Delhi Election 2025: ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ? ಆಪ್‌ಗೆ ಭ್ರಷ್ಟಾಚಾರವೇ ಮುಳುವಾಯ್ತ?
ಬಹು ನಿರೀಕ್ಷಿತ ದೆಹಲಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನೆಡೆಯಲ್ಲಿದ್ದು, ಎಎಪಿ 20 ಮತ್ತು ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಕಡಿಮೆ ಅಂತರದ ಮುನ್ನಡೆಯಲ್ಲಿದೆ. ಈ ಬಾರಿ ಮತದಾರ ಬಿಜೆಪಿ ಕೈ ಹಿಡಿಯುವ ಸಾಧ್ಯತೆಯಿದೆ. ಆಪ್ ಹೀನಾಯವಾಗಿ ಸೋತರೆ ಅದಕ್ಕೆ ಅವರ ಮೇಲಿರುವ ಸಾಲು ಸಾಲು ಭ್ರಷ್ಟಾಚಾರ ಆರೋಪಗಳೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.
![ಆಪ್‌ಗೆ ಕುತ್ತಾಯ್ತಾ ಸಾಲು ಸಾಲು ಭ್ರಷ್ಟಾಚಾರ?](https://cdn-vishwavani-prod.hindverse.com/media/original_images/Delhi_Election_2025_5.jpg)
Delhi Election 2025
![Profile](https://vishwavani.news/static/img/user.png)
ನವದೆಹಲಿ: ಬಹು ನಿರೀಕ್ಷಿತ ದೆಹಲಿ ಚುನಾವಣೆಯ(Delhi Election 2025) ಮತ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಬಿಜೆಪಿ(BJP) ಮುನ್ನಡೆಯಲ್ಲಿದ್ದು, ಎಎಪಿ(AAP) 20 ಮತ್ತು ಕಾಂಗ್ರೆಸ್(Congress) ಕೇವಲ ಒಂದು ಕ್ಷೇತ್ರದಲ್ಲಿ ಕಡಿಮೆ ಅಂತರದ ಮುನ್ನಡೆಯಲ್ಲಿದೆ. ಹ್ಯಾಟ್ರಿಕ್ ಗೆಲುವು ಸಾಧಿಸುವ ಮತ್ತು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಅರವಿಂದ್ ಕೇಜ್ರಿವಾಲ್(Aravind Kejriwal) ಕನಸು ಭಗ್ನವಾಗಿದೆ. ಕೇಜ್ರಿವಾಲ್ ತಮ್ಮ ತವರು ಕ್ಷೇತ್ರವಾದ ನವ ದೆಹಲಿಯನ್ನು ಉಳಿಸಿಕೊಳ್ಳಲು ಕೂಡ ತಿಣುಕಾಡುತ್ತಿದ್ದಾರೆ. ಈ ಬಾರಿ ಮತದಾರ ಬಿಜೆಪಿ ಕೈ ಹಿಡಿಯುವ ಸಾಧ್ಯತೆಯಿದೆ. ಆಪ್ ಹೀನಾಯವಾಗಿ ಸೋತರೆ ಅದಕ್ಕೆ ಅವರ ಮೇಲಿರುವ ಸಾಲು ಸಾಲು ಭ್ರಷ್ಟಾಚಾರ ಆರೋಪಗಳೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.
Turning point in DELHI election
— Sheetal Chopra 🇮🇳 (@SheetalPronamo) February 8, 2025
Already crossed victory mark
BJP at 42🔥🔥🔥🔥
Delhi definitely understood
Batenge tho Katenge 🔥🔥 pic.twitter.com/UsrcX05u3P
ಆಪ್ ಭ್ರಷ್ಟಾಚಾರವೇ ಸೋಲಿಗೆ ಮುಳುವಾಗಬಹುದಾ?
