ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Side Effects Of Packaged Food: ಮಕ್ಕಳಿಗೆ ರೆಡಿಮೇಡ್ ಆಹಾರ ನೀಡುವ ಮುನ್ನ ಎಚ್ಚರ

Health Tips: ಬೇಸಗೆ ರಜೆಯಲ್ಲಿ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುತ್ತೇವೆ. ಹೆಚ್ಚಾಗಿ ಅವರು ಈ ಸಂದರ್ಭದಲ್ಲಿ ರೆಡಿಮೇಡ್ ಆಹಾರಗಳನ್ನು ಬಯಸುತ್ತಾರೆ. ಮಕ್ಕಳಿಗೆ ಕೊಡುವ ರೆಡಿಮೇಡ್ ಆಹಾರ ಅವರ ಆರೋಗ್ಯವನ್ನು ಹಾಳು ಮಾಡಬಹುದು ಎಚ್ಚರ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ರೆಡಿಮೇಡ್ ಆಹಾರ ಮಕ್ಕಳಿಗೆ ನೀಡುವ ಮುನ್ನ ಅದರ ಲೇಬಲ್ ಪರೀಕ್ಷೆ ಬಹಳ ಮುಖ್ಯ. ಅದು ಯಾವ ರೀತಿ ಎಂಬುದನ್ನು ಅವರು ವಿವರಿಸಿದ್ದು ಹೀಗೆ...

ಬೇಸಗೆಯಲ್ಲಿ ಮಕ್ಕಳ ಆಹಾರ ಹೇಗಿರಬೇಕು?

ಸಾಂದರ್ಭಿಕ ಚಿತ್ರ -

ಬೆಂಗಳೂರು, ಏ. 21: ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿ (healthy diet) ಬೊಜ್ಜಿನ ಸಮಸ್ಯೆ, ಥೈರಾಯ್ಡ್, ಪಿಸಿಒಡಿ, ಹಾರ್ಮೋನ್ಸ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ರೆಡಿಮೇಡ್ ಆಹಾರಗಳು (Side Effects Of Packaged Food). ಇವುಗಳಲ್ಲಿ ಅತಿಯಾದ ಸಕ್ಕರೆ, ಕೆಡದಂತೆ ಸಂರಕ್ಷಿಸಲು ಹಾಕುವ ರಾಸಾಯನಿಕಗಳು ಮಕ್ಕಳ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ (Dr. Anita). ʼವಿಶ್ವವಾಣಿ ಹೆಲ್ತ್‌ʼ (Vishwavani health) ಯೂಟ್ಯೂಬ್‌ ಚಾನೆಲ್‌ನಲ್ಲಿಈ ಕುರಿತು ಮಾಹಿತಿ ನೀಡಿದ ಅವರು, ಮಕ್ಕಳಿಗೆ ರೆಡಿಮೇಡ್ ಆಹಾರ ನೀಡುವಾಗ ಏನೆಲ್ಲ ಅಂಶಗಳನ್ನು ಗಮನಿಸಬೇಕು ಎಂಬುದನ್ನು ವಿವರಿಸಿದರು.

ರೆಡಿಮೇಡ್ ಆಹಾರದಲ್ಲಿರುವ ಕೆಲವೊಂದು ಗೌಪ್ಯ ಮಾಹಿತಿಗಳ ಬಗ್ಗೆ ಎಲ್ಲರೂ ತಿಳಿದಿರಬೇಕು. ಮುಖ್ಯವಾಗಿ ಪೋಷಕರು ಇದನ್ನು ತಿಳಿದು, ಈ ಬಗ್ಗೆ ಮಕ್ಕಳಿಗೂ ತಿಳಿಸಬೇಕು. ಯಾವುದೇ ರೆಡಿಮೇಡ್ ಆಹಾರವನ್ನು ಖರೀದಿ ಮಾಡುವಾಗ ಲೇಬಲ್ ಪರೀಕ್ಷೆ ಮಾಡುವುದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಅವರು.

ವಿಡಿಯೊ ಇಲ್ಲಿದೆ:



ರೆಡಿಮೇಡ್ ಆಹಾರದಲ್ಲಿ ಸಕ್ಕರೆ, ಕೆಡದಂತೆ ಸಂರಕ್ಷಿಸಲು ಹಾಕುವ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಮಕ್ಕಳಿಗೆ ನೀಡುವ ಎನರ್ಜಿ ಡ್ರಿಂಕ್, ಬಿಸ್ಕೆಟ್ಸ್, ಪ್ರೊಟೀನ್ ಪೌಡರ್ ಗಳು ಹೀಗೆ ಏನೇ ಇರಲಿ ಅವುಗಳ ಲೇಬಲ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎನ್ನುತ್ತಾರೆ ಡಾ. ಅನಿತಾ.

