24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳ ಸಾವು; ಪಿಒಕೆಯಲ್ಲಿ ಪಾಕಿಸ್ತಾನ ಸೇನೆಯ ಅಟ್ಟಹಾಸ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾ ಪಡೆಯು ನಡೆಸಿರುವ ದೌರ್ಜನ್ಯದಿಂದ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳು ಸಾವನ್ನಪ್ಪಿದ್ದಾರೆ. ಪಿಒಕೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಬಳಿಕ ಸ್ಥಳೀಯರ ಮೇಲೆ ಪೊಲೀಸ್ ದೌರ್ಜನ್ಯವು ಹೆಚ್ಚಾಗಿದ್ದು, ಈವರೆಗೆ 80ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಚುನಾವಣೆ ಬಹಿಷ್ಕಾರಕ್ಕೆ (boycott of the elections) ಕರೆ ನೀಡಿ ಪ್ರತಿಭಟನೆಗಳು ನಡೆಯುತ್ತಿದ್ದು, ಪಾಕಿಸ್ತಾನ ಸೇನಾ ಪಡೆಯು (Pakistan force) ನಡೆಸಿದ ದೌರ್ಜನ್ಯಕ್ಕೆ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾವಲ್ಕೋಟ್‌ನ ಡ್ರೀಕ್ ಎಂಟನೇ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ನಡೆಸಿರುವ ಹಿಂಸಾಚಾರದಲ್ಲಿ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳನ್ನು ಕೊಲ್ಲಲಾಗಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳೆದ ಜೂನ್ 5ರಂದು ಪಿಒಕೆಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.
ಚುನಾವಣೆಗಳನ್ನು ಬಹಿಷ್ಕರಿಸಿ ಸೋಮವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಕೋರ್ ಕಮಿಟಿ ಸದಸ್ಯ ಮತ್ತು ವಕ್ತಾರ ಉಮರ್ ನಜೀರ್ ಕಾಶ್ಮೀರಿ ಅವರ ಸಹೋದರ ಉಸ್ಮಾನ್ ನಜೀರ್ ಸೇರಿದಂತೆ 20 ಜನರನ್ನು ಭದ್ರತಾ ಪಡೆಗಳು ಕೊಂದಿವೆ ಎನ್ನಲಾಗಿದೆ.
ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್
ಕಳೆದ ಜೂನ್ 5ರಿಂದ ಪಿಒಕೆಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪಡೆಗಳು 80ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ. ಭದ್ರತಾ ಪಡೆಗಳು ಜನಸಮೂಹದ ಮೇಲೆ ಗುಂಡು ಹಾರಿಸುತ್ತಿದ್ದಂತೆ ಪ್ರತಿಭಟನಾಕಾರರ ಮೃತ ದೇಹಗಳು ರಸ್ತೆಗಳಲ್ಲಿ ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
#WATCH | Rawalakot, PoJK: Locals alleged indiscriminate firing by security forces in Rawalakot as a large number of protesters were preparing to march towards Muzaffarabad.
— Furious And Trusted News (@FuriousTrusted) July 28, 2026
Social media influencer Aqeel Bhai has recounted the incident, describing the situation and the events…
ಪಿಒಕೆಯ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಕೀಲ್ ಭಾಯ್ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು, ಸ್ನೇಹಿತರೇ ಇಲ್ಲಿನ ಪರಿಸ್ಥಿತಿ ಭೀಕರವಾಗಿದೆ. ರಾವಲಕೋಟ್ ಮೃತ ದೇಹಗಳು ಮತ್ತು ಗಾಯಾಳುಗಳಿಂದ ತುಂಬಿದೆ ಎಂದು ಹೇಳಿದ್ದಾರೆ.
ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಆದರೆ ಬದುಕುತ್ತೇನೆ ಎನ್ನುವ ಭರವಸೆ ಇಲ್ಲ. ನನ್ನ ಅನೇಕ ಸಹೋದರರು ಹುತಾತ್ಮರಾಗಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ನೀಡಿ. ಅಂತಾರಾಷ್ಟ್ರೀಯ ಮಾಧ್ಯಮಗಳೇ ನಮ್ಮನ್ನು ಕಾಪಾಡಿ. ಲೆಕ್ಕವಿಲ್ಲದಷ್ಟು ಗಾಯಗೊಂಡವರು, ಶವಗಳನ್ನು ಹೊತ್ತುಕೊಂಡು ನಮ್ಮ ಭುಜಗಳು ದಣಿದಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನಿ ಭದ್ರತಾ ಪಡೆಗಳು ಅವಾಮಿ ಕ್ರಿಯಾ ಸಮಿತಿ (ಎಎಸಿ) ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಸೋಮವಾರ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗುತ್ತಿದ್ದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ಭದ್ರತಾ ವ್ಯವಸ್ಥೆಗಾಗಿ ಇಸ್ಲಾಮಾಬಾದ್ 14,000 ಕ್ಕೂ ಹೆಚ್ಚು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಈ ಪ್ರದೇಶಕ್ಕೆ ಕಳುಹಿಸಿದೆ. ಹಲವಾರು ಸ್ಥಳಗಳಲ್ಲಿ ಸ್ನೈಪರ್‌ಗಳನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಜೀವಂತ ಮದ್ದುಗುಂಡುಗಳು ಮತ್ತು ದೀರ್ಘ ವ್ಯಾಪ್ತಿಯ ಅಶ್ರುವಾಯು ಶೆಲ್‌ಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಭಿನ್ನಮತವನ್ನು ತಡೆಯಲು ಚುನಾವಣೆಯನ್ನು ಬಹಿಷ್ಕರಿಸುತ್ತಿರುವವರ ಮೇಲೆ ಗುಂಡು ಹಾರಿಸಲು ಭದ್ರತಾ ಪಡೆಗಳಿಗೆ ಆದೇಶಿಸಲಾಗಿದೆ. ಅಲ್ಲದೇ ಇಂಟರ್ನೆಟ್ ಮತ್ತು ಮೊಬೈಲ್ ಸೇವೆ, ವಿದ್ಯುತ್ ಮತ್ತು ನೀರು ಸರಬರಾಜನ್ನು ಕೂಡ ಕಡಿತಗೊಳಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹೆಜ್ಬೊಲ್ಲಾಗೆ ಇರಾನ್ ಬೆಂಬಲ; ಇಸ್ರೇಲ್-ಅಮೇರಿಕ ವಿರುದ್ದ ಜಿಹಾದ್‌ಗೆ ಕರೆ ನೀಡಿದ ಮೊಜ್ತಬಾ ಖಮೇನಿ
ಆಗಸ್ಟ್ 10 ರವರೆಗೆ ಪಿಒಕೆಯಲ್ಲಿ ಚುನಾವಣೆಗಳು
ಪಿಒಕೆಯಲ್ಲಿ 45 ಸ್ಥಾನಗಳಿಗೆ ಆಗಸ್ಟ್ 10 ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಶಾಸಕಾಂಗ ಸಭೆಯಲ್ಲಿ ಪಿಒಕೆಯ 53 ಸ್ಥಾನಗಳಿದ್ದು, ಅದರಲ್ಲಿ 45 ಸ್ಥಾನಗಳಿಗೆ ನೇರ ಆಯ್ಕೆ ಮಾಡಲಾಗುತ್ತದೆ. ಉಳಿದ ಎಂಟು ಸ್ಥಾನಗಳು ಮಹಿಳೆಯರು, ತಂತ್ರಜ್ಞರು ಮತ್ತು ಧರ್ಮಗುರುಗಳಿಗೆ ಮೀಸಲಾಗಿವೆ.