#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PM Narendra Modi: ಶಾರ್ಟ್ ಕಟ್ ರಾಜಕೀಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ; ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ದಿಲ್ಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಅಡಿದ ಪ್ರಧಾನಿ ನರೇಂದ್ರ ಮೋದಿ ಆಪ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ನರೇಂದ್ರ ಮೋದಿ.

Profile Ramesh B Feb 8, 2025 9:30 PM

ಹೊಸದಿಲ್ಲಿ: ದಿಲ್ಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ (Delhi Election Results 2025). ಐತಿಹಾಸಿಕ ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲಿಗೆ ಅವಕಾಶ ನೀಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಅವರು ಆಪ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ʼʼದಿಲ್ಲಿಯ ಜನರು ಇಂದು ನೀಡಿರುವ ಫಲಿತಾಂಶ ರಾಜಕೀಯದಲ್ಲಿ ಯಾವುದೇ ಶಾರ್ಟ್​ಕಟ್ ಅಥವಾ ಅಡ್ಡದಾರಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದೆʼʼ ಎಂದು ಹೇಳಿದರು.

“ಇಂದಿನ ಫಲಿತಾಂಶಗಳು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದ ಮೇಲೆ ದೇಶ ಎಷ್ಟು ನಂಬಿಕೆಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ಸಮಾಜದ ಪ್ರತಿಯೊಂದು ವರ್ಗವು ಬಿಜೆಪಿಗೆ ಮತ ಹಾಕಿದೆʼʼ ಎಂದು ತಿಳಿಸಿದರು.

ʼʼಮದ್ಯ ನೀತಿ ಹಗರಣ ದಿಲ್ಲಿಗೆ ಅಪಖ್ಯಾತಿ ತಂದಿದೆ. ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿನ ಹಗರಣಗಳು ಕಡು ಬಡವರನ್ನು ತೊಂದರೆಗೀಡು ಮಾಡಿವೆ ಮತ್ತು ಅದಕ್ಕಿಂತ ಹೆಚ್ಚಾಗಿ ಆಪ್‌ ನಾಯಕರು ಜಗತ್ತು ಕೊರೊನಾದೊಂದಿಗೆ ಹೋರಾಡುವಾಗ 'ಶೀಶ್ ಮಹಲ್' ಅನ್ನು ಆಧುನೀಕರಣಗೊಳಿಸಲು ಮುಂದಾಗಿದ್ದರು" ಎಂದು ಮೋದಿ ಹೇಳಿದರು.



ಮೋದಿ ಹೇಳಿದ್ದೇನು?

