ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Celebrity Summer Fashion: ಮಾಡೆಲ್‌ ಗಾಯತ್ರಿ ಸಂದೀಪ್‌ ಬಿಂದಾಸ್‌ ಸಮ್ಮರ್‌ ಫ್ಯಾಷನ್‌ ಮಂತ್ರ

Celebrity Summer Fashion: ಮಿಸೆಸ್‌ ಇಂಡಿಯಾ ಗ್ಲೋಬ್‌ ಟೈಟಲ್‌ ವಿಜೇತೆ ಗಾಯತ್ರಿ ಸಂದೀಪ್‌ ಮಾಡೆಲ್‌ ಮಾತ್ರವಲ್ಲ, ಫ್ಯಾಷನ್‌ ಇನ್‌ಫ್ಲೂಯೆನ್ಸರ್‌, ಪೇಜ್‌ 3 ಸೆಲೆಬ್ರೆಟಿ ಕೂಡ. ವಿಶ್ವವಾಣಿ ನ್ಯೂಸ್‌ನ ಸೆಲೆಬ್ರೆಟಿ ಸಮ್ಮರ್‌ ಫ್ಯಾಷನ್‌ ಕಾಲಂಗಾಗಿ ಮಾತನಾಡಿರುವ ಅವರು ತಮ್ಮ ಸಮ್ಮರ್‌ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ಕುರಿತಂತೆ ತಿಳಿಸಿದ್ದಾರೆ. ಜತೆಗೆ ಓದುಗರಿಗೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

ಮಾಡೆಲ್‌ ಗಾಯತ್ರಿ ಸಂದೀಪ್‌ ಬಿಂದಾಸ್‌ ಸಮ್ಮರ್‌ ಫ್ಯಾಷನ್‌ ಮಂತ್ರ

ಚಿತ್ರಗಳು: ಗಾಯತ್ರಿ ಸಂದೀಪ್‌, ಮಿಸೆಸ್‌ ಇಂಡಿಯಾ ಗ್ಲೋಬ್‌ 2017

ಸಂದರ್ಶನ: ಶೀಲಾ ಸಿ. ಶೆಟ್ಟಿ

ಫ್ಯಾಷನ್‌ & ಪೇಜ್‌ ತ್ರೀ ಸೆಲೆಬ್ರೆಟಿ ಗಾಯತ್ರಿ ಸಂದೀಪ್‌ ಸಮ್ಮರ್‌ನ ಬಿಂದಾಸ್‌ ಫ್ಯಾಷನ್‌ಗೆ (Celebrity Summer Fashion) ಸೈ ಎಂದಿದ್ದಾರೆ. ಈ ಬೇಸಿಗೆಗೆ ಹೊಂದುವಂತಹ ಮಾರ್ಡನ್‌ ಲುಕ್‌ನಲ್ಲಿ (Modern Look) ಕಾಣಿಸಿಕೊಂಡಿದ್ದಾರೆ. ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುವುದು ಇಂದಿನ ಅಗತ್ಯ. ಅದರಲ್ಲೂ ಫ್ಯಾಷನ್‌ ಕ್ಷೇತ್ರದವರಂತೂ ಸೀಸನ್‌ಗೆ ಮ್ಯಾಚ್‌ ಆಗುವುದು ಮಸ್ಟ್‌ ಎಂಬಂತಾಗಿದೆ ಎಂದು ಹೇಳುವ ಅವರು ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದು, ತಮ್ಮ ಫ್ಯಾಷನ್‌ ಲೈಫ್‌ (Fashion Life) ಕುರಿತಂತೆ ಮಾತ್ರವಲ್ಲದೇ, ಫ್ಯಾಷನ್‌ ಪ್ರೇಮಿಗಳಿಗೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

5

ವಿಶ್ವವಾಣಿ ನ್ಯೂಸ್‌: ನಿಮ್ಮ ಸಮ್ಮರ್‌ ಫ್ಯಾಷನ್‌ನಲ್ಲಿ ಏನೆನೆಲ್ಲಾ ಸೇರಿದೆ?

ಗಾಯತ್ರಿ ಸಂದೀಪ್‌: ಕಂಫರ್ಟಬಲ್‌ ಡ್ರೆಸ್‌ಗಳು, ಲೈಟ್‌ ಕಲರ್‌ನ ಔಟ್‌ಫಿಟ್‌ಗಳು ಸೇರಿವೆ. ಡಾರ್ಕ್‌ ಡ್ರೆಸ್‌ಗಳು ಸೈಡಿಗೆ ಸರಿಸಿದ್ದೇನೆ. ಮನಸ್ಸಿಗೆ ಕೂಲ್‌ ಎಂದೆನಿಸುವ ಫ್ಲೋರಲ್‌ ಹಾಗೂ ಟ್ರೆಂಡಿ ಡಿಸೈನರ್‌ವೇರ್‌ಗಳನ್ನು ಸೇರಿಸಿಕೊಂಡಿದ್ದೇನೆ.

