ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Election Results 2026: ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ದಳಪತಿ ವಿಜಯ್ ದಾಖಲೆ ನಿರ್ಮಿಸುವರೇ?

ಪಂಚ ರಾಜ್ಯಗಳ ಚುನಾವಣೆಯಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದಿರುವುದು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ. ಇದಕ್ಕೆ ಮುಖ್ಯ ಕಾರಣ ಈ ಚುನಾವಣೆಯು ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಮತ್ತು ದಳಪತಿ ವಿಜಯ್ ಅವರಿಗೆ ದಾಖಲೆಗಳ ಚುನಾವಣೆಯಾಗಲಿದೆ. ಅದರಲ್ಲೂ ಮುಖ್ಯವಾಗಿ ಮೊದಲ ಬಾರಿಗೆ ಹೊಸ ಪಕ್ಷ ಸ್ಥಾಪಿಸಿ ಚುನಾವಣೆ ಸ್ಪರ್ಧಿಸುತ್ತಿರುವ ವಿಜಯ್ ಅವರಿಗೆ ಇದು ಪ್ರಮುಖ ಸ್ಪರ್ದೆಯಾಗಲಿದೆ.

ಬಂಗಾಳ, ತಮಿಳುನಾಡು, ಕೇರಳದಲ್ಲಿ ದಾಖಲೆ ಬರೆಯುವುದೇ ಈ ಚುನಾವಣೆ ?

ಸಂಗ್ರಹ ಚಿತ್ರ -

ಬೆಂಗಳೂರು: ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ (assembly election) ಮತ ಎಣಿಕೆ (Election Results 2026) ಕಾರ್ಯ ಸೋಮವಾರ ಬೆಳಗ್ಗೆಯೇ ಆರಂಭವಾಗಿದೆ. ಇದರಲ್ಲಿ ಹೆಚ್ಚು ಗಮನ ಸೆಳೆದಿರುವುದು ಪಶ್ಚಿಮ ಬಂಗಾಳ (west bengal), ತಮಿಳುನಾಡು (tamilnadu) ಮತ್ತು ಕೇರಳ (kerala). ಇದಕ್ಕೆ ಮುಖ್ಯ ಕಾರಣವೆಂದರೆ ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಅವರ ಭದ್ರಕೋಟೆಯಲ್ಲಿ ಏನಾಗುವುದೋ ಎನ್ನುವ ಕುತೂಹಲವಾದರೆ ಇನ್ನೊಂದು ಹೊಸ ಪಕ್ಷ ಸ್ಥಾಪಿಸಿ ಚುನಾವಣೆ ಸ್ಪರ್ಧಿಸುತ್ತಿರುವ ವಿಜಯ್ ಅವರಿಗೆ ಇದು ರಾಜಕೀಯ ಜೀವನದ ಪ್ರಮುಖ ಮೈಲುಗಲ್ಲಾಗಲಿದೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ತೀವ್ರ ಪೈಪೋಟಿ ಇದೆ. ಮತ ಎಣಿಕೆ ಆರಂಭದಿಂದಲೇ ಇದು ಗೋಚರವಾಗಿದೆ. ಹೀಗಾಗಿ ಇಲ್ಲಿ ಹೊಸ ದಾಖಲೆ ನಿರ್ಮಾಣವಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಧಿಕಾರದಿಂದ ದೂರವಿಡಲು ಪ್ರಾದೇಶಿಕ ವಿರೋಧ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ.

Elections 2026: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ, ತಮಿಳುನಾಡಿನಲ್ಲಿ ಎಡಿಎಂಕೆಗೆ ಪೈಪೋಟಿ ನೀಡುತ್ತಿರುವ ಟಿವಿಕೆ

ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಮತಗಳನ್ನು ಎಣಿಕೆ ಕಾರ್ಯ ನಡೆಯುತ್ತಿದೆ. 2024ರ ಬಳಿಕ ನಡೆಯುತ್ತಿರುವ ಅತೀ ದೊಡ್ಡ ಚುನಾವಣೆ ಇದಾಗಿದ್ದು, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಮತ್ತು ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ವಿಜಯ್ ಅವರಿಗೆ ಇದು ಪ್ರಮುಖ ಸ್ಪರ್ಧೆಯಾಗಿದೆ.

