ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Statement Skirt Fashion: ಹುಡುಗಿಯರನ್ನು ಸವಾರಿ ಮಾಡುತ್ತಿದೆ ವೈವಿಧ್ಯಮಯ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್

ಊಹೆಗೂ ಸಿಗದ ವಿನ್ಯಾಸವನ್ನೊಳಗೊಂಡ ಬಗೆಬಗೆಯ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್‌, ಈ ಜನರೇಷನ್‌ನ ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನ ಲುಕ್‌ನಲ್ಲಿ ಎಂಟ್ರಿ ನೀಡಿರುವ ಈ ಸ್ಕರ್ಟ್ಸ್‌ ಈ ಸೀಸನ್‌ನ ಲಿಸ್ಟ್‌ಗೆ ಸೇರಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್‌ ಹೇಗೆ? ಇಲ್ಲಿದೆ ವಿವರ.‌

ಹುಡುಗಿಯರನ್ನು ಸವಾರಿ ಮಾಡುತ್ತಿರುವ ವೈವಿಧ್ಯಮಯ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್

ಚಿತ್ರಕೃಪೆ: ಪಿಕ್ಸೆಲ್‌

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಂದಕ್ಕಿಂತ ಒಂದು ಭಿನ್ನ! ಚಿತ್ರ -ವಿಚಿತ್ರ ಕಟ್ಸ್‌ ಹೊಂದಿದ, ವ್ರಾಪ್‌ ಮಾಡುವಂತಿರುವ, ಮಿಡಿಯಂತೆ ಕಾಣಿಸುವ, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌, ಮಿಡಲ್‌, ಸೈಡ್‌ ಝಿಪ್‌, ಪಾಪ್‌ ಅಪ್‌ ಆರ್ಟ್‌ ಚಿತ್ತಾರದ, ಬ್ಯಾಲೆರಿನಾ ಶೈಲಿಯ, ಫ್ರಿಂಝ್‌ ಲುಕ್‌ ಹೊಂದಿರುವ ನಾನಾ ಶೈಲಿಯ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್‌ (Statement Skirt Fashion)‌ ಈ ಸೀಸನ್‌ನಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿವೆ. ಡಿಫರೆಂಟ್‌ ವಿನ್ಯಾಸವನ್ನೊಳಗೊಂಡ ಸ್ಕರ್ಟ್ಸ್, ಇಂದಿನ ಸ್ಟೇಟ್‌ಮೆಂಟ್‌ ಸ್ಕರ್ಟ್ಸ್ ಲಿಸ್ಟ್‌ನಲ್ಲಿ ಟಾಪ್‌ ಸ್ಥಾನ ಪಡೆದಿವೆ. ಒಂದಕ್ಕಿಂತ ಮತ್ತೊಂದು ಇಮ್ಯಾಜಿನ್‌ಗೂ ಸಿಗದ ರೀತಿಯಲ್ಲಿ ವಿನ್ಯಾಸಗೊಂಡಿವೆ. ಡಿಸೈನರ್‌ಗಳ ಕೈಗಳಲ್ಲಿ, ನಾನಾ ಶೈಲಿಯಲ್ಲಿ ರೂಪುಗೊಂಡ ಈ ಸ್ಕರ್ಟ್ಸ್ ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಹಾಗಾಗಿ ಈ ಸೀಸನ್‌ನಲ್ಲಿ ಸಿಂಪಲ್‌ ಸ್ಕರ್ಟ್ಸ್‌ಗೆ ಬೇಡಿಕೆಯಿಲ್ಲ ಹಾಗೂ ಆದ್ಯತೆಯೂ ಇಲ್ಲದಂತಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಶಿ.

