿ ಬಿಟ್ಟಿದೆ.
ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಚಿಕ್ಕಮ್ಮನ ಕಂಕುಳಲ್ಲಿದ್ದ ಆರು ತಿಂಗಳ ಮಗುವನ್ನು ಕಂಡ ಪಿಟ್ ಬುಲ್ ನಾಯಿ ಮಗುವಿನ ಮೇಲೆರಗಿ ಅದನ್ನು ಹಿಡಿದು ರಸ್ತೆಯಲ್ಲಿ ಎಳೆದುಕೊಂಡು ಹೋಯಿತು. ಜನರು ಅದನ್ನು ತಡೆಯಲು ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಈ ಸಂದರ್ಭದಲ್ಲಿ ಮಗು ಗಂಭೀರವಾಗಿ ಗಾಯಗೊಂಡಿದೆ.
ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋದ ಕಾರ್: ಒಂದೇ ಕುಟುಂಬದ 7 ಜನ ಸೇರಿ 8 ಮಂದಿ ದುರ್ಮರಣ
ಹರಿಯಾಣದ ಸೋನಿಪತ್‌ನಲ್ಲಿ ನಡೆದ ಈ ಘಟನೆಯ ಆತಂಕಕಾರಿ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸೆಪ್ಟೆಂಬರ್ 14 ರಂದು ಸಿಕ್ಕಾ ಕಾಲೋನಿಯಲ್ಲಿ ಮಗುವನ್ನು ಅದರ ಚಿಕ್ಕಮ್ಮ ಹೊರಗೆ ಕರೆದೊಯ್ದಿದ್ದಾಗ ಈ ಘಟನೆ ನಡೆದಿದೆ. ನಾಯಿಯ ಮಾಲೀಕ ಮಗುವಿನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.
Pitbull attacks 6-month-old in Sonipat; family struggles to rescue child
— The Siasat Daily (@TheSiasatDaily) September 18, 2026
A six-month-old child was severely injured after being attacked by a pet Pitbull in Sonipat, Haryana. The child was rushed to hospital for treatment.
A video of the incident shows family members trying to… pic.twitter.com/uw9c3lvJje
ನಾಯಿ ಮಗುವಿನ ಮೇಲೆ ಕ್ರೂರವಾಗಿ ದಾಳಿ ನಡೆಸುತ್ತಿದ್ದರೂ ನಾಯಿಯ ಮಾಲೀಕ, ಮನೆಯವರಿಗೂ ಕೂಡ ಅದನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ವ್ಯಕ್ತಿಯೊಬ್ಬರು ಕೋಲು ಹಿಡಿದು ಬಂದು ನಾಯಿಗೆ ಬಾರಿಸಿದರು. ಆಗ ಅದು ಮಗುವನ್ನು ಬಿಟ್ಟಿದೆ.
ಮಗು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಅದನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರೋಹ್ಟಕ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಗುವಿನ ಕುಟುಂಬವು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ.
ಪಿಟ್ ಬುಲ್ ನಾಯಿಯ ದಾಳಿಯು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಅದನ್ನು ಯಾವ ಪರಿಸ್ಥಿತಿಯಲ್ಲಿ ಸಾಕಲಾಗುತ್ತಿತ್ತು ಮತ್ತು ಮಾಲೀಕರು ಅನ್ವಯವಾಗುವ ನಿಯಮಗಳು ಹಾಗೂ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸಿದ್ದರೇ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ.
ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋದ ಕಾರ್: ಒಂದೇ ಕುಟುಂಬದ 7 ಜನ ಸೇರಿ 8 ಮಂದಿ ದುರ್ಮರಣ
ಪಟಿಯಾಲಾದಲ್ಲಿಯೂ ನಡೆದಿತ್ತು
ಕಳೆದ ಆಗಸ್ಟ್ ತಿಂಗಳ ಆರಂಭದಲ್ಲಿ ಪಂಜಾಬ್‌ನ ಪಟಿಯಾಲಾದಲ್ಲಿ ಬಾಡಿಗೆ ಮನೆ ವೀಕ್ಷಿಸಲು ಹೋಗಿದ್ದ ದಂಪತಿಯ ಮೇಲೆ ಪಿಟ್ ಬುಲ್ ನಾಯಿಯೊಂದು ದಾಳಿ ನಡೆಸಿತು. ಇದರಿಂದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಅಂಕಿತ್ ಸಭರ್ವಾಲ್ ಮತ್ತು ಚಂಡೀಗಢ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿರುವ ಅವರ ಪತ್ನಿ ಶಿಫಾಲಿ ಸಭರ್ವಾಲ್ ಅವರು ತೀವ್ರವಾಗಿ ಗಾಯಗೊಂಡಿದ್ದರು.