ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Frocks Fashion: ಮುಂಬರುವ ಸೀಸನ್‌ಗೂ ಮುನ್ನವೇ ಲಗ್ಗೆ ಇಟ್ಟ ಬ್ಯೂಟಿಫುಲ್‌ ಫ್ರಾಕ್‌ಗಳಿವು!

Frocks Fashion: ಮುಂಬರುವ ಸೀಸನ್‌ಗೂ ಮುನ್ನವೇ ನಾನಾ ಬಗೆಯ ಅತ್ಯಾಕರ್ಷಕ ಫ್ರಾಕ್‌ಗಳು ಫ್ಯಾಷನ್‌ ಲೋಕದ ಬಾಗಿಲು ಬಡಿದಿವೆ. ಯಂಗ್‌ ಲುಕ್‌ ನೀಡುವ ಇವು ಎಲ್ಲಾ ವಯಸ್ಸಿನ ಮಾನಿನಿಯರನ್ನು ಸವಾರಿ ಮಾಡಲು ಸಿದ್ಧವಾಗಿವೆ. ಯಾವ್ಯಾವ ಡಿಸೈನ್ಸ್‌ ಬಂದಿವೆ? ಹೇಗೆಲ್ಲಾ ವಿನ್ಯಾಸ ಹೊಂದಿರುತ್ತವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಡಿಟೇಲ್ಸ್ ನೀಡಿದ್ದಾರೆ.

ಮುಂಬರುವ ಸೀಸನ್‌ಗೂ ಮುನ್ನವೇ ಲಗ್ಗೆ ಇಟ್ಟ ಬ್ಯೂಟಿಫುಲ್‌ ಫ್ರಾಕ್‌ಗಳಿವು!

ಚಿತ್ರಕೃಪೆ: ಪಿಕ್ಸೆಲ್‌

~ ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮುಂಬರುವ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಬಗೆಬಗೆಯ ಡಿಸೈನ್‌ನ ಫ್ರಾಕ್‌ಗಳು ಫ್ಯಾಷನ್‌ (Frocks Fashion) ಲೋಕಕ್ಕೆ ಲಗ್ಗೆ ಇಟ್ಟಿವೆ. ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಧರಿಸಿದಾಗ ಮನೋಲ್ಲಾಸ ನೀಡುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಜೆಮೆಟ್ರಿಕಲ್‌ ಪ್ರಿಂಟ್ಸ್‌ನ ವಿನ್ಯಾಸದ ಚೆಕ್ಸ್‌ ಬಾಕ್ಸ್‌ ಪ್ರಿಂಟ್ಸ್‌ನ ಲೈಟ್‌ವೈಟ್‌ ಫ್ರಾಕ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಸಿಂಪಲ್‌ ಆಗಿ ಕಾಣುವ ಈ ಪ್ರಿಂಟ್ಸ್‌ ಫ್ರಾಕ್‌ಗಳು, ಇಂದು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿದ್ದು, ಕ್ಯಾಶುವಲ್‌ ಲುಕ್‌ಗೆ ಸಾಥ್‌ ನೀಡುತ್ತಿವೆ. ಅಂದಹಾಗೆ, ಬಾಲಿವುಡ್‌ ನಟಿಯರು ಫ್ರಾಕ್‌ಗಳ ಪ್ರೇಮಿಗಳು.