7

ಬಬ್ಲಿ ಹುಡುಗಿಯರ ಸ್ಕರ್ಟ್ಸ್ ಫ್ಯಾಷನ್‌

ಅತಿ ಹೆಚ್ಚು ಸ್ಕರ್ಟ್ಸ್ ಧರಿಸುವುದು ಬಬ್ಲಿ ಹುಡುಗಿಯರು ಹಾಗೂ ಟೀನೇಜ್‌ ಹುಡುಗಿಯರು. ಸ್ಕರ್ಟ್ಸ್ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇಷ್ಟವಾದರೂ ಧರಿಸಲು ಬರುವುದಿಲ್ಲ. ಇದು ಫ್ಯಾಷನಿಸ್ಟಾಗಳು ಹೇಳುವ ಪಕ್ಕಾ ಮಾತು. ಅವರು ಹೇಳುವಂತೆ, ಸದಾ ಆ್ಯಕ್ಟಿವ್‌ ಆಗಿರುವ ಹುಡುಗಿಯರು ಹಾಗೂ ಬಬ್ಲಿ ನೇಚರ್‌ ಹೊಂದಿರುವ ಹುಡುಗಿಯರು ಇವನ್ನು ಹೆಚ್ಚಾಗಿ ಧರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಡ್ರೆಸ್‌ಗಳನ್ನು ಎಕ್ಸ್‌ಪೇರಿಮೆಂಟ್‌ ಮಾಡುವ ಹುಡುಗಿಯರು ಪ್ರಯೋಗಿಸುತ್ತಾರೆ.

8

ಡಿಫರೆಂಟ್‌ ವೈವಿಧ್ಯಮಯ ಸ್ಟೇಟ್‌ಮೆಂಟ್ಸ್‌

ಪ್ಲೀಟ್ಸ್‌ ಮೇಲೆ ಪ್ಲೀಟ್ಸ್‌, ಫರ್‌ನಿಂದ ಸುತ್ತುವರಿದ ರಫೆಲ್ಸ್‌ ವಿನ್ಯಾಸ, ಫಂಕಿ ವಿನ್ಯಾಸ, ಪಾಪ್‌ ಆರ್ಟ್‌, ಕ್ವಿರ್ಕಿ ಡಿಸೈನ್ಸ್‌, ಮೈಕ್ರೊ ನೆಟ್ಟೆಡ್‌, ಶೀರ್‌, ವ್ರಾಪ್‌ ಮಾಡಿದಂತಿರುವ ಮಿನಿ ಸ್ಕರ್ಟ್ಸ್ ಹೀಗೆ ಲೆಕ್ಕವಿಲ್ಲದಷ್ಟು ಡಿಸೈನ್‌ ಸ್ಟೇಟ್‌ಮೆಂಟ್‌ ಈ ಬಗೆಯ ಸ್ಕರ್ಟ್ಸ್‌ನಲ್ಲಿ ಕಾಣಬಹುದು ಎನ್ನುತ್ತಾರೆ ಮಾಡೆಲ್‌ ರೀನಾ. ಅವರು ಹೇಳುವಂತೆ, ಇಂದಿನ ಜನರೇಷನ್‌ನ ಹುಡುಗಿಯರಿಗೆ ಇವು ಹೆಚ್ಚು ಪ್ರಿಯವಾಗಿವೆ. ಎಲ್ಲರ ನಡುವೆ ಹೈಲೈಟ್‌ ಆಗಲು ಬಯಸುವ ಹಾಗೂ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಇಷ್ಟಪಡುವಂತವರಿಗೆ ಇವು ಹೇಳಿ ಮಾಡಿಸಿದಂತಿರುತ್ತವೆ ಎನ್ನುತ್ತಾರೆ.

9

ಟೀನೇಜ್‌ ಹುಡುಗಿಯರ ಫೆವರೇಟ್‌

ಕಾಲೇಜು ಹುಡುಗಿಯರಿಗೆ ಹಾಗೂ ಟೀನೇಜ್‌ ಹುಡುಗಿಯರು ಹೆಚ್ಚು ಧರಿಸಲು ಇಷ್ಟಪಡುವ ಈ ಸ್ಕರ್ಟ್ಸ್ ಹೆಚ್ಚು ಉದ್ದವಾಗಿರುವುದಿಲ್ಲ. ಮಂಡಿಯ ತನಕ ಇರುವಂತೇ ಹೆಚ್ಚು ಚಾಲ್ತಿಯಲ್ಲಿರುತ್ತವೆ. ನೋಡಲು ಡಿಸೈನ್‌ ಇದ್ದರೂ ಎಲ್ಲವೂ ಸಿಂಪಲ್ಲಾಗಿ ಲೈಟ್‌ವೇಟ್‌ನದ್ದಾಗಿರುತ್ತವೆ.

