Holi Nail Art 2025: ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ರಂಗುರಂಗಾದ ನೇಲ್ ಆರ್ಟ್
Holi Nail Art 2025: ಈ ಬಾರಿಯ ಹೋಳಿ ಹಬ್ಬಕ್ಕೆ ಯುವತಿಯರ ಕೈಗಳ ಉಗುರುಗಳು ಮತ್ತಷ್ಟು ರಂಗುರಂಗಾಗಿವೆ. ಅಲ್ಲದೇ, ಊಹೆಗೂ ಮೀರಿದ ಮಿಕ್ಸ್ –ಮ್ಯಾಚ್ ಬಣ್ಣಗಳು ನೇಲ್ ಆರ್ಟ್‌ನಿಂದ ಮಿನುಗುತ್ತಿವೆ. ಹಾಗಾದಲ್ಲಿ, ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ನೇಲ್ ಕಲರ್‌ನಿಂದ ನೀವೂ ಮನೆಯಲ್ಲೇ ಹೇಗೆಲ್ಲಾ ಚಿತ್ತಾರ ಮೂಡಿಸಬಹುದು? ಈ ಕುರಿತಂತೆ ನೇಲ್ ಆರ್ಟ್ ಡಿಸೈನರ್ಸ್ ಸಿಂಪಲ್ಲಾಗಿ ತಿಳಿಸಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಹಬ್ಬದ ಸೀಸನ್‌ನಲ್ಲಿ ರಂಗುರಂಗಾದ ಬಣ್ಣ ಬಣ್ಣದ ನೇಲ್ ಆರ್ಟ್ ಡಿಸೈನ್‌ಗಳು (Holi Nail Art 2025) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲೂ ನಾನಾ ಡಿಸೈನ್‌ಗಳು ಅನಾವರಣಗೊಳ್ಳುತ್ತಿವೆ. ಬಣ್ಣಗಳಿಂದಲೇ ಉಗುರುಗಳನ್ನು ಆಕರ್ಷಕವಾಗಿ, ಕ್ರಿಯಾತ್ಮಕವಾಗಿ ಚಿತ್ರಿಸಿರುವ ವೆರೈಟಿ ಕಂಟೆಂಪರರಿ ನೇಲ್ ಆರ್ಟ್ ಡಿಸೈನ್‌ಗಳು ಈ ಜನರೇಷನ್‌ನ ಯುವತಿಯರನ್ನೂ ಕೂಡ ಸೆಳೆಯುತ್ತಿವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಂಜಿತಾ. ಕೆಂಪು, ಹಸಿರು, ಗುಲಾಬಿ, ಹಳದಿ, ನೀಲಿ, ಕಿತ್ತಳೆ ಇನ್ನಿತರ ಕಡು ಅಥವಾ ತಿಳಿ ಬಣ್ಣ ಸೇರಿದಂತೆ ನೂರಾರು ಬಗೆಯ ನಾನಾ ಬ್ರಾಂಡ್‌ಗಳ ನೇಲ್ ಕಲರ್‌ಗಳಿಂದಲೂ ಈ ಹೋಳಿ ಚಿತ್ತಾರ ಮೂಡಿಸಬಹುದು.ಇದಕ್ಕೆ ಪೂರಕ ಎಂಬಂತೆ ಸಾಕಷ್ಟು ಬಣ್ಣದ ನೇಲ್ ಕಲರ್‌ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಟ್ರೆಂಡಿಯಾಗಿರುವ ಡಿಸೈನ್‌ಗಳು
ಇನ್ನು, ಹೋಳಿ ಹಬ್ಬಕ್ಕೆ ಹೊಂದುವಂತಹ, ಕಲರ್ ವಾಟರ್ ಬಲೂನ್, ಪಿಚಕಾರಿ, ವಾಟರ್ ಗನ್, ರಾಧಾ-ಕೃಷ್ಣ, ಕಾಮನ ಬಿಲ್ಲು, ಹೋಳಿ ಶುಭಾಶಯ ಹೀಗೆ ಹಬ್ಬಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹೊಂದಿರುವ ನೇಲ್ ಆರ್ಟ್ ಡಿಸೈನ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ ಎನ್ನುತ್ತಾರೆ ಸೆಲೆಬ್ರಿಟಿ ಆರ್ಟಿಸ್ಟ್ ರೋಮಿ.

ನೀವೂ ಚಿತ್ರಿಸಬಹುದು
ಹೋಳಿ ನೇಲ್ ಆರ್ಟ್ ಬಹಳ ಸರಳವಾಗಿದ್ದು, ನೇಲ್ ಆರ್ಟ್ ಪ್ರಿಯರು ತಾವೇ ತಮ್ಮ ಉಗುರುಗಳನ್ನು ಸಿಂಗರಿಸಿಕೊಳ್ಳಬಹುದು ಎನ್ನುತ್ತಾರೆ ರೋಮಿ. ಹೋಳಿ ನೇಲ್ ಆರ್ಟ್‌ಗೆ ಆದಷ್ಟು ಎದ್ದು ಕಾಣುವಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ. ಬಣ್ಣವನ್ನು ಮಿಕ್ಸ್ ಮ್ಯಾಚ್ ಮಾಡಿ ತಮ್ಮ ಕ್ರಿಯೇಟಿವಿಟಿಗೆ ತಕ್ಕಂತೆ ಸುಂದರವಾಗಿ ಡಿಸೈನ್ ಮಾಡಿ ಎನ್ನುತ್ತಾರೆ ಅವರು.

ನೀವು ಟ್ರೈ ಮಾಡಿ, ನೋಡಿ
- ನೇಲ್ ಆರ್ಟ್‌ಗೂ ಮುನ್ನ ಮೆನಿಕ್ಯೂರ್ ಮಾಡಿಸಿ/ಮಾಡಿ.
- ನೇಲ್ ಆರ್ಟ್ ಕಿಟ್ ನಿಮ್ಮ ಬಳಿಯಿರಲಿ.
- ಬೇಸ್ ಕಲರ್ ಆಯ್ಕೆ ಮಾಡಿ, ಎಲ್ಲಾಉಗುರುಗಳಿಗೆ ಹಚ್ಚಿ. ಎರಡಕ್ಕಿಂತ ಹೆಚ್ಚು ಕೋಟ್ ಬೇಡ.
- ಹಬ್ಬಕ್ಕೆ ಹೊಂದುವಂತಹ ನಾಲ್ಕರಿಂದ ಐದು ಬಣ್ಣದ ನೇಲ್ ಪಾಲಿಶ್‌ಗಳನ್ನು ಆಯ್ಕೆ ಮಾಡಿ. ಡಿಸೈನ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ?