ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI course: ಉಚಿತ ಎಐ ಕೋರ್ಸ್ : ಕಲಿಯಿರಿ, ಪ್ರಮಾಣ ಪತ್ರವನ್ನು ಪಡೆಯಿರಿ

'ಎಲ್ಲರಿಗೂ ಯುವಾ ಎಐ' ಉಚಿತ ಕೋರ್ಸ್ ಅನ್ನು ಭಾರತ ಸರ್ಕಾರ ಆರಂಭಿಸಿದ್ದು, ಇದು ಒಂದು ಕೋಟಿ ಭಾರತೀಯ ನಾಗರಿಕರನ್ನು ಎಐ ಕೌಶಲಗಳೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಉಚಿತವಾಗಿರುವ ಈ ಕೋರ್ಸ್ ಫ್ಯೂಚರ್ಸ್ಕಿಲ್ಸ್ ಪ್ರೈಮ್, ಐಜಿಒಟಿ ಕರ್ಮಯೋಗಿ ಹಾಗೂ ಇತರ ಜನಪ್ರಿಯ ಎಡ್-ಟೆಕ್ ಪೋರ್ಟಲ್ಗಳಲ್ಲಿ ಲಭ್ಯವಿದೆ.

ಭಾರತ ಸರ್ಕಾರದಿಂದ ಉಚಿತ ಎಐ ಕೋರ್ಸ್

ಸಾಂದರ್ಭಿಕ ಚಿತ್ರ -

ನವದೆಹಲಿ: ಕೃತಕ ಬುದ್ದಿ (Artificial Intelligence) ಮತ್ತೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆಯೇ ? ಹಾಗಿದ್ದರೆ ಭಾರತ ಸರ್ಕಾರ ಪ್ರಾರಂಭಿಸಿರುವ ಉಚಿತ ರಾಷ್ಟ್ರೀಯ ಕೋರ್ಸ್ (free national course) ಗೆ ಸೇರಬಹುದು. ಕೃತಕ ಬುದ್ಧಿಮತ್ತೆಯನ್ನು (yuva AI for all) ಅರ್ಥಮಾಡಿಕೊಳ್ಳಲು ಬಯಸುವ ಎಲ್ಲರೂ ಈ ಕೋರ್ಸ್ ಗೆ ಸೇರಬಹುದು. ಇದೊಂದು ಸಣ್ಣ, ಸರಳ ಪ್ರಾಯೋಗಿಕವಾದ ಉಚಿತ ಕೋರ್ಸ್ ಆಗಿದೆ. ಭಾರತದ ಒಂದು ಕೋಟಿಗೂ ಹೆಚ್ಚು ನಾಗರಿಕರನ್ನು ಕೃತಕ ಬುದ್ಧಿಮತ್ತೆಯ ಮೂಲಭೂತ ಕೌಶಲದೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಇದು ಹೊಂದಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸರ್ಕಾರ ಪ್ರಾರಂಭಿಸಿರುವ 'ಎಲ್ಲರಿಗೂ ಯುವಾ ಎಐ' ಉಚಿತ ಕೋರ್ಸ್ 1 ಕೋಟಿ ಭಾರತೀಯ ನಾಗರಿಕರನ್ನು ಎಐ ಕೌಶಲಗಳೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಜಾಗತಿಕ ಜ್ಞಾನವನ್ನು ಭಾರತದ ಉದ್ಯೋಗ ವಲಯದೊಂದಿಗೆ ಜೋಡಿಸಲಿದೆ. ಅಲ್ಲದೇ ನೈತಿಕ, ಜವಾಬ್ದಾರಿಯುತವಾಗಿ ಎಐ ಬಳಕೆಯ ಮೇಲೆ ಇದು ಗಮನ ಕೇಂದ್ರೀಕರಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Delhi Blast: ಜಮ್ಮು ಕಾಶ್ಮೀರದ ಯುವಕರೇ ಇವರ ಟಾರ್ಗೆಟ್‌; ಪಾಕಿಸ್ತಾನ, ದುಬೈನಿಂದ ಮಾಡ್ಯೂಲ್‌ ನಿರ್ವಹಿಸುತ್ತಿದ್ದ ಉಗ್ರರು!

ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಎಲ್ಲರಿಗೂ ಯುವಾ ಎಐ' ಅನ್ನು ಪ್ರಾರಂಭಿಸಿದೆ. ಇದು ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಯುವಕರಿಗೆ ಕೃತಕ ಬುದ್ಧಿಮತ್ತೆಯ ಜಗತ್ತನ್ನು ಪರಿಚಯಿಸುವ ಮೊದಲ ಉಚಿತ ಕೋರ್ಸ್ ಆಗಿದೆ ಎಂದು ತಿಳಿಸಿದೆ.

4.5 ಗಂಟೆಗಳ ಈ ಕೋರ್ಸ್ ಅನ್ನು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಆಸಕ್ತರು ಕಲಿಯಬಹುದಾಗಿದೆ. ಎಐನ ಮೂಲಭೂತ ಅಂಶಗಳನ್ನು ಆರಾಮದಾಯಕವಾಗಿಸಲು ಮತ್ತು ಅದು ಜಗತ್ತನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ತೋರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಅತ್ಯಂತ ಸರಳವಾಗಿದ್ದು, ಪ್ರಾಯೋಗಿಕವಾಗಿದೆ. ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವನ್ನಾಗಿ ಮಾಡಲಿದೆ.