ವಿಶ್ವವಾಣಿ ನ್ಯೂಸ್‌: ಸಮ್ಮರ್‌ ಫ್ಯಾಷನ್‌ನಲ್ಲಿ ನೀವು ಮರೆಯದೇ ಫಾಲೋ ಮಾಡುವ ಬ್ಯೂಟಿ ಮಂತ್ರವೇನು?

ಗಾಯತ್ರಿ ಸಂದೀಪ್‌: ಸನ್‌ಸ್ಕ್ರೀನ್‌ ಬಳಸದೇ ನಾನು ಹೊರಗೆ ಹೋಗುವುದೇ ಇಲ್ಲ. ಮೇಕಪ್‌ ಕಡಿಮೆ ಮಾಡುತ್ತೇನೆ. ಆಗಾಗ್ಗೆ ಮುಖ ವಾಶ್‌ ಮಾಡುತ್ತಿರುತ್ತೇನೆ. ನೀರನ್ನು ಹೆಚ್ಚು ಕುಡಿಯುತ್ತೇನೆ.

6

ವಿಶ್ವವಾಣಿ ನ್ಯೂಸ್‌: ಬೇಸಿಗೆಯಲ್ಲಿ ನೀವು ಫಾಲೋ ಮಾಡುವ ಸ್ಟೈಲ್‌ ಸ್ಟೇಟ್‌ಮೆಂಟ್‌?

ಗಾಯತ್ರಿ ಸಂದೀಪ್‌: ಸನ್‌ಗ್ಲಾಸ್‌ ಇಲ್ಲದೇ ಬಿಸಿಲಲ್ಲಿ ಓಡಾಡುವುದಿಲ್ಲ! ಸನ್‌ಗ್ಲಾಸ್‌ ನನ್ನ ಸ್ಟೈಲಿಂಗ್‌ನ ಹೈಲೈಟ್‌ ಎನ್ನಬಹುದು.

ವಿಶ್ವವಾಣಿ ನ್ಯೂಸ್‌: ಸಮ್ಮರ್‌ನಲ್ಲಿ ಟ್ರಾವೆಲ್‌ ಮಾಡುವವರಿಗೆ ಏನು ಸಲಹೆ ನೀಡುತ್ತೀರಾ?

ಗಾಯತ್ರಿ ಸಂದೀಪ್‌: ಆದಷ್ಟೂ ಹೆವ್ವಿ ಲಗೇಜ್‌ ಕ್ಯಾರಿ ಮಾಡಬೇಡಿ. ಸದಾ ಜತೆಯಲ್ಲಿ ನೀರಿನ ಬಾಟಲ್‌ ಇರಲಿ, ಸಿಂಪಲ್‌ ಔಟ್‌ಫಿಟ್‌ ಧರಿಸಿ. ಲೇಯರ್‌ ಲುಕ್‌ ಬೇಡ. ಕ್ಯಾಪ್‌ ತಲೆಯ ಮೇಲಿರಲಿ. ಬಿಸಿಲಿಗೆ ಛತ್ರಿಯನ್ನು ಬಳಸಿ.

ವಿಶ್ವವಾಣಿ ನ್ಯೂಸ್‌: ಸಮ್ಮರ್‌ ಸ್ಟೈಲಿಂಗ್‌ ಪ್ರಿಯರಿಗೆ ಒಂದೈದು ಟಿಪ್ಸ್‌ ನೀಡಿ?

ಗಾಯತ್ರಿ ಸಂದೀಪ್‌: 1. ಆರಾಮದಾಯಕ ಡ್ರೆಸ್‌ಗೆ ಆದ್ಯತೆ ನೀಡಿ

  1. ಲೈಟ್‌ವೈಟ್‌ ಡ್ರೆಸ್‌ಗಳನ್ನು ಚೂಸ್‌ ಮಾಡಿ
    3. ಕಾಲಿಗೆ ಫ್ಲಿಪ್‌ ಫ್ಲಾಪ್‌ ಧರಿಸಿ
    4. ಸನ್‌ಗ್ಲಾಸ್‌ ಮರೆಯದೇ ಧರಿಸಿ
    5. ಲೈಟಾಗಿ ಮೇಕಪ್‌ ಮಾಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)‌

ಈ ಸುದ್ದಿಯನ್ನೂ ಓದಿ | Junk Jewel Fashion: ಸೀಸನ್‌ ಫಂಕಿ ಲುಕ್‌ಗೆ ಜಂಕ್‌ ಜ್ಯುವೆಲರಿ ಸಾಥ್‌