Monsoon Fashion 2025: ಶ್ವೇತಾ ಚೆಂಗಪ್ಪ ಸಿಂಪಲ್ ಮಾನ್ಸೂನ್ ಸ್ಟೈಲ್ ಸ್ಟೇಟ್ಮೆಂಟ್ಸ್
Monsoon Fashion 2025: ಮಾನ್ಸೂನ್ ಸೀಸನ್ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ. ಫುಲ್ ಸ್ಲೀವ್ ಟರ್ಟಲ್ ನೆಕ್ನ ಬ್ಲ್ಯೂ ಟೀ ಶರ್ಟ್ ಹಾಗೂ ಲಾಂಗ್ ಸ್ಕರ್ಟ್ನಲ್ಲಿ ಸಿಂಪಲ್ಲಾಗಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಮಾನ್ಸೂನ್ಗೆ ಸಿಂಪಲ್ ಟಿಪ್ಸ್ ನೀಡಿದ್ದಾರೆ ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಶ್ವೇತಾ ಚೆಂಗಪ್ಪ, ನಟಿ, ನಿರೂಪಕಿ


ಮಾನ್ಸೂನ್ ಸೀಸನ್ನಲ್ಲಿ ನಟಿ ಶ್ವೇತಾ ಚೆಂಗಪ್ಪ, ಟರ್ಟಲ್ ಲುಕ್ನ ಬ್ಲ್ಯೂ ವೈಬ್ರೆಂಟ್ ಟೀ ಶರ್ಟ್ ಹಾಗೂ ಲಾಂಗ್ ಗ್ರೇ ಸ್ಕರ್ಟ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಪರ್ಫೆಕ್ಟ್ ಮಾನ್ಸೂನ್ ಫ್ಯಾಷನ್
ಹೌದು, ಮಾನ್ಸೂನ್ ಸೀಸನ್ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕಾಣಿಸಿಕೊಂಡಿದ್ದು, ಕಾಶ್ಮಿರದ ವಾಟರ್ ಫಾಲ್ ಮುಂದೆ ಪೋಸ್ ನೀಡಿದ್ದಾರೆ. ಜತೆಗೆ ಶೂ ಧರಿಸಿರುವುದು ಅವರಿಗೆ ಪಕ್ಕಾ ಮಾನ್ಸೂನ್ ಲುಕ್ ನೀಡಿದೆ.

ಫ್ಯಾಷನೆಬಲ್ ಲೇಡಿ
ಅಂದಹಾಗೆ, ಶ್ವೇತಾ ಚೆಂಗಪ್ಪ ಮೊದಲಿನಿಂದಲೂ ಫ್ಯಾಷನೆಬಲ್ ಲೇಡಿ. ರಿಯಾಲಿಟಿ ಶೋಗಳಲ್ಲಿ ನಾನಾ ಬಗೆಯ ಪ್ರಯೋಗಾತ್ಮಕ ಡಿಸೈನರ್ವೇರ್ಸ್ ಹಾಗೂ ಸೀರೆಗಳಲ್ಲಿ ಅಂದವಾಗಿ ಕಾಣಿಸಿಕೊಳ್ಳುವ ಇವರು ನಟಿ ಕೂಡ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಈ ಫ್ಯಾಷನೆಬಲ್ ಲುಕ್ಗಾಗಿ ಫಾಲೋವರ್ಸ್ ಕೂಡ ಹೊಂದಿದ್ದಾರೆ.

ಶ್ವೇತಾ ಚೆಂಗಪ್ಪ ಮಾನ್ಸೂನ್ ಫ್ಯಾಷನ್
ಇನ್ನು, ಶ್ವೇತಾ ಚೆಂಗಪ್ಪ, ಮಾನ್ಸೂನ್ನಲ್ಲಿ ಆದಷ್ಟೂ ಕಂಫರ್ಟಬಲ್ ಫ್ಯಾಷನ್ ಅಳವಡಿಸಿಕೊಳ್ಳುತ್ತಾರಂತೆ. ಯಾವುದೇ ಉಡುಗೆಯಾದರೂ ಸೀಸನ್ಗೆ ತಕ್ಕಂತೆ ಇರುವುದರೊಂದಿಗೆ ಕ್ಲಾಸಿಯಾಗಿಯೂ ಕಾಣಿಸಬೇಕು ಎನ್ನುತ್ತಾರೆ. ಆನ್ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವಾಗ ಎಥ್ನಿಕ್ ಡಿಸೈನರ್ವೇರ್ ಧರಿಸುವುದು ನನಗಿಷ್ಟ, ಔಟಿಂಗ್ನಲ್ಲಿ ಸಿಂಪಲ್ ಸ್ಟೈಲ್ ಸ್ಟೇಟ್ಮೆಂಟ್ಗಳಿಷ್ಟ ಎನ್ನುತ್ತಾರೆ.

ಮಾನ್ಸೂನ್ ಲುಕ್ಗೆ ಶ್ವೇತಾ 7 ಸಿಂಪಲ್ ಟಿಪ್ಸ್
- ಲೇಯರ್ ಲುಕ್ ಮಾಡುವಾಗ ಕಂಫರ್ಟಬಲ್ ಫ್ಯಾಷನ್ಗೆ ಆದ್ಯತೆ ನೀಡಬೇಕು.
- ಟ್ರಾವೆಲ್ ಮಾಡುವಾಗ ಆದಷ್ಟೂ ರಿಂಕಲ್ ಫ್ರೀ ಫ್ಯಾಷನ್ವೇರ್ಸ್ ಕ್ಯಾರಿ ಮಾಡುವುದು ಉತ್ತಮ.
- ಟ್ರಾವೆಲಿಂಗ್ ಸಮಯದಲ್ಲಿ ಆದಷ್ಟೂ ಶೂ ಧರಿಸುವುದು ಉತ್ತಮ.
- ಕಂಫರ್ಟಬಲ್ ವೇರ್ಸ್ ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತವೆ.
- ಮಾನ್ಸೂನ್ ವೇರ್ ಲೈಟ್ವೇಟ್ನದ್ದಾಗಿರಲಿ.
- ಸಿಂಪಲ್ ಸ್ಟೈಲ್ ಸ್ಟೇಟ್ಮೆಂಟ್ಸ್ ಫಾಲೋ ಮಾಡಿ.
- ಮಾನ್ಸೂನ್ನಲ್ಲಿ ಸಿಂಪಲ್ ಮೇಕಪ್ ಮಾಡಿ.