21

ಎ ಲೈನ್‌ ಮೈಕ್ರೋ ಫ್ಲೀಟ್ಸ್‌ ಫ್ರಾಕ್‌

ನೋಡಲು ಮಕ್ಕಳ ಫ್ರಾಕ್‌ನಂತೆ ಕಾಣುವ ಮಾನಿನಿಯರನ್ನು ಎ ಲೈನ್‌ ಡಿಸೈನ್‌ನ ಮೈಕ್ರೋ ಫ್ಲೀಟ್ಸ್‌ ಫ್ರಾಕ್‌ಗಳು ಇಂದು ಮಾನಿನಿಯರನ್ನು ಹೆಚ್ಚು ಆಕರ್ಷಿಸುತ್ತಿವೆ. ಅದರಲ್ಲೂ ಸಿಲ್ಕ್‌ ಮೆಟಿರೀಯಲ್‌ನವು ನೋಡಲು ಅತ್ಯಾಕರ್ಷವಾಗಿ ಕಾಣುತ್ತವೆ. ಒಂದರ ಹಿಂದೊಂದರಂತೆ ಇರುವ ನೆರಿಗೆಗಳು ಸೊಂಟದ ಸುತ್ತಾ ವಿನ್ಯಾಸಗೊಳಿಸಿದಂತೆ ಬಿಂಬಿಸುತ್ತವೆ. ಅಂದಹಾಗೆ, ಮೈಕ್ರೋಫ್ಲೀಟ್ಸ್‌ ಇರುವ ಸಿಲ್ಕ್‌ ಫ್ರಾಕ್‌ಗಳು ಕೇವಲ ಸಾಫ್ಟ್‌ ಮೆಟೀರಿಯಲ್‌ ಅಥವಾ ಸಿಲ್ಕ್‌ ಮೆಟೀರಿಯಲ್‌ನಲ್ಲಿ ಮಾತ್ರ ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣುತ್ತವೆ. ಬ್ರೋಕೆಡ್‌ ಇಲ್ಲವೇ ಕಾಟನ್‌ನವು ಉತ್ತಮವಲ್ಲ. ಇದು ಬಾಡಿ ಮಾಸ್‌ಇಂಡೆಕ್ಸ್‌ ಹೆಚ್ಚಾಗಿ ಬಿಂಬಿಸುತ್ತವೆ. ಹಾಗಾಗಿ, ಆದಷ್ಟೂ ತಮ್ಮ ಬಾಡಿ ಸೂಟ್‌ ಆಗುವಂತಹ ಫ್ಯಾಬ್ರಿಕ್‌ನ ಫ್ರಾಕ್‌ಗಳನ್ನು ಸೆಲೆಕ್ಟ್ ಮಾಡುವುದು ಉತ್ತಮ ಎನ್ನುತ್ತಾರೆ ಡಿಸೈನರ್‌ ರಂಜಿತಾ.

22

ಡಿಫರೆಂಟ್‌ ಲುಕ್‌ ನೀಡುವ ವ್ರಾಪ್‌ ಫ್ರಾಕ್‌

ಸುತ್ತಿಕೊಂಡಂತೆ ಕಾಣುವ ಈ ಫ್ರಾಕ್‌ ಡಿಸೈನ್‌ ಇದೀಗ ಸಾಕಷ್ಟು ಪ್ರಚಲಿತದಲ್ಲಿದೆ. ನೋಡಲು ಯಂಗ್‌ ಲುಕ್‌ ನೀಡುವ ಈ ಫ್ರಾಕ್‌ ಡಿಸೈನ್‌ ಸಾಕಷ್ಟು ಟ್ರೆಂಡಿಯಾಗಿದೆ. ಟೈಯಿಂಗ್‌ ಅಪ್ಷನ್‌ ಇರುವುದು ನೋಡಲು ಬಿಂದಾಸ್‌ ಲುಕ್‌ ನೀಡುತ್ತದೆ ಎನ್ನಬಹುದು. ಮಾಡೆಲ್‌ಗಳು ಅತಿ ಹೆಚ್ಚಾಗಿ ಧರಿಸುವ ಫ್ರಾಕ್‌ ವಿನ್ಯಾಸವಿದು.

