Gingham Dress Fashion 2025: ಯುವತಿಯರ ಫ್ಯಾಷನ್‌ಗೂ ಕಾಲಿಟ್ಟ ಗಿಂಗಂ ಫ್ಯಾಷನ್
ಇದೀಗ ಗಿಂಗಂ ಫ್ಯಾಷನ್ ಪುರುಷರು ಧರಿಸುವ ಶರ್ಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ! ಬದಲಿಗೆ ಯುವತಿಯರ ನಾನಾ ಡ್ರೆಸ್‌ಗಳಿಗೂ ಕಾಲಿಟ್ಟಿದೆ. ಹಾಗಾದಲ್ಲಿ, ಇದೇನಿದು ಗಿಂಗಂ ಫ್ಯಾಷನ್? ಸ್ಟೈಲಿಂಗ್ ಹಾಗೂ ಆಯ್ಕೆ ಹೇಗೆ? ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಯುವತಿಯರ ಡ್ರೆಸ್‌ಗಳಿಗೂ ಗಿಂಗಂ ಫ್ಯಾಷನ್ (Gingham Dress Fashion 2025) ಕಾಲಿಟ್ಟಿದೆ. ಹೌದು, ಬಾಕ್ಸ್, ಕಾರ್ನರ್ ಲೈನ್ಸ್, ಚೆಸ್ ಬೋರ್ಡ್, ಕ್ರಿಸ್ಕ್ರಾಸ್ ಲೈನ್ಸ್... ಹೀಗೆ ನಾನಾ ಚೆಕ್ಸ್‌ನಂತಹ ಪ್ರಿಂಟ್ ಇರುವ ಗಿಂಗಂ ಸ್ಟೈಲ್‌ನ ಡಿಸೈನರ್‌ವೇರ್‌ಗಳು ಈ ಸೀಸನ್ ಎಂಡ್‌ನಲ್ಲಿ ಬಿಡುಗಡೆಯಾಗಿವೆ. ಅಂದಹಾಗೆ ಈ ಫ್ಯಾಷನ್ ಹೊಸತೇನಲ್ಲ! ಆದರೆ, ಮುಂಬರುವ ಸೀಸನ್‌ಗೆ ಇದು ಹೊಸ ರೂಪದೊಂದಿಗೆ ಕಾಲಿಟ್ಟಿದೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರದ ಕಾರ್ಪೋರೇಟ್ ಜಗತ್ತಿನಲ್ಲಿ ಇವು ಇಂದಿಗೂ ಹೆಚ್ಚು ಪ್ರಚಲಿತದಲ್ಲಿವೆ. ಅಂದಹಾಗೆ, ನಿಮಗೆ ಗೊತ್ತೇ? ಗಿಂಗಂ ಸ್ಟೈಲ್ ಬಂದದ್ದು ಮೇಜಿನ ಮೇಲೆ ಹಾಕುವ ಫ್ಯಾಬ್ರಿಕ್‌ನಿಂದ ಎಂದರೆ ನೀವು ನಂಬಲೇಬೇಕು. ವಿದೇಶಗಳಲ್ಲಿ ಮೇಜಿನ ಮೇಲೆ ಹಾಕುವ ಬಾಕ್ಸ್ ಪ್ರಿಂಟ್‌ನ ಫ್ಯಾಬ್ರಿಕ್ ಮೇಲೆ ಫ್ಯಾಷನಿಸ್ಟ್‌ಗಳ ಕಣ್ಣು ಬಿದ್ದು ಇದೀಗ ಸೀಸನ್ ಡಿಸೈನ್ ಲಿಸ್ಟ್‌ನಲ್ಲಿ ಸ್ಥಾನ ಗಳಿಸಿದೆ ಎಂದು ನಗುತ್ತಾ ಹೇಳುತ್ತಾರೆ ಡಿಸೈನರ್ ರಕ್ಷ್.