ಟ್ರೆಂಡ್‌ ಸೆಟ್ಟರ್ಸ್‌ ಲವ್‌

ಸ್ಟೇಟ್‌ಮೆಂಟ್‌ ಸ್ಕರ್ಟ್ಸ್ ಆದಷ್ಟೂ ಟ್ರೆಂಡ್‌ ಸೆಟ್ಟರ್‌ ಫ್ಯಾಷನ್‌ ಪ್ರಿಯರ ವಾರ್ಡ್‌ರೋಬ್‌ನಲ್ಲಿ ಇವು ಹೆಚ್ಚಾಗಿರುತ್ತವೆ ಎನ್ನುತ್ತದೆ ಸಮೀಕ್ಷೆಯೊಂದು. 100 ಪರ್ಸೆಂಟ್‌ ಇದು ಸತ್ಯ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಈ ಸುದ್ದಿಯನ್ನೂ ಓದಿ | Tatto Awareness: ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸುವವರೇ ಎಚ್ಚರ

ಸ್ಟೇಟ್‌ಮೆಂಟ್‌ ಸ್ಕರ್ಟ್ಸ್‌ ಪ್ರಿಯರಿಗಾಗಿ ಟಿಪ್ಸ್‌

* ಸೂಟ್‌ ಆಗುವಂತಹ ಮ್ಯಾಚಿಂಗ್‌ ಆಕ್ಸೆಸರೀಸ್‌ ಧರಿಸಿ.

* ಫ್ಲಿಪ್‌ ಫ್ಲಾಪ್‌ ಹಾಗೂ ಫ್ಲಾಟ್‌ ಸ್ಯಾಂಡಲ್ಸ್‌ ಹೊಂದದು.

* ಆದಷ್ಟೂ ಹೈ ಹೀಲ್ಸ್‌ ಮಾತ್ರ ಆಕರ್ಷಕವಾಗಿ ಕಾಣಬಹುದು.

* ಕಿವಿಗೆ ಹ್ಯಾಂಗಿಂಗ್ಸ್‌ ಸೂಪರ್ಬ್‌ ಆಗಿ ಕಾಣುವುದು.

* ಹೇರ್‌ಸ್ಟೈಲ್‌ ಸ್ಕರ್ಟ್ಸ್ ಡಿಸೈನ್‌ಗೆ ತಕ್ಕಂತಿರಲಿ

* ಆದಷ್ಟೂ ಟ್ರೆಡಿಷನಲ್‌ ಲುಕ್‌ ಮಿಕ್ಸ್‌ ಮಾಡದಿರಿ.

* ವೈಡ್‌ ನೆಕ್‌ಲೈನ್‌ ಇದ್ದಾಗ ಮಾತ್ರ ನೆಕ್‌ಪೀಸ್‌ ಬಳಸಿ.

* ಕೆಲವು ಸ್ಕರ್ಟ್ಸ್ಗೆ ಬೆಲ್ಟ್‌ ಹಾಕಿದರೇ ಚೆನ್ನಾಗಿ ಕಾಣುತ್ತದೆ.

* ವೆಸ್ಟರ್ನ್‌ ಕಾನ್ಸೆಪ್ಟ್‌ನವು ಮಾತ್ರ ಸ್ಟೇಟ್‌ಮೆಂಟ್‌ ಲಿಸ್ಟ್‌ಗೆ ಸೇರುತ್ತವೆ.

* ಟಾಪ್‌ಗಳು ಇವಕ್ಕೆ ಪರ್ಫೆಕ್ಟ್ ಹೊಂದುವಂತಿರಬೇಕು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)