  • ದಿಲ್ಲಿಯ ಜನರು ಇಂದು ಉತ್ಸುಕರಾಗಿದ್ದಾರೆ ಮತ್ತು ನಿರಾಳರಾಗಿದ್ದಾರೆ. ಯಾಕೆಂದರೆ ಅವರು ‘ಆಪ್ದಾʼ (AAP-da)ದಿಂದ ಮುಕ್ತರಾಗಿದ್ದಾರೆ.
  • ದಿಲ್ಲಿ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ದಿಲ್ಲಿ ಮತದಾರರು ಪ್ರೀತಿ ನೀಡಿದ್ದಾರೆ. ಇದನ್ನು ಅಭಿವೃದ್ಧಿಯ ಮೂಲಕ ದುಪ್ಪಟ್ಟು ಪ್ರಮಾಣದಲ್ಲಿ ಹಿಂದಿರುಗಿಸುತ್ತೇವೆ.
  • ದಿಲ್ಲಿಯ ನಿಜವಾದ ಮಾಲೀಕರು ಇಲ್ಲಿನ ಜನರೇ ಎನ್ನುವುದನ್ನು ಮತದಾರರು ಸಾಬೀತುಪಡಿಸಿದ್ದಾರೆ.
  • ಎಎಪಿಯ ಶಾರ್ಟ್ ಕಟ್ ರಾಜಕೀಯವನ್ನು ಈಗ ದಿಲ್ಲಿಯ ಜನರು ಶಾರ್ಟ್ ಸರ್ಕ್ಯೂಟ್ ಮಾಡಿದ್ದಾರೆ.
  • ದಿಲ್ಲಿಯ ಜನಾದೇಶವು ಭ್ರಷ್ಟಾಚಾರಕ್ಕೆ ಸ್ಥಳವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯಲ್ಲಿಯೂ ದಿಲ್ಲಿ ಮತದಾರರು ನಮ್ಮನ್ನು ಎಂದಿಗೂ ಕೈಬಿಡಲಿಲ್ಲ. 3 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಎಲ್ಲ 7 ಸ್ಥಾನಗಳನ್ನು ಗೆದ್ದಿದೆ.
  • ಲೋಕಸಭಾ ಚುನಾವಣೆಯ ಗೆಲುವಿನ ನಂತರ, ನಾವು ಮೊದಲು ಹರಿಯಾಣದಲ್ಲಿ ಅಭೂತಪೂರ್ವ ದಾಖಲೆಯ ಗೆಲುವು ಕಂಡಿದ್ದೇವೆ. ನಂತರ ಮಹಾರಾಷ್ಟ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದೇವೆ. ಈಗ ದಿಲ್ಲಿಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.
  • ಈ ಚುನಾವಣೆಯಲ್ಲಿ ನಾನು ಪೂರ್ವಾಂಚಲದ ಸಂಸದ ಎಂದು ಉಲ್ಲೇಖಿಸಿದ್ದೇನೆ. ಆ ಪ್ರದೇಶದ ಸಂಸದನಾಗಿ ನಾನು ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
  • ಇಂದು ಭಾರತದ ಜನರು ತುಷ್ಟೀಕರಣದ ರಾಜಕೀಯವನ್ನು ಬಯಸುವುದಿಲ್ಲ.
  • ಆಡಳಿತವು ನಾಟಕದ ವೇದಿಕೆಯಲ್ಲ. ನಾವು ದಿಲ್ಲಿಯ ಸುಧಾರಣೆಗಾಗಿ ಕೆಲಸ ಮಾಡುತ್ತೇವೆ. ಎನ್‌ಡಿಎ ಎಲ್ಲೆಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿ, ವಿಶ್ವಾಸ ಮತ್ತು ಉತ್ತಮ ಆಡಳಿತವಿದೆ ಎಂದು ಇಡೀ ದೇಶಕ್ಕೆ ತಿಳಿದಿದೆ.
  • ಮಧ್ಯಮ ವರ್ಗವು ಯಾವಾಗಲೂ ಬಿಜೆಪಿಯ ಆದ್ಯತೆಯಾಗಿದೆ.
  • ದಿಲ್ಲಿಯಲ್ಲಿ 'ನಾರಿ ಶಕ್ತಿ' ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿದೆ. ಒಡಿಶಾ, ಮಹಾರಾಷ್ಟ್ರ ಅಥವಾ ಹರಿಯಾಣ ಆಗಿರಲಿ, ನಾವು ಪ್ರತಿ ರಾಜ್ಯದಲ್ಲಿ ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ದಿಲ್ಲಿ ಮಹಿಳೆಯರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ.
  • ದಿಲ್ಲಿ ದೇಶದ ಹೆಬ್ಬಾಗಿಲು. ಅದಕ್ಕಾಗಿಯೇ ಅದು ಅತ್ಯುತ್ತಮ ನಗರ ಮೂಲ ಸೌಕರ್ಯಗಳನ್ನು ಪಡೆಯಬೇಕು.

ಈ ಸುದ್ದಿಯನ್ನೂ ಓದಿ: Delhi Election Results 2025: ದಿಲ್ಲಿಯಲ್ಲಿ ಆಪ್‌ ನೆಲ ಕಚ್ಚಿದ್ದು ಹೇಗೆ? ಇಲ್ಲಿದೆ ಟಾಪ್‌ 6 ಕಾರಣಗಳು

  • ದಿಲ್ಲಿಯ ಆಪ್‌ ಆಡಳಿತ ಜನರ ನಂಬಿಕೆಗೆ ಧಕ್ಕೆ ತಂದಿದೆ. ಯಮುನಾ ನದಿಯನ್ನು ದಿಲ್ಲಿಯ ಅಸ್ಮಿತೆಯನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ.
  • ಆಪ್‌ ನಾಯಕರು ರಾಜಕೀಯವನ್ನು ಬದಲಾಯಿಸುವುದಾಗಿ ಹೇಳಿದರು. ಆದರೆ ಅವರು ಭ್ರಷ್ಟರಾದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿ ಪಕ್ಷವನ್ನು ಆರಂಭಿಸಲಾಯಿತು. ಆದರೆ ಅದರ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದರು. ಅವರು ದಿಲ್ಲಿಯ ಜನರ ನಂಬಿಕೆಗೆ ದ್ರೋಹ ಬಗೆದರು.
  • ಮೊದಲ ವಿಧಾನಸಭೆ ಅಧಿವೇಶನದಲ್ಲೇ ನಾವು ಸಿಎಜಿ ವರದಿಯನ್ನು ಮಂಡಿಸುತ್ತೇವೆ.
  • ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಖಾತೆ ತೆರೆಯಲು ವಿಫಲವಾಗಿದೆ. ಅವರು ಸೋಲಿನ ಚಿನ್ನದ ಪದಕಗಳನ್ನು ಸ್ವತಃ ನೀಡುತ್ತಿದ್ದಾರೆ.
  • ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನು ಒಂದೊಂದಾಗಿ ಮುಗಿಸುತ್ತಿದೆ.