ಆಪ್ ಸರಕಾರದ ಭ್ರಷ್ಟಾಚಾರ ಪ್ರಕರಣಗಳು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಅಸ್ತ್ರವಾಗಿತ್ತು. ಭ್ರಷ್ಟಾಚಾರಿ ವಿರೋಧಿ ಆಂದೋಲನದಿಂದ ಬಂದ ಕೇಜ್ರಿವಾಲ್ ಮತ್ತು ಆಪ್ ವಿರುದ್ಧ ಅಬಕಾರಿ ಹಗರಣ, ಶೀಶ್‌ಮಹಲ್ ಬಂಗಲೆ ಹಗರಣ, ವಕ್ಸ್ ಮಂಡಳಿ ನೇಮಕಾತಿ ಹಗರಣ, ವಿವಿಧ ಸಚಿವರು, ಶಾಸಕರ ವಿರುದ್ಧ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣಾ ಅಸ್ತ್ರಗಳಾಗಿ ಬಳಸಿಕೊಂಡಿವೆ.
ಚುನಾವಣೆ ಫಲಿತಾಂಶ ಇದ್ದು ಪ್ರಕಟವಾಗಲಿದ್ದು, ಮತ ಎಣಿಕೆ ಪ್ರಾರಂಭವಾಗಿದೆ. ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ಎಎಪಿ 19, ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಈ ಸುದ್ದಿಯನ್ನೂ ಓದಿ:Delhi Election 2025: ʼಹ್ಯಾಟ್ರಿಕ್ʼ ಗೆಲುವಿನ ಕನಸು ಕಾಣುತ್ತಿದ್ದ ಅರವಿಂದ್ ಕೇಜ್ರಿವಾಲ್‌ಗೆ ಸೋಲಿನ ರುಚಿ?
26 ವರ್ಷಗಳ ನಂತರ ದೆಹಲಿ ಗದ್ದುಗೆಗೆ ಬಿಜೆಪಿ?
ಕಳೆದ 26 ವರ್ಷದಿಂದ ದಿಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿರುವ ಬಿಜೆಪಿ, 2025ರಲ್ಲಿ ಮರಳಿ ಗದ್ದುಗೆ ಏರಲೇಬೇಕೆಂಬ ಹಂಬಲದೊಂದಿಗೆ ಮೋದಿ ನಾಮ ಬಲದ ಮೇಲೆ ಅಖಾಡಕ್ಕೆ ಇಳಿದಿತ್ತು. ಮೊದಲ ಪ್ರಚಾರ ಸಭೆಯಲ್ಲೇ ಆಪ್ ಸರಕಾರವನ್ನು 'ಆಪದ್ದಿ' (ವಿನಾಶಕಾರಿ) ಎಂದು ಕರೆಯುವ ಮೂಲಕ ಪ್ರಚಾರದ ಕಣದಲ್ಲಿ ಅಬ್ಬರಿಸಿದ್ದ ಪ್ರಧಾನಿ ಮೋದಿ ಅವರು, ದಿಲ್ಲಿಯಲ್ಲಿ ಬದಲಾವಣೆ ಪರ್ವಕ್ಕೆ ಕರೆ ನೀಡಿದ್ದರು. ಯಮುನೆ ಮಲೀನ ವಿಚಾರ, ದಿಲ್ಲಿ ವಾಯ ಮಾಲಿನ್ಯ, ದಿಲ್ಲಿ ಸಂಚಾರ ದಟ್ಟಣೆ, ನಾಗರಿಕ ಮೂಲ ಸೌಕರ್ಯ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಆಪ್ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಮುಂದಾಗಿತ್ತು. ಸದ್ಯದ ಮತ ಎಣಿಕೆಯ ಟ್ರೆಂಡ್ ಪ್ರಕಾರ ಬಿಜೆಪಿ 50 ಕ್ಷೇತ್ರಗಳಲ್ಲಿ ಅಂದರೆ ಸ್ಪಷ್ಟ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಬರೋಬ್ಬರಿ 26 ವರ್ಷಗಳ ನಂತರ ಭಾರತೀಯ ಜನತಾ ಪಕ್ಷ ದೆಹಲಿ ಗದ್ದುಗೆ ಏರುವ ವಿಶ್ವಾಸದಲ್ಲಿದೆ.