ಗಿಂಗಂ ಸ್ಟೈಲ್ ಸ್ಟೇಟ್‌ಮೆಂಟ್ ರೂಲ್ಸ್
ಹುಡುಗಿಯರು ಗಿಂಗಂ ಸ್ಟೈಲ್ ಅಳವಡಿಸಿಕೊಳ್ಳುವ ಮುನ್ನ ಆದಷ್ಟೂ ಅದು ತಮಗೆ ಸೂಟ್ ಆಗುವುದೇ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವಾದಲ್ಲಿಇವು ನೋಡಲು ಸೂಟ್ ಆಗದಿರಬಹುದು. ಹಾಗಾಗಿ ವಯಸ್ಸಿಗೆ ಸೂಟ್ ಆಗುವಂತೆ ಮ್ಯಾಚ್ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್ ರೇಷ್ಮಾ.

ಗಿಂಗಂ ಫ್ರಾಕ್/ಟಾಪ್ ಫ್ಯಾಷನ್
ಮರೂನ್, ಮಾರ್ಸೊಲಾ, ರೆಡಿಯಂಟ್ ವರ್ಣದ ಗಿಂಗಂ ಫ್ರಾಕ್‌ಗಳು ಇಂದು ಹೆಚ್ಚು ಜನಪ್ರಿಯವಾಗಿವೆ. ಈ ಮೊದಲು ಗಿಂಗಂ ಶೈಲಿಯಲ್ಲಿ ಹೆಚ್ಚಾಗಿ ಕಾಲರ್ ಫ್ರಾಕ್‌ಗಳು ಚಾಲ್ತಿಯಲ್ಲಿದ್ದವು. ಆದರೆ, ಇದೀಗ ವಿಭಿನ್ನ ನೆಕ್‌ಲೈನ್ ಇರುವಂತವು ರನ್ನಿಂಗ್‌ನಲ್ಲಿವೆ. ಜತೆಗೆ ಸ್ಲಿವ್ಲೆಸ್ ಹಾಗೂ ಬ್ಲಾಂಕೆಟ್‌ನ ಶೈಲಿಯವು ಫ್ಯಾಷನ್‌ನಲ್ಲಿವೆ. ಮೊದಲಿದ್ದ ಜಾಕೆಟ್‌ಗಳು ಈಗ ಫ್ಯಾಷನ್‌ನಲ್ಲಿಲ್ಲ. ಗಿಂಗಂ ಶೈಲಿಯವು ಹೆಚ್ಚಾಗಿ ಕಾಟನ್ ಮೆಟೀರಿಯಲ್‌ನಲ್ಲಿ ದೊರಕುವುದರಿಂದ ಸ್ಲಿಮ್ ಆಗಿರುವವರಿಗೆ ಚೆನ್ನಾಗಿ ಒಪ್ಪುತ್ತವೆ. ಇನ್ನು ಪ್ಲಂಪಿಯಾಗಿರುವವರು ಆದಷ್ಟೂ ನೈಲಾನ್ ಹಾಗೂ ಸಾಫ್ಟ್ ಮೆಟೀರಿಯಲ್‌ನಂತಿರುವ ಡಿಸೈನರ್‌ವೇರ್ ಸೆಲೆಕ್ಟ್ ಮಾಡುವುದು ಉತ್ತಮ.
ಈ ಸುದ್ದಿಯನ್ನೂ ಓದಿ | Star Fashion Interview 2025: ಗುಲ್ಮಾರ್ಗ್‌ನಲ್ಲಿ ನಟಿ ನಿಮಿಕಾ ರತ್ನಾಕರ್ ಸೀರೆ ಲವ್
ಗಿಂಗಂ ಫ್ಯಾಷನ್ ಟಿಪ್ಸ್
* ಕಾಂಟ್ರಾಸ್ಟ್ ಶೇಡ್ಸ್ ಕಾನ್ಸೆಪ್ಟ್ ಇಲ್ಲಿ ಮ್ಯಾಚ್ ಆಗದು.
* ಸಾಮಾನ್ಯವಾಗಿ ವೈಟ್ ವರ್ಣ ಇತರೆ ಬಣ್ಣದೊಂದಿಗೆ ದೊರೆಯುತ್ತವೆ.
* ಗಿಂಗಂ ಟ್ರೆಡಿಷನಲ್ ಲುಕ್‌ಗೆ ಹೊಂದುವುದಿಲ್ಲ.
* ವ್ಯಕ್ತಿತ್ವಕ್ಕೆ ತಕ್ಕಂತೆ ಫ್ಯಾಬ್ರಿಕ್-ಡಿಸೈನ್ ಚೂಸ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)