ಮೊಟ್ಟೆಯಲ್ಲಿ ಹುಳು ಪತ್ತೆ: ಬ್ಲಿಂಕಿಟ್ ವಿರುದ್ಧ ದೂರು; ಮಂಗಳೂರಿನ ಆಹಾರ ಮಳಿಗೆ ಮೇಲೆ ಅಧಿಕಾರಿಗಳ ದಾಳಿ
ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ನಲ್ಲಿ ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು ಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗ್ರಾಹಕರು ದೂರು ನೀಡಿದ ಬಳಿಕ ತನಿಖೆ ಹಿನ್ನೆಲೆಯಲ್ಲಿ ಆಹಾರ ಮಳಿಗೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಳಿಗೆಯಲ್ಲಿ ಹಾನಿಗೊಳಗಾಗಿರುವ ಮೊಟ್ಟೆಗಳು ಕಂಡು ಬಂದಿದ್ದರಿಂದ ಶೇಖರಣಾ ಕೊಠಡಿಯನ್ನು ಸೀಲ್ ಮಾಡಲಾಗಿದೆ.
ಸಂಗ್ರಹ ಚಿತ್ರ -
ಮಂಗಳೂರು: ಬ್ಲಿಂಕಿಟ್ ನಲ್ಲಿ(Blinkit) ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು ಪತ್ತೆಯಾದ (Worm in egg) ಹಿನ್ನೆಲೆಯಲ್ಲಿ ಮಂಗಳೂರಿನ (Mangaluru) ಆಹಾರ ಮಳಿಗೆಯೊಂದರ ಶೇಖರಣಾ ಕೊಠಡಿಯನ್ನು ಸೀಲ್ ಮಾಡಲಾಗಿದೆ. ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ನಲ್ಲಿ ಗ್ರಾಹಕರೊಬ್ಬರು ಮೊಟ್ಟೆಯನ್ನು ಆರ್ಡರ್ ಮಾಡಿದ್ದರು. ಇದರಲ್ಲಿ ಹುಳುಗಳು ಪತ್ತೆಯಾಗಿದ್ದರಿಂದ ಅವರು ದೂರು ನೀಡಿದ ಬಳಿಕ ತನಿಖೆ ಹಿನ್ನೆಲೆಯಲ್ಲಿ ಆಹಾರ ಮಳಿಗೆ ಮೇಲೆ ಆಹಾರ ಸುರಕ್ಷತಾ (food safety) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಆಹಾರ ಮಳಿಗೆಯ ಶೇಖರಣಾ ಕೊಠಡಿಯನ್ನು ಸ್ವಚ್ಛಗೊಳಿಸಲು ಸೀಲ್ ಮಾಡಲಾಗಿದೆ.
ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ನಲ್ಲಿ ಗ್ರಾಹಕರೊಬ್ಬರು ಮೊಟ್ಟೆಯನ್ನು ಆರ್ಡರ್ ಮಾಡಿದ್ದು ಇದರಲ್ಲಿ ಹುಳು ಕಂಡು ಬಂದಿದೆ. ಈ ಕುರಿತು ಅವರು ದೂರು ನೀಡಿದ ಬಳಿಕ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರಿನ ಬ್ಲಿಂಕಿಟ್ ಸೌಲಭ್ಯವನ್ನು ಪರಿಶೀಲಿಸಿದರು. ಹೆಚ್ಚಿನ ವಿವರಣೆ ಪಡೆದು ಆಹಾರ ಮಳಿಗೆಯ ಶೇಖರಣಾ ಕೊಠಡಿಯನ್ನು ಪರಿಶೀಲಿನ್ಸ್ ಅದನ್ನು ಸ್ವಚ್ಛಗೊಳಿಸಲು ಸೀಲ್ ಮಾಡಿದ್ದಾರೆ.
Vishwavani Health: ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?
ಈ ಕುರಿತು ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಹಾರ ಸುರಕ್ಷತಾ ಅಧಿಕಾರಿಗಳು, ಬ್ಲಿಂಕಿಟ್ ಮೂಲಕ ಖರೀದಿಸಿದ ಮೊಟ್ಟೆಯಲ್ಲಿ ಹುಳು ಕಂಡು ಬಂದ ಬಳಿಕ ಗ್ರಾಹಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಮಂಗಳೂರಿನಲ್ಲಿರುವ ಬ್ಲಿಂಕಿಟ್ ಆನ್‌ಲೈನ್ ಚಿಲ್ಲರೆ ಮಳಿಗೆಗಳನ್ನು ಪರಿಶೀಲನೆ ನಡೆಸಿದೆ ಎಂದರು.
ಗ್ರಾಹಕರು ನೇರವಾಗಿ ಕರ್ನಾಟಕ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಫಳ್ನೀರ್ ಪ್ರದೇಶದ ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಲಿಂಕಿಟ್ ಸೌಲಭ್ಯಗಳನ್ನೂ ಪರಿಶೀಲನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮುರಿದ ಮೊಟ್ಟೆಗಳನ್ನು ಹೊಂದಿರುವ ಪ್ಯಾಕೆಟ್‌ಗಳು ಪತ್ತೆಯಾಗಿದೆ. ಹಾಳಾಗಿರುವ ಎಲ್ಲಾ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ತೂಕ ನಿಯಂತ್ರಣದಿಂದ ಚರ್ಮದ ಆರೈಕೆವರೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನ ಒಂದೆರಡಲ್ಲ!
ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ಸಂಗ್ರಹಣೆ ಕೊಠಡಿಯನ್ನು ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದೆ. ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ವಿವರಣೆ ಕೋರಿ ಸಂಸ್ಥೆಗೆ ನೋಟಿಸ್ ನೀಡಿರುವುದಾಗಿ ಆಹಾರ ಇಲಾಖೆ ತಿಳಿಸಿದೆ.