ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Isha Ambani Metgala Fashion: ಮೆಟ್‌ಗಾಲದಲ್ಲಿ ಇಶಾ ಅಂಬಾನಿ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿದರೇ ಶಾಕ್‌ ಆಗ್ತೀರ

ಈ ಸಾಲಿನ ಮೆಟ್‌ಗಾಲಾದಲ್ಲಿ ಉದ್ಯಮಿ ಇಶಾ ಅಂಬಾನಿ ರೆಡ್‌ಕಾರ್ಪೆಟ್‌ ಡಿಸೈನರ್‌ವೇರ್‌ ಜತೆಗೆ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿದರೆ ಖಂಡಿತಾ ಶಾಕ್‌ ಆಗುತ್ತೀರಾ! ಯಾಕೆ ಎಂದು ಯೋಚಿಸುತ್ತೀದ್ದೀರಾ! ಅದರ ಬೆಲೆ 839 ಕೋಟಿ ರೂ! ಹಾಗೆಂದಿದೆ ಮೆಟ್‌ಗಾಲ ಮೂಲಗಳು.

ಮೆಟ್‌ಗಾಲದಲ್ಲಿ ಇಶಾ ಅಂಬಾನಿ ಧರಿಸಿದ್ದ ದುಬಾರಿ ಬೆಲೆಬಾಳುವ ನೆಕ್ಲೇಸ್‌

ಚಿತ್ರಗಳು: ಇಶಾ ಅಂಬಾನಿ, ಉದ್ಯಮಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮೆಟ್‌ಗಾಲಾದಲ್ಲಿ ಅಂಬಾನಿ ಫ್ಯಾಮಿಲಿಯ ಯುವ ಉದ್ಯಮಿ ಇಶಾ ಅಂಬಾನಿ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿದರೇ ಶಾಕ್‌ ಆಗ್ತೀರಾ! ಹೌದು, ಅವರು ಧರಿಸಿದ್ದ ಡಿಸೈನರ್‌ವೇರ್‌ ಹಾಗೂ ಜ್ಯುವೆಲರಿಗಳು, ಅಲ್ಲಿ ಭಾಗವಹಿಸಿದ್ದ ಸೆಲೆಬ್ರೆಟಿಗಳಿಗೆಲ್ಲರಿಗಿಂತ ದುಬಾರಿ ಬೆಲೆಬಾಳುವಂತದ್ದಾಗಿದ್ದವು. ಅಂಬಾನಿ ಫ್ಯಾಮಿಲಿಯವರೆಂದರೇ ಕೇಳಬೇಕೇ! ಹಾಗಾಗಿ ಧರಿಸಿದ್ದವೆಲ್ಲವೂ ಕೋಟಿ ಕೋಟಿ ರೂ.ಗಳು ಬೆಲೆಬಾಳುವಂತಿದ್ದವು. ಹಾಗೆನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಮೆಟ್‌ಗಾಲಾದಲ್ಲಿ ಹೆಜ್ಜೆ ಹಾಕಿದ ಇಶಾ (Isha Ambani Metgala Fashion), ಅತ್ಯಮೂಲ್ಯ ಜೆಡ್‌, ಪ್ರಿಶಿಯಸ್‌ ಸ್ಟೋನ್ಸ್‌, ಡೈಮಂಡ್‌ ಸೇರಿದಂತೆ ಅತ್ಯಂತ ಬೆಲೆ ಬಾಳುವ ಆಭರಣಗಳನ್ನು ಧರಿಸಿದ್ದರು. ಅವರು ಧರಿಸಿದ್ದ ತಾಯಿ ನೀತಾ ಅಂಬಾನಿಯ ಲೇಯರ್‌ ಲುಕ್‌ ನೀಡುವ ಡೈಮಂಡ್‌ ನೆಕ್ಲೇಸ್‌ವೊಂದು ಎಲ್ಲರ ಮನಸೆಳೆಯಿತು. ಇದೊಂದರ ಬೆಲೆಯೇ ಸರಿ ಸುಮಾರು 839 ಕೋಟಿ ರೂ. ಗಳಾಗಿತ್ತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಇನ್ನುಳಿದಂತೆ ಇತರೆ ಜ್ಯುವೆಲರಿಗಳ ಬೆಲೆ ನಿಖರವಾಗಿ ಎಲ್ಲಿಯೂ ಪ್ರಸ್ತಾಪಿಸಲಾಗಿಲ್ಲ ಎನುತ್ತಾರೆ.