ಮಮತಾ ಬ್ಯಾನರ್ಜಿ

ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಸಿಪಿಐ(ಎಂ) ಅನ್ನು ಹೊರಹಾಕಿದ ಟಿಎಂಸಿ ಮುಖ್ಯಸ್ಥೆ 2011 ರಲ್ಲಿ ಅಧಿಕಾರ ಗೆದ್ದುಕೊಂಡರು. ಅಂದಿನಿಂದ ಅವರು ಗದ್ದುಗೆಯಲ್ಲಿದ್ದು, ಸತತ ಗೆಲುವಿನ ದಾಖಲೆ ಅವರ ಹೆಸರಿನಲ್ಲಿದೆ. ಈ ಬಾರಿ ಅವರು ಗೆದ್ದರೆ ಸತತ ನಾಲ್ಕನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಈ ಮೂಲಕ ನಾಲ್ಕು ವಿಧಾನಸಭಾ ಚುನಾವಣೆಗಳನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಾರೆ.

ಈವರೆಗೆ ಯಾವುದೇ ರಾಜ್ಯದಲ್ಲೂ ಮಹಿಳಾ ಮುಖ್ಯಮಂತ್ರಿ ಸತತ ನಾಲ್ಕು ನೇರ ವಿಧಾನಸಭಾ ಗೆಲುವುಗಳನ್ನು ಸಾಧಿಸಿಲ್ಲ. ಒಂದು ವೇಳೆ ಮಮತಾ ಅವರು ಈ ಸಾಧನೆ ಮಾಡಿದರೆ ದೆಹಲಿ ಸಿಎಂ ಆಗಿದ್ದ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಮತ್ತು ತಮಿಳುನಾಡು ಸಿಎಂ ಆಗಿದ್ದ ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ದಾಖಲೆಯನ್ನು ಮುರಿಯುತ್ತಾರೆ. ಇವರಿಬ್ಬರು ಸತತ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ದಳಪತಿ ವಿಜಯ್‌

ದಕ್ಷಿಣ ಭಾರತದಲ್ಲಿ ಪ್ರಸಿದ್ದಿ ಪಡೆದಿರುವ ನಟ, ರಾಜಕಾರಣಿ ದಳಪತಿ ವಿಜಯ್ ಅವರು ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಒಂದು ವೇಳೆ ಈ ಬಾರಿ ಇವರ ಪಕ್ಷ ಅಧಿಕಾರಕ್ಕೆ ಬಂದರೆ ಅದು ದೊಡ್ಡ ಸಾಧನೆಯಾಗುತ್ತದೆ. ಈ ಹಿಂದೆ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದ್ದ ನಟರಾದ ಎಂಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರು ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರೂ ಕೂಡ ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಅಧಿಕಾರಕ್ಕೇರಿದವರು. ಹೊಸ ಪಕ್ಷದ ಮೂಲಕ ನೇರವಾಗಿ ಅಧಿಕಾರ ಗೆದ್ದ ಪ್ರಮುಖ ನಟರಾಗಿಯೂ ವಿಜಯ್ ಗುರುತಿಸಿಕೊಳ್ಳಲಿದ್ದಾರೆ.

ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟದ ಕಮಾಲ್‌; ಮತ್ತೆ ಸಿಎಂ ಆಗಲಿದ್ದಾರೆ ಹಿಮಂತ ಬಿಸ್ವಾ ಶರ್ಮಾ

ಪಿಣರಾಯಿ ವಿಜಯನ್‌

ಕೇರಳದಲ್ಲಿ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಅವರ ಗೆಲುವು ರಾಜ್ಯದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ದಲ್ಲಿ ಒಂದು ಐತಿಹಾಸಿಕ ದಾಖಲೆ ಬರೆಯಲಿದೆ. ಇಲ್ಲಿನ ಬಹುತೇಕ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಅಧಿಕಾರವನ್ನು ಬದಲಾಯಿಸಿಕೊಂಡಿದೆ.

2021ರಲ್ಲಿ ಅಧಿಕಾರಕ್ಕೇರಿದ ಪಿಣರಾಯಿ ವಿಜಯನ್ ಅವರು ಸತತ ಎರಡು ಬಾರಿ ಗೆಲ್ಲುವ ಮೂಲಕ ಆ ಮಾದರಿಯನ್ನು ಮುರಿದಿದ್ದು, ಇದೀಗ ಮತ್ತೆ ಗೆದ್ದರೆ ಎಡಪಂಥೀಯರಿಗೆ ಸತತ ಮೂರು ಗೆಲುವು ದೊರೆತಂತಾಗುತ್ತದೆ.