ಬ್ಲೌಸಾನ್‌ ಫ್ರಾಕ್‌ ಡಿಸೈನ್‌

ನೋಡಲು ತಕ್ಷಣಕ್ಕೆ ಬ್ಲೌಸ್‌ನಂತೆ ಕಾಣುವ ಈ ಫ್ರಾಕ್‌, ಸೊಂಟದ ಕೆಳಗೆ ಸ್ಕರ್ಟ್‌ನಂತೆ ಕಾಣುತ್ತದೆ. ಆದರೆ, ಇದು ಸಿಂಗಲ್‌ ಪೀಸ್‌ ಡ್ರೆಸ್‌ ಫ್ರಾಕ್‌. ಕೆಲವು ಟಮ್ಮಿಯ ಭಾಗವನ್ನು ಟೈಟಾಗಿರುವಂತೆ ಬಿಂಬಿಸುತ್ತವೆ. ಈ ಫ್ರಾಕ್‌ ಇಂದು ಟೀನೇಜ್‌ ಹುಡುಗಿಯರ ಹಾಗೂ ವರ್ಕಿಂಗ್‌ ವುಮೆನ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ. ಇದು ಟ್ರೆಂಡ್‌ನಲ್ಲಿರುವುದು ಮಾತ್ರವಲ್ಲ, ನಾನಾ ಡಿಸೈನ್‌ಗಳಲ್ಲಿ ಹಾಗೂ ವೈವಿಧ್ಯಮಯ ಸ್ಟಿಚ್ಚಿಂಗ್‌ ಸ್ಟೈಲ್‌ನಲ್ಲಿ ಪಾಪುಲರ್‌ ಆಗಿದೆ. ಈಗಾಗಲೇ ಬ್ಲೌಸಾನ್‌ ಡ್ರೆಸ್‌ಗಳು ಕೂಡ ಹೆಚ್ಚು ರನ್ನಿಂಗ್‌ನಲ್ಲಿವೆ.

23

ಫಿಟ್‌ ಆ್ಯಂಡ್‌ ಫ್ಲೇರ್‌ ಸ್ಕೇಟರ್‌ ಫ್ರಾಕ್‌

ನೋಡಲು ಫಿಟ್‌, ಸೊಂಟದ ಕೆಳಗೆ ಫ್ಲೇರ್‌ ಇರುವಂತಹ ಸ್ಕೇಟರ್‌ ಫ್ರಾಕ್‌ಗಳು ಕೂಡ ಇಂದು ಜನಪ್ರಿಯಗೊಂಡಿವೆ. ಗ್ರ್ಯಾಂಡ್‌ ಲುಕ್‌ನಲ್ಲಿ ಇವು ಲಭ್ಯವಿಲ್ಲ. ಏನಿದ್ದರೂ ಇವು ಕೇವಲ ಸಿಂಪಲ್‌ ಡಿಸೈನ್ಸ್‌ನಲ್ಲಿ ದೊರೆಯುತ್ತವೆ. ಇವು ಟೀನೇಜ್‌ ಹುಡುಗಿಯರನ್ನು ಸೆಳೆದಿವೆ. ಸದ್ಯಕ್ಕೆ ಮಾನೋಕ್ರೋಮ್‌, ಚೆಕ್ಸ್‌ ಹಾಗೂ ಬಾಕ್ಸ್‌ ಡಿಸೈನರ್‌ವೇರ್‌ಗಳು ಜನಪ್ರಿಯಗೊಂಡಿವೆ. ಲೇಸ್‌ ಹಾಗೂ ನೆಟ್ಟೆಡ್‌ ಮೆಟಿರಿಯಲ್ಸ್‌ನವು ಚಾಲ್ತಿಯಲ್ಲಿವೆ. ಸ್ಲಿಮ್‌ ಇರುವ ನಟಿಯರ ಫೇವರಿಟ್‌ ಡಿಸೈನ್‌ ಫ್ರಾಕ್‌ ಇದು.

ಈ ಸುದ್ದಿಯನ್ನೂ ಓದಿ | Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಬಂತು ಫೆಮಿನೈನ್‌ ಲುಕ್‌ ನೀಡುವ ಡಿಸೈನರ್‌ವೇರ್ಸ್

ಫ್ರಾಕ್‌ ಪ್ರಿಯರಿಗೆ ಟಿಪ್ಸ್‌

  • ಪ್ಲಂಪಿಯಾಗಿರುವವರಿಗೆ ಕ್ಯಾಸ್ಕೆಡ್‌ ಫ್ರಾಕ್‌ ಬೇಡ.
  • ಶೋಲ್ಡರ್‌ ಸ್ಟ್ರಕ್ಚರ್‌ಗೆ ತಕ್ಕಂತೆ ನೆಕ್‌ಲೈನ್‌ ಡಿಸೈನ್‌ ಇರುವುದು ಅಗತ್ಯ.
  • ಹಾಲ್ಟರ್‌ ನೆಕ್‌ ಧರಿಸುವವರ ಶೋಲ್ಡರ್‌ ಆಕರ್ಷಕವಾಗಿರಬೇಕು.
  • ಟೈಯಿಂಗ್‌ ಇದ್ದಲ್ಲಿ ಬ್ಯಾಕ್‌ಸೈಡ್‌ ಇರಬೇಕು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)