ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೆನ್‌ ಝೀ ಹುಡುಗಿಯ ಉಗುರು ತುಂಬ ಮರಿ ದೆವ್ವಗಳು, ಸ್ಕೆಲಿಟನ್, ಜೇಡರಬಲೆಯ ಡಿಸೈನ್‌: ಹ್ಯಾಲೋವೀನ್ ಸೀಸನ್‌ಗೆ ಎಂಟ್ರಿ ಕೊಟ್ಟ ಸ್ಪೂಕಿ ನೇಲ್ಆರ್ಟ್

Halloween Nailart 2026: ಈ ಹ್ಯಾಲೋವೀನ್ ಸೀಸನ್‌ಗೆ ನಾನಾ ಬಗೆಯ ಸ್ಪೂಕಿ ನೇಲ್ ಆರ್ಟ್‌ಗಳು ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಯಾಗಿವೆ. ಮರಿ ದೆವ್ವಗಳು, ಸ್ಕೆಲಿಟನ್, ಜೇಡರಬಲೆ, ದೆವ್ವದ ಮನೆಯ ವಾತಾವರಣ, ಕತ್ತಲೆ, ಬ್ಲಾಕ್ ಮ್ಯಾಜಿಕ್ ದೃಶ್ಯ, ಬಗೆಬಗೆಯ ಗೋಸ್ಟ್‌ನ ರೂಪಗಳು, ಹೆದರಿಕೆ ಹುಟ್ಟಿಸುವಂತಹ ಚಿತ್ರ ಸೇರಿದಂತೆ ಊಹೆಗೂ ಮೀರಿದ ಉಗುರಿನ ಚಿತ್ತಾರಗಳು ಉಗುರುಗಳನ್ನು ಸಿಂಗರಿಸುತ್ತಿವೆ.

ಸೀಸನ್‌ಗೆ ಎಂಟ್ರಿ ನೀಡಿದ ಹ್ಯಾಲೋವೀನ್ ಸ್ಪೂಕಿ ನೇಲ್ಆರ್ಟ್

ಚಿತ್ರಕೃಪೆ: ಇನ್‌ಸ್ಟಾಗ್ರಮ್‌ -

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಹ್ಯಾಲೋವೀನ್ ಸೀಸನ್‌ನಲ್ಲಿ ಬಗೆಬಗೆಯ ಸ್ಪೂಕಿ ನೇಲ್ ಆರ್ಟ್ ಡಿಸೈನ್‌ಗಳು ಹುಡುಗಿಯರ ಉಗುರುಗಳನ್ನು ಅಲಂಕರಿಸುತ್ತಿವೆ. ಮುಂಬರುವ ಹ್ಯಾಲೋವೀನ್ ಥೀಮ್‌ಗೆ ಮ್ಯಾಚ್ ಆಗುವಂತಹ ಭಯಾನಕ ಚಿತ್ರಣಗಳನ್ನು ಉಗುರುಗಳ ಮೂಡಿಸುವ ಕಲೆಗೆ ಸ್ಪೂಕಿ ನೇಲ್ ಆರ್ಟ್ ಎನ್ನಲಾಗುತ್ತದೆ.

ಟ್ರೆಂಡಿಯಾಗಿರುವ ಸ್ಪೂಕಿ ನೇಲ್ಆರ್ಟ್ ಚಿತ್ರಗಳಿವು

ಈ ಸೀಸನ್‌ನಲ್ಲಿ ಸ್ಪೂಕಿ ಆರ್ಟ್‌ನಲ್ಲಿ ಮರಿ ದೆವ್ವಗಳು, ಸ್ಕೆಲಿಟನ್, ಜೇಡರಬಲೆ, ದೆವ್ವದ ಮನೆಯ ವಾತಾವರಣ, ಕತ್ತಲೆ, ಬ್ಲಾಕ್ ಮ್ಯಾಜಿಕ್ ದೃಶ್ಯ, ಬಗೆಬಗೆಯ ಗೋಸ್ಟ್‌ನ ರೂಪಗಳು, ಹೆದರಿಕೆ ಹುಟ್ಟಿಸುವಂತಹ ಚಿತ್ರ ಸೇರಿದಂತೆ ಊಹೆಗೂ ಮೀರಿದ ಉಗುರಿನ ಚಿತ್ತಾರಗಳು ಉಗುರುಗಳನ್ನು ಸಿಂಗರಿಸುತ್ತಿವೆ.

Halloween 2026

ಸೀಸನ್‌ನಲ್ಲಿ ಹುಡುಗಿಯರ ನೇಲ್ಆರ್ಟ್

ಅಂದಹಾಗೆ, ಇವು ಇತರೇ ಸೀಸನ್‌ನಲ್ಲಿ ಕಾಣ ಸಿಗುವುದಿಲ್ಲ. ಕೇವಲ ಹ್ಯಾಲೋವೀನ್ ಸೀಸನ್‌ನಲ್ಲಿ ಅನಾವರಣಗೊಳ್ಳುತ್ತವೆ. ಮೇಕಪ್‌ನ ಭಾಗವಾಗುತ್ತವೆ. ಕ್ಯೂಟ್ ಎಂದೆನಿಸುವುದಕ್ಕಿಂತ ಹೆಚ್ಚಾಗಿ ಸ್ಕೇರಿ ಡಿಸೈನ್ಸ್ ಒಳಗೊಂಡಿರುತ್ತವೆ. ಅದರಲ್ಲೂ ಹುಡುಗಿಯರ ಉಗುರುಗಳನ್ನು ಮಾಟಗಾತಿಯಂತೆ ಬಿಂಬಿಸುತ್ತವೆ ಎನ್ನುತ್ತಾರೆ ನೇಲ್ ಡಿಸೈನರ್ ರಂಜಿನಿ.

ವರ್ಷಕ್ಕೊಮ್ಮೆ ಟ್ರೆಂಡಿಯಾಗುವ ಡಿಸೈನ್ಸ್

ಇದೇನಿದ್ದರೂ ವರ್ಷಕ್ಕೊಮ್ಮೆ ಎಂಟ್ರಿ ನೀಡುವ ನೇಲ್ ಆರ್ಟ್. ವಿದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಇವು ಇದೀಗ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಜೆನ್ ಝೀ ಹುಡುಗಿಯರನ್ನು ಸೆಳೆದಿವೆ ಎನ್ನುತ್ತಾರೆ ನೇಲ್ಆರ್ಟಿಸ್ಟ್‌ಗಳು.

Halloween

ಸ್ಪೂಕಿ ನೇಲ್ಆರ್ಟ್ ಬಗ್ಗೆ ಗೊತ್ತಿರಲಿ

  • ತಾತ್ಕಲಿಕ ಬ್ಯೂಟಿ ಟ್ರೆಂಡ್‌ನಲ್ಲಿದೆ ಎಂಬುದನ್ನು ನೆನಪಿನಲ್ಲಿಡಿ.
  • ಇತರ ಸಮಯಕ್ಕೆ ಇವು ಹೊಂದುವುದಿಲ್ಲ.
  • ತಕ್ಷಣಕ್ಕೆ ಬೇಕಿದ್ದಲ್ಲಿ ಪ್ರೆಸ್ ಆನ್ ನೇಲ್ ಬಳಕೆ ಮಾಡುವುದು ಉತ್ತಮ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)