#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Arvind Kejriwal: ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಠಕ್ಕರ್‌; ಆರೋಪಗಳಿಗೆ ಮಣಿಯುವುದಿಲ್ಲ ಎಂದು ಟ್ವೀಟ್‌

ಅರವಿಂದ್‌ ಕೇಜ್ರಿವಾಲ್‌ ಅವರ ಹೇಳಿಕೆಗೆ ಮುಖ್ಯ ಚುನಾವಣಾ ಆಯೋಗ ಇದೀಗ ಪ್ರತ್ಯುತ್ತರ ನೀಡಿದ್ದು, ಇಸಿಐ ಮೇಲೆ ಅಪಪ್ರಚಾರ ಮಾಡುತ್ತಿರುವುದು ಹಾಗೂ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಆರೋಪಗಳಿಗೆ ಮಣಿಯುವುದಿಲ್ಲ ಎಂಬ ಖಡಕ್‌ ಎಚ್ಚರಿಕೆಯನ್ನು ನೀಡಿದೆ.

ಚುನಾವಣಾ ಆಯೋಗದಿಂದ ಕೇಜ್ರಿವಾಲ್‌ಗೆ ಎಚ್ಚರಿಕೆ

Ec Rajiv kumar

Profile Vishakha Bhat Feb 4, 2025 4:41 PM

ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ (Delhi Election) ಕಾವು ಜೋರಾಗಿದ್ದು, ಚುನಾವಣೆಯ ಕೊನೆಯ ದಿನದಂದು, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸೋಮವಾರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ವಿರುದ್ದ ವಾಗ್ದಾಳಿ ನಡೆಸಿ ಈ ತಿಂಗಳ ಕೊನೆಯಲ್ಲಿ ತಾವು ನಿವೃತ್ತರಾಗಲಿದ್ದೀರಿ. ಮುಂದೆ ಯಾವ ಹುದ್ದೆ ನೀಡಲಿದ್ದಾರೆ ನಿಮ್ಮ ವರಿಷ್ಠರು ಎಂದು ವ್ಯಂಗ್ಯವಾಡಿದ್ದರು. ಇದೀಗ ಮುಖ್ಯ ಚುನಾವಣಾ ಆಯೋಗ (Election Commission) ಈ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದು, ಇಸಿಐ ಮೇಲೆ ಅಪಪ್ರಚಾರ ಮಾಡುತ್ತಿರುವುದು ಹಾಗೂ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಆರೋಪಗಳಿಗೆ ಮಣಿಯುವುದಿಲ್ಲ ಎಂಬ ಖಡಕ್‌ ಎಚ್ಚರಿಕೆಯನ್ನು ನೀಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಚುನಾವಣಾ ಆಯೋಗ ಕೇಜ್ರಿವಾಲ್‌ ಅವರ ಹೆಸರನ್ನು ಉಲ್ಲೇಖಿಸದೆ, "ದೆಹಲಿ ಚುನಾವಣೆಯಲ್ಲಿ ಇಸಿಐ ಅನ್ನು ಏಕ ಸದಸ್ಯ ಸಂಸ್ಥೆಯಂತೆ ಕೆಲವರು ದೂಷಿಸುತ್ತಿದ್ದಾರೆ. ಇದನ್ನು 3 ಸದಸ್ಯರ ಆಯೋಗವು ಒಟ್ಟಾಗಿ ಗಮನಿಸಿದೆ. ಇಂತಹ ಯಾವುದೇ ಆರೋಪಗಳಿಗೆ ಚುನಾವಣಾ ಆಯೋಗ ಗಮನಿಸಿದೆ. ಈ ಬಾರಿಯ ದೆಹಲಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಎತ್ತುವ ವಿಷಯಗಳ ಮೇಲೆ ನಿಗಾವಹಿಸಲು ಹಾಗೂ ಕ್ರಮ ಕೈಗೊಳ್ಳಲು 1.5 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.



ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದೇನು?

ಚುನಾವಣೆಯ ಕೊನೆಯ ದಿನದಂದು, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಮುಖ್ಯ ಚುನಾವಣಾ ಆಯೋಗ ಹಾಗೂ ಆಯುಕ್ತ ರಾಜೀವ್‌ ಕುಮಾರ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಚುನಾವಣಾ ಆಯೋಗವು ಭಾರತೀಯ ಜನತಾ ಪಕ್ಷದ ಮುಂದೆ ಶರಣಾಗಿರುವುದನ್ನು ನೋಡಿದರೆ, ಚುನಾವಣಾ ಆಯೋಗ ಅಸ್ತಿತ್ವದಲ್ಲಿಲ್ಲ ಎಂಬಂತೆ ಕಾಣುತ್ತಿದೆ. ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್ ಅವರು ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗುತ್ತಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ನಿಮಗೆ ಯಾವ ಹುದ್ದೆಯನ್ನು ನೀಡಲಿದೆ ? ರಾಷ್ಟ್ರಪತಿ ಅಥವಾ ರಾಜ್ಯಪಾಲರ ಹುದ್ದೆಯೋ? ಎಂದು ಕೇಳಿದ್ದರು.

ಈ ಸುದ್ದಿಯನ್ನೂ ಓದಿ:Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್‌- ಉಚಿತ ಶಿಕ್ಷಣ ಘೋಷಣೆ

ನಾನು ರಾಜೀವ್ ಕುಮಾರ್ ಜಿ ಅವರನ್ನು ಕೈಜೋಡಿಸಿ ವಿನಂತಿಸುತ್ತೇನೆ. ನಿಮ್ಮ ಕರ್ತವ್ಯವನ್ನು ಮಾಡಿ, ಹುದ್ದೆಯ ಆಸೆಯನ್ನು ಬಿಟ್ಟುಬಿಡಿ, ಹುದ್ದೆಯ ದುರಾಸೆಯನ್ನು ಬಿಟ್ಟುಬಿಡಿ. ಈಗ ನಿಮ್ಮ ವೃತ್ತಿಜೀವನದ ಕೊನೆಯಲ್ಲಿ, ದೇಶವನ್ನು, ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸಬೇಡಿ" ಎಂದು ಅವರು ಹೇಳಿದ್ದರು.