ಬಿಹಾರ ನೆರೆ ಸಂತ್ರಸ್ತರಿಗೆ ಹಣ್ಣು ಕೊಡಲು ಬಂದ ಹರಿಯಾಣದ ಸ್ವಯಂಸೇವಕ: ಶಿಸ್ತು ಮರೆತು ಕಸಿದುಕೊಂಡ ಜನ!
Viral News: ಇತ್ತೀಚೆಗೆ ಬಿಹಾರದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ್ಣುಗಳನ್ನು ಹಂಚಲೆಂದು ಹರಿಯಾಣದಿಂದ ಬಂದಿದ್ದ 'ಹರ್ ಮೈದಾನ್ ಫತೇಹ್ ಸೊಸೈಟಿ' ಎನ್‌ಜಿಒ ಸಂಸ್ಥೆಯ ಅಧ್ಯಕ್ಷ ಸಹಜ್ ದುಗ್ಗಲ್ ಅವರು ಜನರ ಹತ್ತಿರ ತೆರಳಿದ್ದರು. ಆದರೆ ಅಲ್ಲಿದ್ದ ಜನರು ಶಿಸ್ತು ಪಾಲಿಸದೇ ಹಣ್ಣುಗಳನ್ನು ಕಸಿದುಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.
ಶಿಸ್ತು ಕಾಪಾಡದೇ ಹಣ್ಣುಗಳನ್ನು ಕಸಿದುಕೊಂಡ ಬಿಹಾರದ ನೆರೆ ಸಂತ್ರಸ್ತರು -
ಬಿಹಾರ,ಸೆ.18: ಭೀಕರ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ಬಂದಿದ್ದ ಎನ್‌ಜಿಒ ಸಂಸ್ಥೆಯ ಸ್ವಯಂ ಸೇವಕರೊಬ್ಬರಿಗೆ ಕಹಿ ಅನುಭವ ಉಂಟಾಗಿದೆ. ಇತ್ತೀಚೆಗೆ ಬಿಹಾರ ದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ್ಣುಗಳನ್ನು ಹಂಚಲೆಂದು ಹರಿಯಾಣದಿಂದ ಬಂದಿದ್ದ 'ಹರ್ ಮೈದಾನ್ ಫತೇಹ್ ಸೊಸೈಟಿ' ಎನ್‌ಜಿಒ ಸಂಸ್ಥೆಯ ಅಧ್ಯಕ್ಷ ಸಹಜ್ ದುಗ್ಗಲ್ ಅವರು ಜನರ ಹತ್ತಿರ ತೆರಳಿದ್ದರು. ಆದರೆ ಅಲ್ಲಿದ್ದ ಜನರು ಶಿಸ್ತು ಪಾಲಿಸದೇ ಹಣ್ಣುಗಳನ್ನು ಕಸಿದುಕೊಳ್ಳಲು ಯತ್ನಿಸಿದ ಘಟನೆ (Viral News) ನಡೆದಿದೆ.
ಈ ಘಟನೆಯಿಂದ ಅಸಮಾಧಾನಗೊಂಡ ದುಗ್ಗಲ್, ಅವರು ಜನರ ನಡವಳಿಕೆಯ ಬಗ್ಗೆ ಪದೇ ಪದೇ ಪ್ರಶ್ನಿಸಿದ್ದಾರೆ. ಸಹಜ್ ದುಗ್ಗಲ್ ಹಾಗೂ ಅವರ ತಂಡ ಹಣ್ಣಿನ ಪೆಟ್ಟಿಗೆಗಳೊಂದಿಗೆ ತೆರಳುತ್ತಿದ್ದಂತೆ ಜನರು ಸರತಿಯಲ್ಲಿ ನಿಲ್ಲದೆ ಒಮ್ಮೆಲೆ ಮುಗಿಬಿದ್ದಿದ್ದಾರೆ. ಕೆಲವರು ಪೆಟ್ಟಿಗೆಗಳನ್ನು ತುಳಿದು, ಸಿಕ್ಕ ಸಿಕ್ಕಷ್ಟೇ ಹಣ್ಣುಗಳನ್ನು ಕಸಿದುಕೊಂಡು ಓಡಿಹೋಗಿದ್ದಾರೆ.
ವಿಡಿಯೋ ನೋಡಿ:
ಹಣ್ಣುಗಳನ್ನು ಪಡೆಯುವಾಗ ಸ್ಥಳೀಯರು ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರೂ ಯಾರೂ ಅವರ ಮಾತನ್ನು ಕೇಳಲಿಲ್ಲ. ತನ್ನ ಜೊತೆ ಬಂದಿದ್ದ ಮಕ್ಕಳನ್ನು ಕೂಡ ಜನರು ತಳ್ಳಾಡಿದ್ದಾರೆ. ಇಷ್ಟೊಂದು ದೂರದಿಂದ ಸಹಾಯ ಮಾಡಲು ನಾವು ಬಂದಿದ್ದೂ ಈ ವರ್ತನೆ ತಮಗೆ ಬೇಸರ ತರಿಸಿದೆ ಎಂದು ಹೇಳಿಕೊಂಡಿದ್ದಾರೆ. ನಾವು ಹೇಳಿದ ಮಾತಿಗೂ ಗೌರವ ಕೊಡದೇ ನಡೆಸಿಕೊಂಡ ರೀತಿಗೆ ಬೇಸರ ಹೊರಹಾಕಿದ್ದಾರೆ.
Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ನಂತರ ಮತ್ತೊಂದು ವಿಡಿಯೋ ಶೇರ್ ಮಾಡಿದ ಸಹಜ್ ಎಲ್ಲಾ ಜನರೂ ಹೀಗೆ ಮಾಡಲಿಲ್ಲ. ಸ್ಥಳೀಯರಲ್ಲಿ ಕೆಲವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಕೆಲವರು ತೋರುವ ಅಶಿಸ್ತಿನ ವರ್ತನೆ ಎಲ್ಲರಿಗೂ ಕೆಟ್ಟ ಹೆಸರು ಎಂದು ಕಿಡಿಕಾರಿದ್ದಾರೆ.