ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi 2025: ಹೋಳಿಯಲ್ಲಿ ಸಂಭ್ರಮಿಸುವುದು ಓಕೆ! ಮೇಕಪ್ ಯಾಕೆ?

Holi 2025: ಹೋಳಿ ಸಂಭ್ರಮ ಓಕೆ! ಮುಖಕ್ಕೆ ಮೇಕಪ್ ಯಾಕೆ ಎಂದು ಕೇಳುತ್ತಿದ್ದಾರೆ ಮೇಕಪ್ ಆರ್ಟಿಸ್ಟ್‌ಗಳು. ಹಬ್ಬದ ಸಂಭ್ರಮದಲ್ಲಿ ಹಾಕುವ ಮಲ್ಟಿ ಲೇಯರ್ ಮೇಕಪ್‌ಗೆ ನೋ ಹೇಳಿ! ಇದು ಬಣ್ಣದಿಂದ ಚರ್ಮಕ್ಕೆ ಆಗುವ ಎಫೆಕ್ಟ್ ತಡೆಯಬಹುದು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್‌ಗಳು. ಈ ಕುರಿತಂತೆ ಸಿಂಪಲ್ಲಾಗಿ ಉತ್ತರಿಸಿದ್ದಾರೆ.

ಹೋಳಿಯಲ್ಲಿ ಸಂಭ್ರಮಿಸುವುದು ಓಕೆ! ಮೇಕಪ್ ಯಾಕೆ?

ಚಿತ್ರ ಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೋಳಿಯಲ್ಲಿ ಸಂಭ್ರಮಿಸುವುದು (Holi 2025) ಓಕೆ! ಮೇಕಪ್ ಯಾಕೆ? ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್. ಹೌದು, ಅಂದು ಮೇಕಪ್ ಅವಾಯ್ಡ್ ಮಾಡುವುದರಿಂದ ನಿಮ್ಮ ತ್ವಚೆ ಹಾಗೂ ಚರ್ಮವನ್ನು ಧಕ್ಕೆಯಾಗದಂತೆ ತಡೆಯಬಹುದು. ಸೈಡ್ ಎಫೆಕ್ಟ್‌ನಿಂದ ಬಚಾವ್ ಮಾಡಬಹುದು ಎನ್ನುತ್ತಾರೆ. ಮೇಕಪ್ (Makeup) ಯಾಕೆ ಅವಾಯ್ಡ್ ಮಾಡಬೇಕು? ಇದರಿಂದ ಏನು ಪ್ರಯೋಜನ? ಎಂದು ಯೋಚಿಸುವವರಿಗೆ ಮೇಕಪ್ ಎಕ್ಸ್‌ಪರ್ಟ್ಸ್ (Makeup Experts) ಉತ್ತರ ನೀಡಿದ್ದಾರೆ. ಮೇಕಪ್ ಹಚ್ಚದೇ ಹೋಳಿ (Holi) ಆಡುವಾಗ ಸುಂದರವಾಗಿ ಆಕರ್ಷಕವಾಗಿ ಕಾಣಿಸುವುದು ಹೇಗೆ? ಎಂಬುದರ ಕುರಿತಂತೆಯೂ ಸಿಂಪಲ್ಲಾಗಿ ಉತ್ತರಿಸಿದ್ದಾರೆ.

5

ಹೋಳಿಯಂದು ಮೇಕಪ್ ಹಚ್ಚದಿರುವುದರಿಂದ ಆಗುವ ಪ್ರಯೋಜನಗಳಿವು

ಹೋಳಿಯಂದು ಬಣ್ಣ ಎರಚಾಡುವುದರಿಂದ ಅಂದು ಮೇಕಪ್ ಹಚ್ಚುವುದನ್ನು ತಡೆಯಿರಿ. ಯಾಕೆಂದರೆ, ನಾನಾ ಬಣ್ಣದ ಪೌಡರ್‌ಗಳನ್ನು ಮುಖಕ್ಕೆ ಹಚ್ಚಿದಾಗ ಅಥವಾ ಉಜ್ಜಿದಾಗ ತ್ವಚೆಯ ಮೇಲಿನ ಸೂಕ್ಷ್ಮ ರಂಧ್ರಗಳು ತಾತ್ಕಲಿಕವಾಗಿ ಮುಚ್ಚಿಹೋಗಬಹುದು. ಚರ್ಮವು ಸೂಕ್ಷ್ಮವಾಗಿದ್ದಲ್ಲಿ ರ‍್ಯಾಶಸ್ ಆಗಬಹುದು ಅಥವಾ ಮೊಡವೆಗಳು ಮೂಡಬಹುದು. ಅಲರ್ಜಿಯಾಗಬಹುದು ಎನ್ನುತ್ತಾರೆ ಸ್ಕಿನ್ ಎಕ್ಸ್‌ಪರ್ಟ್ ಜಯ.

6

ಮೇಕಪ್ ಇಲ್ಲದೇ ಸುಂದರವಾಗಿ ಕಾಣುವುದು ಹೇಗೆ?

ನೀವು ಮೇಕಪ್ ಮಾಡದೆಯೂ ಸುಂದರವಾಗಿ ಕಾಣಬಹುದು ಎನ್ನುತ್ತಾರೆ ಬ್ಯೂಟಿ ತಜ್ಞರು. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ಪ್ರತಿದಿನ ನೀವು ಬಳಸುವ ಸನ್ ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಹಚ್ಚಿ. ಕಣ್ಣಿಗೆ ಕಾಡಿಗೆ ಹಚ್ಚಿ. ಕ್ರೀಮ್ ಫಿನಿಶಿಂಗ್ ನೀಡುವ ಮ್ಯಾಟ್ ಲಿಪ್‌ಸ್ಟಿಕ್ ಲೇಪಿಸಿ. ಬೇಕಿದ್ದಲ್ಲಿ ಪೌಡರ್ ಹಚ್ಚಿ. ಫೌಂಡೇಷನ್, ಕನ್ಸಿಲರ್, ಬ್ಲಷ್ ಆವಾಯ್ಡ್ ಮಾಡಿ. ಸಿಂಪಲ್ ವಿಧಾನದಿಂದಲೇ ಸುಂದರವಾಗಿ ಕಾಣಿಸಲಿ ಟ್ರೈ ಮಾಡಿ. ಸನ್ ಗ್ಲಾಸ್ ಧರಿಸಿ. ಆಕರ್ಷಕ ಔಟ್‌ಫಿಟ್ ಹಾಗೂ ಆಕ್ಸೆಸರೀಸ್ ಧರಿಸಿ. ನೀವು ಚೆನ್ನಾಗಿ ಕಾಣಿಸುವಿರಿ ಎನ್ನುತ್ತಾರೆ ಸೌಂದರ್ಯ ತಜ್ಞರು.

7

  • ಹೋಳಿಯಂದು ಸನ್‌ ಟ್ಯಾನ್‌ನಿಂದ ಪಾರಾಗಲು ಸನ್‌ಸ್ಕ್ರೀನ್ ಹಚ್ಚಿ.
  • ಕಣ್ಣಿನ ಸುತ್ತಮುತ್ತಲ ತ್ವಚೆಯ ಸಂರಕ್ಷಣೆಗಾಗಿ ಸನ್‌ಗ್ಲಾಸ್ ಧರಿಸಿ.
  • ಹೋಳಿಯಾಟದ ತಕ್ಷಣ ಮುಖವನ್ನು ವಾಶ್ ಮಾಡಿ ಮಾಯಿಶ್ಚರೈಸರ್ ಲೇಪಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)