ಉಚಿತವಾಗಿರುವ ಈ ಕೋರ್ಸ್ ಫ್ಯೂಚರ್‌ಸ್ಕಿಲ್ಸ್ ಪ್ರೈಮ್, ಐಜಿಒಟಿ ಕರ್ಮಯೋಗಿ ಹಾಗೂ ಇತರ ಜನಪ್ರಿಯ ಎಡ್-ಟೆಕ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ. ಕೋರ್ಸ್ ಅನ್ನು ಪೂರ್ಣಗೊಳಿಸುವ ಪ್ರತಿಯೊಬ್ಬರಿಗೂ ಭಾರತ ಸರ್ಕಾರದಿಂದ ಅಧಿಕೃತ ಪ್ರಮಾಣಪತ್ರ ಲಭ್ಯವಾಗಲಿದೆ.

ಹೇಗಿದೆ ಕೋರ್ಸ್ ?

ಆರು ಸಣ್ಣ, ಆಕರ್ಷಕ ಮಾಡ್ಯೂಲ್‌ಗಳ ಮೂಲಕ ಇದನ್ನು ಕಲಿಯಬಹುದು.

ಕೃತಕ ಬುದ್ದಿಮತ್ತೆ ಏನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಕೃತಕ ಬುದ್ದಿಮತ್ತೆ ಶಿಕ್ಷಣ, ಸೃಜನಶೀಲತೆ ಮತ್ತು ಕೆಲಸವನ್ನು ಹೇಗೆ ಬದಲಾಯಿಸುತ್ತಿದೆ, ಕೃತಕ ಬುದ್ದಿಮತ್ತೆ ಪರಿಕರಗಳನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು, ಭಾರತದಲ್ಲಿ ಕೃತಕ ಬುದ್ದಿ ಮತ್ತೆಯ ಬಳಕೆಯ ಪ್ರಕರಣ, ಕೃತಕ ಬುದ್ಧಿಮತ್ತೆಯ ಭವಿಷ್ಯ ಮತ್ತು ಮುಂಬರುವ ಹೊಸ ಅವಕಾಶಗಳ ಕುರಿತಾದ ಮಾಹಿತಿಗಳು ಇದರಲ್ಲಿ ಲಭ್ಯವಿದೆ.

ಏನು ಪ್ರಯೋಜನ?

ಇದು ಎಲ್ಲರಿಗೂ ಉಚಿತವಾಗಿದ್ದು, ಯಾರೂ ಬೇಕಾದರೂ ಇದನ್ನು ಕಲಿಯಬಹುದು. ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಇದನ್ನು ಕಲಿಯಬಹುದಾಗಿದೆ. ಈ ಕೋರ್ಸ್ ಕಲಿತವರಿಗೆ ಭಾರತ ಸರ್ಕಾರದ ಪ್ರಮಾಣಪತ್ರ ದೊರೆಯಲಿದೆ. ಇದು ಕೃತಕ ಬುದ್ಧಿಮತ್ತೆಯಿಂದ ಚಾಲಿತವಾದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣದ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಎಐ ಭವಿಷ್ಯವನ್ನು ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಂಸ್ಥೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಇಂಡಿಯಾ ಎಐ ಜೊತೆ ಪಾಲುದಾರಿಕೆ ಮಾಡಿಕೊಂಡು ಕೋರ್ಸ್ ದೇಶದ ಪ್ರತಿಯೊಂದು ಮೂಲೆಯನ್ನು ತಲುಪುವಂತೆ ಮಾಡಬಹುದು. ಪಾಲುದಾರರು ಕೋರ್ಸ್ ಅನ್ನು ಸಂಯೋಜಿಸಬಹುದು, ಕಲಿಯುವವರಿಗೆ ಪ್ರಚಾರ ಮಾಡಬಹುದು ಮತ್ತು ಸಹ-ಬ್ರಾಂಡ್ ಪ್ರಮಾಣಪತ್ರಗಳನ್ನು ಕೂಡ ನೀಡಬಹುದಾಗಿದೆ.

ಇದನ್ನೂ ಓದಿ: ನಾರಾಯಣ ಮೂರ್ತಿ ಹೇಳಿದಂತೆ ವಾರಕ್ಕೆ 72 ಗಂಟೆಗಳ ಕೆಲಸ ಮಾಡಿದ್ರೆ ಏನಾಗುತ್ತೆ? ಈ ಬಗ್ಗೆ ವೈದ್ಯರ ಎಚ್ಚರಿಕೆ ಇಲ್ಲಿದೆ

ಭಾರತ ಎಐ ಮಿಷನ್‌ಗಾಗಿ ಪ್ರಸಿದ್ಧ ಎಐ ತಜ್ಞ ಮತ್ತು ಲೇಖಕ, ಎಐಆಂಡ್ ಬಿಯಾಂಡ್ ಮತ್ತು ಟೆಕ್ ವಿಸ್ಪರರ್ ಲಿಮಿಟೆಡ್ ನ ಸಂಸ್ಥಾಪಕ ಜಸ್ಪ್ರೀತ್ ಬಿಂದ್ರಾ ಅವರು ಈ ಕೋರ್ಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಕೋರ್ಸ್ ಕಲಿಯಲು ಇಚ್ಛಿಸುವವರು ವೆಬ್ ಸೈಟ್ https://www.futureskillsprime.in/course/yuva-ai-for-all/ ಅನ್ನು ನೋಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.