ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Summer Fashion Interview: ಸಮ್ಮರ್‌ ಕೂಲ್‌ ಔಟ್‌ಫಿಟ್ಸ್‌ನಲ್ಲಿ ನಟಿ ಜಯಶ್ರೀ ಆರಾಧ್ಯ ಸ್ಟೈಲಿಶ್‌ ಲುಕ್‌

Star Summer Fashion Interview: ಬೇಸಿಗೆಯ ಬಿಸಿಲಲ್ಲಿ ಕೂಲಾಗಿರುವ ಉಡುಗೆಗಳನ್ನು ಧರಿಸುವುದು ಮಾತ್ರವಲ್ಲ, ಕಂಫರ್ಟಬಲ್‌ ಲುಕ್‌ಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ನಟಿ ಹಾಗೂ ಉದ್ಯಮಿ ಜಯಶ್ರೀ ಆರಾಧ್ಯ ವಿಶ್ವವಾಣಿ ನ್ಯೂಸ್‌ನ ಸೆಲೆಬ್ರೆಟಿ ಸಮ್ಮರ್‌ ಫ್ಯಾಷನ್‌ನಲ್ಲಿ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್ಸ್‌ ತಿಳಿಸುವುದರೊಂದಿಗೆ ತಮ್ಮ ಫ್ಯಾನ್‌ ಫಾಲೋವರ್ಸ್‌ಗೂ ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

ಸಮ್ಮರ್‌ ಕೂಲ್‌ ಔಟ್‌ಫಿಟ್ಸ್‌ನಲ್ಲಿ ನಟಿ ಜಯಶ್ರೀ ಆರಾಧ್ಯ ಸ್ಟೈಲಿಶ್‌ ಲುಕ್‌

ಚಿತ್ರಗಳು: ಜಯಶ್ರೀ ಆರಾಧ್ಯ, ನಟಿ

Profile Siddalinga Swamy Mar 24, 2025 9:07 PM

ಸಂದರ್ಶನ: ಶೀಲಾ ಸಿ. ಶೆಟ್ಟಿ

ಕೂಲಾಗಿರುವ ಸಮ್ಮರ್‌ ಫ್ಯಾಷನ್‌ ನನ್ನದು ಎನ್ನುತ್ತಾರೆ ನಟಿ ಹಾಗೂ ಉದ್ಯಮಿ ಜಯಶ್ರೀ ಆರಾಧ್ಯ. ಅವರ ಪ್ರಕಾರ, ಪ್ರತಿ ಸೀಸನ್‌ ಕೂಡ ತನ್ನದೇ ಆದ ಚಾರ್ಮ್‌ ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು ಎನ್ನುತ್ತಾರೆ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಜಯಶ್ರೀ ಆರಾಧ್ಯ, ಈ ಹಿಂದೆ ಕಪಲ್‌ ರಿಯಾಲಿಟಿ ಶೋವೊಂದರಲ್ಲೂ ಕಾಣಿಸಿಕೊಂಡಿದ್ದರು. ಬ್ರೇಕಪ್‌ ನಂತರ, ಕುಗ್ಗದೇ ಮತ್ತೊಮ್ಮೆ ಆತ್ಮವಿಶ್ವಾಸದಿಂದ ಫಿನಿಕ್ಸ್‌ನಂತೆ ಪುಟಿದೆದ್ದು ನಿಂತಿದ್ದಾರೆ. ಇದೀಗ ಬ್ಯೂಟಿ ಲೋಕದಲ್ಲಿ ತಮ್ಮನ್ನು ಮತ್ತೊಮ್ಮೆ ಬ್ಯುಸಿಯಾಗಿಸಿಕೊಂಡಿದ್ದಾರೆ. ಈ ಮಧ್ಯೆ ವಿಶ್ವವಾಣಿ ನ್ಯೂಸ್‌ನ ಸೆಲೆಬ್ರೆಟಿ ಸಮ್ಮರ್‌ ಫ್ಯಾಷನ್‌ (Star Summer Fashion Interview) ಕಾಲಂಗಾಗಿ ಮಾತನಾಡಿದ ಅವರು, ತಮ್ಮ ಬೇಸಿಗೆ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ತಮ್ಮ ಫಾಲೋವರ್ಸ್‌ಗೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

1

ವಿಶ್ವವಾಣಿ ನ್ಯೂಸ್‌: ನಿಮ್ಮ ಸಮ್ಮರ್‌ ಫ್ಯಾಷನ್‌ ಬಗ್ಗೆ ಹೇಳಿ?

ಜಯಶ್ರೀ ಆರಾಧ್ಯ: ಬ್ರಿಥೆಬಲ್‌, ಲೈಟ್‌ವೈಟ್‌ ಫ್ಯಾಬ್ರಿಕ್‌ನವು ಅದರಲ್ಲೂ ಲೆನಿನ್‌, ಕಾಟನ್‌ ಹಾಗೂ ಲೂಸ್‌ ಫಿಟ್ಟಿಂಗ್‌ ಉಡುಪುಗಳನ್ನು ಧರಿಸುತ್ತೇನೆ. ಇನ್ನು, ಈ ಸೀಸನ್‌ನಲ್ಲಿ, ಅದರಲ್ಲೂ ಬಿಸಿಲಲ್ಲೂ ಆಕರ್ಷಕವಾಗಿ ಕಾಣಿಸುವಂತಹ ಲೈಟ್‌ ಕಲರ್‌ ಉಡುಗೆಗಳನ್ನು ಪ್ರಿಫರ್‌ ಮಾಡುತ್ತೇನೆ.

