ಕಾವೇರಿ ನದಿ ಜೋಡಣೆ: ಕರ್ನಾಟಕದ ಹಕ್ಕಿನ ಪ್ರಶ್ನೆ
ತಮಿಳುನಾಡು ಕೈಗೆತ್ತಿಕೊಂಡಿರುವ ಕಾವೇರಿ -ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆ ಸಾಕಷ್ಟು ವಿಸ್ತಾರವಾದುದಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ ಡಬ್ಲ್ಯುಡಿಎ) ಸಿದ್ಧಪಡಿಸಿರುವ ಯೋಜನೆಯ ವಿಸ್ತೃತ ಯೋಜನಾ ವರದಿಯ ಪ್ರಕಾರ, ಕರೂರಿನ ಕಟ್ಟಲೈ ಅಣೆಕಟ್ಟಿನಿಂದ ಕಾವೇರಿ ನೀರನ್ನು ಸುಮಾರು 255.60 ಕಿ.ಮೀ. ಉದ್ದದ ಕಾಲುವೆಯ ಮೂಲಕ ವೈಗೈ ಮತ್ತು ಗುಂಡಾರ್ ನದಿಗಳಿಗೆ ಹರಿಸುವ ಉದ್ದೇಶವಿದೆ.
-
ಪ್ರಸ್ತುತ
ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಕಾವೇರಿ ಕೇವಲ ಒಂದು ನದಿಯಲ್ಲ. ಅದು ಕರ್ನಾಟಕದ ಜೀವನಾಡಿ, ರೈತರ ಬದುಕಿನ ಆಶಾಕಿರಣ ಹಾಗೂ ಕೋಟ್ಯಂತರ ಜನರ ಕುಡಿಯುವ ನೀರಿನ ಆಧಾರ. ಇಂತಹ ಅಮೂಲ್ಯ ನದಿಯ ನೀರಿನ ಹಂಚಿಕೆ ಮತ್ತು ಬಳಕೆಯ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿ ಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಇದೀಗ ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಯ ವಿಚಾರವಾಗಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಅತ್ಯಂತ ಮಹತ್ವದ ಬೆಳವಣಿಗೆ. ಈ ಬೆಳವಣಿಗೆಯನ್ನು ಕೇವಲ ಎರಡು ರಾಜ್ಯಗಳ ನಡುವಿನ ನೀರಿನ ವಿವಾದವೆಂದು ಪರಿಗಣಿಸದೆ, ಕರ್ನಾಟಕದ ಜಲಸಂಪನ್ಮೂಲಗಳ ಭವಿಷ್ಯದ ದೃಷ್ಟಿಯಿಂದ ನೋಡಬೇಕಾಗಿದೆ.
ತಮಿಳುನಾಡು ಕೈಗೆತ್ತಿಕೊಂಡಿರುವ ಕಾವೇರಿ -ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆ ಸಾಕಷ್ಟು ವಿಸ್ತಾರವಾದುದಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ ಡಬ್ಲ್ಯುಡಿಎ) ಸಿದ್ಧಪಡಿಸಿರುವ ಯೋಜನೆಯ ವಿಸ್ತೃತ ಯೋಜನಾ ವರದಿಯ ಪ್ರಕಾರ, ಕರೂರಿನ ಕಟ್ಟಲೈ ಅಣೆಕಟ್ಟಿನಿಂದ ಕಾವೇರಿ ನೀರನ್ನು ಸುಮಾರು 255.60 ಕಿ.ಮೀ. ಉದ್ದದ ಕಾಲುವೆಯ ಮೂಲಕ ವೈಗೈ ಮತ್ತು ಗುಂಡಾರ್ ನದಿಗಳಿಗೆ ಹರಿಸುವ ಉದ್ದೇಶವಿದೆ.
ಇದನ್ನೂ ಓದಿ: Dr Jagadeesh Mane Column: ರೂಪಾಯಿ ಚೇತರಿಕೆ ಭಾರತದ ಆರ್ಥಿಕತೆಯ ಹೊಸ ಭರವಸೆ !