ಮಹಿಳೆಯರನ್ನು ಆದಿಶಕ್ತಿ ಎನ್ನಲು ಕಾರಣವೇನು? ವಿಜ್ಞಾನ ಈ ಬಗ್ಗೆ ಹೇಳುವುದೇನು?

ಲೇಬಲ್ ಗಮನಿಸುವುದು ಹೇಗೆ?

ಮಕ್ಕಳಿಗೆ ಮನೆ ಆಹಾರ ಅತ್ಯುತ್ತಮ. ಆದರೆ ಎಲ್ಲಾ ಸಂದರ್ಭದಲ್ಲಿ ಮನೆ ಆಹಾರವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ರೆಡಿಮೇಡ್ ಆಹಾರ ತೀರಾ ಅನಿವಾರ್ಯವಾದಾಗ ಮಾತ್ರ ನೀಡಿದರೆ ಒಳ್ಳೆಯದು. ಇದಕ್ಕಾಗಿ ಆಹಾರ ಖರೀದಿ ವೇಳೆ ಲೇಬಲ್ ನಲ್ಲಿರುವ ಅಂಶಗಳನ್ನು ಪರಿಶೀಲಿಸಲೇಬೇಕು ಎಂದು ಹೇಳಿದ್ದಾರೆ.

ಲೇಬಲ್‌ನಲ್ಲಿ ತುಂಬಾ ವಸ್ತುಗಳ ಬಳಕೆ ಮಾಡಿರುವುದು ಇದ್ದರೆ ಅಂತಹ ಆಹಾರವನ್ನು ಖರೀದಿ ಮಾಡದೇ ಇರುವುದು ಸೂಕ್ತ. ಯಾಕೆಂದರೆ ಇವುಗಳಲ್ಲಿ ಸಕ್ಕರೆ, ಉಪ್ಪಿನಾಂಶ, ಪ್ರಿಸರ್ವೇಟಿವ್ಸ್ ಅಧಿಕವಾಗಿರುತ್ತದೆ. ಆದಷ್ಟು ಕಡಿಮೆ ವಸ್ತುಗಳನ್ನು ಲೇಬಲ್ ನಲ್ಲಿ ಗುರುತಿಸಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನು ರೆಡಿಮೇಡ್ ಆಹಾರದಲ್ಲಿ ಒಟ್ಟು ಕೊಬ್ಬಿನಾಂಶ 10- 15 ರೊಳಗೆ ಇರುವುದನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅದೇ ರೀತಿ ವಿಟಮಿನ್ ಶೇಕಡಾವಾರು ಪ್ರಮಾಣ ಹೆಚ್ಚಿದ್ದರೆ ಅಂತಹ ಆಹಾರ ಮಕ್ಕಳಿಗೆ ಸೂಕ್ತವಾಗಿರುತ್ತದೆ. ಸಕ್ಕರೆ, ಉಪ್ಪಿಗೆ ಸಂಬಂಧಿತ ವಸ್ತುಗಳ ಬಗ್ಗೆ ತಿಳಿದಿರಬೇಕು. ಇವುಗಳು ಆಹಾರದಲ್ಲಿ ಆದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಕ್ಯಾಲ್ಶಿಯಂ ಪ್ರಮಾಣ 100 ಗ್ರಾಂ ಇದ್ದರೆ ಒಳ್ಳೆಯದು. ಇನ್ನು ಬೇಗ ಎನರ್ಜಿಗೆ ಖರ್ಜುರ, ದ್ರಾಕ್ಷಿ ಇರುವಂತಹ ಆಹಾರಗಳನ್ನು ಆಯ್ಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಪೀರಿಯಡ್ಸ್‌ ಸಮಯದಲ್ಲಿ ಅಧಿಕ ರಕ್ತಸ್ರಾವ ಇದೆಯೇ? ಈ ಟಿಪ್ಸ್‌ ಫಾಲೋ ಮಾಡಿ

ರೆಡಿಮೇಡ್ ಮೊಸರು, ಹಾಲು ಖರೀದಿ ವೇಳೆಯೂ ಈ ಅಂಶಗಳನ್ನು ಪರೀಕ್ಷೆ ಮಾಡಬೇಕು. ರೆಡಿಮೇಡ್ ಆಹಾರಗಳಿಂದ ಹೆಚ್ಚಾಗಿ ಕರುಳಿನ ಆರೋಗ್ಯ ಸಮಸ್ಯೆ, ಜೀರ್ಣಕ್ರಿಯೆ ತೊಂದರೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಡಾ. ಅನಿತಾ ವಿವರಿಸಿದ್ದಾರೆ.