ವಿಶ್ವವಾಣಿ ನ್ಯೂಸ್‌: ನಿಮ್ಮ ಸಮ್ಮರ್‌ ಸ್ಟೈಲ್‌ ಮಂತ್ರ?

ಜಯಶ್ರೀ ಆರಾಧ್ಯ: ನನ್ನ ವಾರ್ಡ್ರೋಬ್‌ನಲ್ಲಿರುವ ಫ್ಯಾಷನ್‌ವೇರ್‌ಗಳೇ ನನ್ನ ಪ್ರತಿ ಸ್ಟೈಲ್‌ಸ್ಟೇಟ್‌ಮೆಂಟನ್ನು ತೋರ್ಪಡಿಸುತ್ತವೆ.

2

ವಿಶ್ವವಾಣಿ ನ್ಯೂಸ್‌: ಸಮ್ಮರ್‌ ಟ್ರಾವೆಲ್‌ ಮಾಡ್ತೀರಾ? ಮಾಡಿದಲ್ಲಿ, ಓದುಗರಿಗೆ ಟ್ರಾವೆಲ್‌ ಫ್ಯಾಷನ್‌ ಟಿಪ್ಸ್‌ ನೀಡಿ?

ಜಯಶ್ರೀ ಆರಾಧ್ಯ: ಹೌದು, ಇತ್ತೀಚೆಗೆ ನಾನು ಬಾಲಿಗೆ ಹೋಗಿದ್ದೆ. ಸಮ್ಮರ್‌ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿದ್ದೆ. ಇನ್ನು, ಈ ಸೀಸನ್‌ನಲ್ಲಿ ಟ್ರಾವೆಲ್‌ ಮಾಡುವವರು, ಫ್ಯಾಷನ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಆರೋಗ್ಯದ ಕಡೆಗೂ ಗಮನ ನೀಡಬೇಕು. ಆದಷ್ಟೂ ದಿನಕ್ಕೆ 8 ಗ್ಲಾಸ್‌ ನೀರು ಕುಡಿಯಬೇಕು. ಬಿಸಿಲಲ್ಲಿ ತಿರುಗಾಡುವುದಾದಲ್ಲಿ ಪ್ರತಿ 2 ಗಂಟೆಗೊಮ್ಮೆ ಎಸ್‌ಪಿಎಫ್‌30 ಸನ್‌ಸ್ಕ್ರೀನ್‌ ಅಪ್ಲೈ ಮಾಡಬೇಕು. ಆದಷ್ಟೂ ಲೈಟ್‌ವೈಟ್‌ ಮೇಕಪ್‌ ಮಾಡಬೇಕು. ಭಾರವಿಲ್ಲದ ಡ್ರೆಸ್‌ ಧರಿಸಬೇಕು. ಪ್ರಯಾಣದಿಂದ ಮರಳಿದ ನಂತರ ಮುಖದ ಮೇಲಿನ ಟ್ಯಾನ್‌ ಹಾಗೂ ಡೆಡ್‌ಸ್ಕೀನ್‌ ತೆಗೆಯುವ ಬ್ಯೂಟಿ ಟ್ರೀಟ್‌ಮೆಂಟ್‌ಗಳನ್ನು ಪಡೆಯಬೇಕು.

3

ವಿಶ್ವವಾಣಿ ನ್ಯೂಸ್‌: ನೀವು ಪಾಲಿಸುವ ಸಮ್ಮರ್‌ ಬ್ಯೂಟಿ ಟಿಪ್ಸ್‌?

ಜಯಶ್ರೀ ಆರಾಧ್ಯ: ಹೈಡ್ರಾಫೇಶಿಯಲ್‌ ಈ ಸೀಸನ್‌ಗೆ ಬೆಸ್ಟ್‌! ಇನ್ನು, ದಿನಕ್ಕೆ 3-4 ಬಾರಿ ಮುಖಕ್ಕೆ ನೀರನ್ನು ಹಾಕುತ್ತಿರುತ್ತೇನೆ. ಇದು ತ್ವಚೆಯನ್ನು ಕೂಲಾಗಿರಿಸುವುದರೊಂದಿಗೆ ಕ್ಲೀನಾಗಿರಿಸುತ್ತದೆ. ಇನ್ನು ಸನ್‌ಸ್ಕ್ರೀನ್‌ ಹಚ್ಚದೇ ನಾನು ಹೊರ ಹೋಗುವುದೇ ಇಲ್ಲ!

ವಿಶ್ವವಾಣಿ ನ್ಯೂಸ್‌: ನಿಮ್ಮ ಫಾಲೋವರ್ಸ್‌ಗೆ ನೀವು ನೀಡುವ ಟಿಪ್ಸ್‌

ಜಯಶ್ರೀ ಆರಾಧ್ಯ: ಕಂಫರ್ಟಬಲ್‌ ಕಾಟನ್‌ ಡ್ರೆಸ್‌ ಧರಿಸಿ. ಉಸಿರುಗಟ್ಟಿಸುವ ಫ್ಯಾಷನ್‌ವೇರ್ಸ್‌ ಬೇಡ. ಡಿಹೈಡ್ರಷನ್‌ನಿಂದ ಬಚಾವಾಗಲು ಆರೋಗ್ಯಕರ ತಂಪು ಪಾನೀಯಗಳನ್ನು ಸೇವಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Fashion: ಬೇಸಿಗೆಯ ಬಿಂದಾಸ್‌ ಲುಕ್‌ಗೆ ಮರಳಿ ಬಂತು ಸ್ಟ್ರಾಪ್‌ ಡ್ರೆಸ್‌