ಇದರಿಂದ ತಮಿಳುನಾಡಿನ ಕರೂರು, ತಿರುಚ್ಚಿ, ಪುದುಕ್ಕೋಟೈ, ಶಿವಗಂಗಾ, ರಾಮನಾಥಪುರಂ, ವಿರುದುನಗರ ಮತ್ತು ತೂತುಕುಡಿ ಜಿಲ್ಲೆಗಳ ಸುಮಾರು 3.38 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಯೋಜನೆಯಡಿ ಸುಮಾರು 2252 ದಶಲಕ್ಷ ಘನ ಮೀಟರ್ ನೀರನ್ನು ಬಳಸಿಕೊಳ್ಳುವ ಉದ್ದೇಶವಿದ್ದು, ಕುಡಿಯುವ ಮತ್ತು ಕೈಗಾರಿಕಾ ಉದ್ದೇಶ ಗಳಿಗೂ ಸುಮಾರು 218 ದಶಲಕ್ಷ ಘನ ಮೀಟರ್ ನೀರು ಒದಗಿಸುವ ಪ್ರಸ್ತಾವನೆಯಿದೆ. ಈ ಯೋಜನೆಯ ಪ್ರಮುಖ ಪ್ರಶ್ನೆಯೆಂದರೆ, ಇದಕ್ಕೆ ಅಗತ್ಯವಿರುವ ನೀರು ಎಲ್ಲಿಂದ ಬರುತ್ತದೆ ಮತ್ತು ಅದರ ಮೇಲಿನ ಹಕ್ಕು ಯಾರದ್ದು ಎಂಬುದು.
ತಮಿಳುನಾಡು ಮೆಟ್ಟೂರು ಅಣೆಕಟ್ಟಿನಲ್ಲಿ ಶೇ.50ರಷ್ಟು ವಿಶ್ವಾಸಾರ್ಹತೆಯ ಆಧಾರದಲ್ಲಿ ಸುಮಾರು 8.60 ಟಿಎಂಸಿ ಅಡಿ ಹೆಚ್ಚುವರಿ ನೀರು ಲಭ್ಯವಾಗಲಿದೆ ಎಂದು ಅಂದಾಜಿಸಿದೆ. ಆದರೆ ಈ ಹೆಚ್ಚುವರಿ ನೀರಿನ ಲಭ್ಯತೆ, ಅದರ ಸ್ವರೂಪ ಮತ್ತು ಬಳಕೆಯ ಮೇಲಿನ ಹಕ್ಕುಗಳ ಬಗ್ಗೆ ಸ್ಪಷ್ಟವಾದ ಕಾನೂನುಬದ್ಧ ನಿರ್ಧಾರವಾಗದೆ ಯೋಜನೆಯನ್ನು ಮುಂದುವರಿಸುವುದು ಸರಿಯಲ್ಲ.
ನದಿ ಜೋಡಣೆಯ ಉದ್ದೇಶ ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವುದೇ ಆಗಿದ್ದರೂ, ಈಗಾಗಲೇ ನೀರಿನ ಹಂಚಿಕೆ ಸಂಬಂಧ ನಿರ್ಧರಿಸಲ್ಪಟ್ಟಿರುವ ರಾಜ್ಯಗಳ ಹಕ್ಕುಗಳನ್ನು ಕಡೆಗಣಿಸ ಲಾಗದು. ಕರ್ನಾಟಕವೂ ತನ್ನದೇ ಆದ ಕೃಷಿ, ಕುಡಿಯುವ ನೀರು ಮತ್ತು ಕೈಗಾರಿಕಾ ಅಗತ್ಯಗಳನ್ನು ಹೊಂದಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಅವಶ್ಯಕತೆ, ರೈತರ ಕೃಷಿ ಚಟುವಟಿಕೆಗಳು ಹಾಗೂ ಭವಿಷ್ಯದ ಜನಸಂಖ್ಯೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಇಂದು ಹೆಚ್ಚುವರಿ ಎಂದು ಪರಿಗಣಿಸುವ ನೀರು ನಾಳೆ ಕರ್ನಾಟಕದ ಪಾಲಿಗೆ ಅತ್ಯಗತ್ಯವಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನವೆಂಬರ್ 19ರಂದು ಸುಪ್ರೀಂ ಕೋರ್ಟ್‌ಗೆ ಹೊಸ ಮಧ್ಯಂತರ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ.
2025ರಲ್ಲಿಯೇ ತಮಿಳುನಾಡಿಗೆ ಕಾಮಗಾರಿ ನಿಲ್ಲಿಸುವಂತೆ ಪತ್ರ ಬರೆದಿದ್ದರೂ ಕೆಲಸ ಮುಂದು ವರಿದಿದೆ ಎಂಬುದು ಕರ್ನಾಟಕದ ಆತಂಕವನ್ನು ಮತ್ತಷ್ಟು ಗಂಭೀರ ಗೊಳಿಸಿದೆ. ನೀರಿನ ಮೂಲ ಮತ್ತು ಹಂಚಿಕೆಯ ಕುರಿತು ಸಮಗ್ರ ಸ್ಪಷ್ಟತೆ ಇಲ್ಲದೆ ಕಾಮಗಾರಿ ಮುಂದುವರಿಸುವುದು ಆತಂಕಕಾರಿ.