Isha Ambani Metgala Fashion 1

ಇಶಾ ಅಂಬಾನಿಯ ಫ್ಯಾಷನ್‌ ಸ್ಟೇಟ್‌ಮೆಂಟ್‌

ಈ ಜ್ಯುವೆಲರಿಗೆ ಮ್ಯಾಚ್‌ ಆಗುವಂತಹ ಔಟ್‌ಫಿಟ್‌ ಎಲ್ಲರಿಗಿಂತ ವಿಭಿನ್ನವಾಗಿ ಡಿಸೈನ್‌ ಮಾಡಲಾಗಿತ್ತು. ಬಾಲಿವುಡ್‌ ಡಿಸೈನರ್‌ ಅನಾಮಿಕ ಖನ್ನಾ ಈ ಔಟ್‌ಫಿಟ್‌ ಸಿದ್ಧಪಡಿಸಿದ್ದರು.

ಔಟ್‌ಫಿಟ್‌ ಸಿದ್ಧಪಡಿಸಲು ಇಪ್ಪತ್ತು ಸಾವಿರ ಗಂಟೆ

ಇಶಾ ಧರಿಸಿದ್ದ ಹ್ಯಾಂಡ್‌ ಎಂಬ್ರಾಯ್ಡರಿ ಕಟೌಟ್‌ ಔಟ್‌ಫಿಟ್‌ ಸಿದ್ಧಪಡಿಸಲು ಸರಿ ಸುಮಾರು 20,000 ಗಂಟೆಗಳ ಕಾಲ ಸಮಯ ಹಿಡಿಯಿತಂತೆ. ಕ್ರೀಮಿಶ್‌ ಬಣ್ಣದ ಕಟೌಟ್‌ ಎಂಬ್ರಾಯ್ಡರಿ ಡಿಸೈನ್‌ ಜಿಯಾಮೆಟ್ರಿಕ್‌ ವಿನ್ಯಾಸವನ್ನೊಳಗೊಂಡಿತ್ತು. ಬ್ಲ್ಯಾಕ್‌ ಕಲರ್‌ನ ಪ್ಯಾಂಟ್‌, ಇವುಗಳೊಂದಿಗೆ ಹ್ಯಾಂಡ್‌ ಎಂಬ್ರಾಯ್ಡರಿ ಮಾಡಿದ ಲಾಂಗ್‌ ಕೇಪ್‌ನಲ್ಲಿ ಸೆಮಿ ಪ್ರಿಶಿಯಸ್‌ ಹಾಗೂ ಟ್ರೆಡಿಷನಲ್‌ ಲುಕ್‌ ನೀಡುವ ಪರ್ಲ್‌ ಡಿಸೈನ್‌ ಅತ್ಯಾಕರ್ಷಕವಾಗಿತ್ತು. ಇದೊಂದು ದುಬಾರಿ ಔಟ್‌ಫಿಟ್‌ ಲಿಸ್ಟ್‌ಗೆ ಸೇರಿತು ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

Isha Ambani Metgala Fashion 2

ಇಶಾ ಅಂಬಾನಿಯ ರೆಡ್‌ ಕಾರ್ಪೆಟ್‌ ಲವ್‌

* ಇಶಾ ಅಂಬಾನಿ ರೆಡ್‌ಕಾರ್ಪೆಟ್‌ ಫ್ಯಾಷನ್‌ ಇದೇ ಮೊದಲೇನಲ್ಲ

* ಅನಾಮಿಕ ಖನ್ನಾ ಇಶಾ ಅಂಬಾನಿಯ ಫೇವರೇಟ್‌ ಡಿಸೈನರ್‌ & ಸ್ಟೈಲಿಸ್ಟ್.‌

* ಲಕ್ಕಿ ಎಂದು ಸದಾ ತಾಯಿಯ ಜ್ಯುವೆಲರಿ ಧರಿಸುತ್ತಾರೆ.

* ಇಶಾ ಧರಿಸಿದ್ದ ನೆಕ್ಲೇಸ್‌ ನವನಗರ ಮಹಾರಾಜರ ರಿಪ್ಲಿಕಾ ನೆಕ್ಲೇಸ್‌ ಎನ್ನಲಾಗಿದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