ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Fashion: ಬೀಚ್‌ಸೈಡ್‌ನಲ್ಲಿ ಫ್ಲೋರಲ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ

Summer Fashion: ನಟಿ ಭೂಮಿಕಾ, ಬೀಚ್‌ ಸೈಡ್‌ನಲ್ಲಿ ಫ್ಲೋರಲ್‌ ಕಟೌಟ್‌ ಮ್ಯಾಕ್ಸಿಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ನಯಾ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೋಡುಗರ ಮನ ಸೆಳೆದಿದೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ಫಾಲೋವರ್ಸ್‌ಗೆ ಒಂದಿಷ್ಟು ಸಮ್ಮರ್‌ ಟಿಪ್ಸ್‌ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

ಫ್ಲೋರಲ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ

ಚಿತ್ರಗಳು: ಭೂಮಿಕಾ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಭೂಮಿಕಾ ಬೀಚ್‌ ಸೈಡ್‌ನಲ್ಲಿ ಫ್ಲೋರಲ್‌ ಕಟೌಟ್‌ ಮ್ಯಾಕ್ಸಿಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಚೆಲುವೆಯಾದ ಅವರಿಗೆ ಬೀಚ್‌ ಎಂದರೇ ಮೊದಲಿನಿಂದಲೂ ಇಷ್ಟವಂತೆ! ಆಗಾಗ್ಗೆ ಬೀಚ್‌ಗೆ ಭೇಟಿ ನೀಡುವ ಅವರು ಈ ಬಾರಿ ಬೀಚ್‌ಸೈಡ್‌ನಲ್ಲಿ ಹೂಗಳ ಚಿತ್ತಾರವಿರುವ ಮ್ಯಾಕ್ಸಿಯಲ್ಲಿ ಫೋಟೋಶೂಟ್‌ ಮಾಡಿಸಿ ಖುಷಿಪಟ್ಟಿದ್ದಾರೆ. ಸಮ್ಮರ್‌ ಫ್ಯಾಷನ್‌ (Summer Fashion) ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ಭೂಮಿಕಾ, ತಮ್ಮ ಫಾಲೋವರ್ಸ್‌ಗೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

Summer Fashion 1

ವಿಶ್ವವಾಣಿ ನ್ಯೂಸ್‌: ನಿಮ್ಮ ಸಮ್ಮರ್‌ ಫ್ಯಾಷನ್‌ನಲ್ಲಿ ಏನಿದೆ?

ಭೂಮಿಕಾ: ಇತ್ತೀಚಿನ ಟ್ರೆಂಡ್‌ನಲ್ಲಿರುವಂತಹ ಇಂಡೋ-ವೆಸ್ಟರ್ನ್‌ ಕಾಟನ್‌ವೇರ್ಸ್‌ ಹಾಗೂ ಟ್ರೆಂಡಿ ಡಿಸೈನರ್‌ವೇರ್ಸ್‌ಗಳಿವೆ.

ವಿಶ್ವವಾಣಿ ನ್ಯೂಸ್‌: ಬೀಚ್‌ ಸೈಡ್‌ ಧರಿಸಿರುವ ನಿಮ್ಮ ಔಟ್‌ಫಿಟ್‌ ವಿಶೇಷತೆ ಏನು?

ಭೂಮಿಕಾ: ಬೀಚ್‌ ಸೈಡ್‌ನಲ್ಲಿ ಧರಿಸಿರುವ ಫ್ಲೋರಲ್‌ ಪ್ರಿಂಟ್ಸ್‌ನ ಈ ಕಟೌಟ್‌ ಮ್ಯಾಕ್ಸಿ ಡ್ರೆಸ್‌, ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸಿತ್ತು. ಅಲ್ಲದೇ, ಈ ಸೀಸನ್‌ ಟ್ರೆಂಡ್‌ನಲ್ಲಿರುವ ಉಡುಪಿದು. ಖುಷಿ ಕೊಡುವಂತಹ ಡಿಸೈನ್‌ವರ್‌ವೇರ್‌ ಎನ್ನಬಹುದು.

ವಿಶ್ವವಾಣಿ ನ್ಯೂಸ್‌: ಬೀಚ್‌ ಸೈಡ್‌ ಎಂಜಾಯ್‌ ಮಾಡಬಯಸುವ ಹುಡುಗಿಯರಿಗೆ ನೀವು ನೀಡುವ ಟಿಪ್ಸ್‌ ಏನು?

ಭೂಮಿಕಾ: ಬೀಚ್‌ಗೆ ಹೋಗುವಾಗ ಆದಷ್ಟೂ ಸನ್‌ಸ್ಕ್ರೀನ್‌ ಹಚ್ಚಿಕೊಂಡು ಹೋಗಿ. ಇಲ್ಲವಾದಲ್ಲಿ ಸ್ಕಿನ್‌ ಟ್ಯಾನ್‌ ಆಗಬಹುದು. ಉದ್ದುದ್ದದ ಗೌನ್‌ಗಳನ್ನು ಧರಿಸಬೇಡಿ. ತಲೆ ಮೇಲೆ ಹ್ಯಾಟ್‌ ಇರಲಿ. ಇನ್ನು, ಬೀಚ್‌ನಲ್ಲಿ ಆಟವಾಡಿದ ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ.

Summer Fashion 2

ವಿಶ್ವವಾಣಿ ನ್ಯೂಸ್‌: ನಿಮ್ಮ ಸಮ್ಮರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಏನಿದೆ?

ಭೂಮಿಕಾ: ಸನ್‌ಗ್ಲಾಸ್‌

ವಿಶ್ವವಾಣಿ ನ್ಯೂಸ್‌: ಫಾಲೋವರ್ಸ್‌ಗೆ ನೀವು ನೀಡುವ ಸಮ್ಮರ್‌ ಫ್ಯಾಷನ್‌ ಟಿಪ್ಸ್‌?

ಭೂಮಿಕಾ: ಆದಷ್ಟೂ ನೀರನ್ನು ಹೆಚ್ಚೆಚ್ಚು ಕುಡಿಯಿರಿ.

ಬೇಸಿಗೆಯಲ್ಲಿ ಶಾರ್ಟ್‌ ಡ್ರೆಸ್‌ ಪ್ರಿಫರ್‌ ಮಾಡಿ.

ಸದಾ ಬಿಸಿಲಿನಿಂದ ಕಾಪಾಡುವ ಅಂಬ್ರೆಲ್ಲಾ ಜತೆಯಲ್ಲಿರಲಿ.

ಬಿಸಿಲಿಗೆ ಮುಖವನ್ನು ಒಡ್ಡಬೇಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