ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Hairstyle 2025: ಬೇಸಿಗೆ ಕಾಲಕ್ಕೆ ಟ್ರೆಂಡಿಯಾದ 7 ಶೈಲಿಯ ಸಮ್ಮರ್ ಹೇರ್ ಸ್ಟೈಲ್ಸ್

Summer Hairstyle 2025: ಬೇಸಿಗೆಯಲ್ಲಿ ಕಂಫರ್ಟಬಲ್ ಹಾಗೂ ಫ್ಯಾಷೆನಬಲ್ ಎಂದೆನಿಸುವ ಟ್ರೆಂಡಿ ಹೇರ್‌ಸ್ಟೈಲ್‌ಗಳು ಬಿಡುಗಡೆಗೊಂಡಿವೆ. ಈ ಸಮ್ಮರ್ ಹೇರ್‌ಸ್ಟೈಲ್ಸ್ ಹಾಗೂ ಅವುಗಳ ಸ್ಟೈಲಿಂಗ್ ಬಗ್ಗೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

ಬೇಸಿಗೆ ಕಾಲಕ್ಕೆ ಟ್ರೆಂಡಿಯಾದ 7 ಶೈಲಿಯ ಸಮ್ಮರ್ ಹೇರ್ ಸ್ಟೈಲ್ಸ್

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೇಸಿಗೆ ಕಾಲಕ್ಕೆ ನಾನಾ ಬಗೆಯ ಮಾನಿನಿಯರ ಕೇಶವಿನ್ಯಾಸಗಳು (Summer Hairstyle 2025) ಬ್ಯೂಟಿ ಲೋಕದಲ್ಲಿ ಅನಾವರಣಗೊಂಡಿದ್ದು, ಅವುಗಳಲ್ಲಿ 7 ಬಗೆಯವು ಸದ್ಯ ಚಾಲ್ತಿಯಲ್ಲಿವೆ. ಅವು ಯಾವುವು? ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್ ಜೆನ್ ವಿವರಿಸಿದ್ದಾರೆ. ನೋಡಲು ಒಂದರ ಹಿಂದೊಂದರಂತೆ ಹೆಣೆದ ಜಡೆಯಂತೆ ಕಾಣುವ ಬೊಹೈಮನ್ ಸೈಡ್ ಬ್ರೈಡ್ ವಿನ್ಯಾಸ ಇದೀಗ ಕಾರ್ಪೋರೇಟ್ ಹುಡುಗಿಯರ ಡೈಲಿ ಹೇರ್‌ಸ್ಟೈಲ್‌ ಲಿಸ್ಟ್‌ನಲ್ಲಿ ಸೇರಿದೆ. ಒಂದೇ ಭಾಗಕ್ಕೆ ಬರುವಂತೆ ಹೆಣೆಯಲಾಗುವ ಈ 8 ಪದರದ ಜಡೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

ಇನ್ನು ಬೀಚ್ ವೇವ್ಸ್, ಹಾಲಿಡೇ ಹಾಗೂ ಔಟಿಂಗ್ ಕೆಟಗರಿಯಲ್ಲಿ ಬೀಚ್ ವೇವ್ಸ್ ಹೇರ್‌ಸ್ಟೈಲ್‌ ಪಾಪ್ಯುಲರ್ ಆಗಿದೆ. ಸ್ಪ್ರೇಟ್ ಕೂದಲನ್ನು ಬಿಗ್ ರಿಂಗ್ಲೇಟ್ಸ್ ಮೂಲಕ ವೆವ್ವಿ ಲುಕ್ ನೀಡುವುದು ಈ ಹೇರ್‌ಸ್ಟೈಲ್‌ನ ಹೈಲೈಟ್. ಜತೆಗೆ ರಫ್ ಲುಕ್ ಕೂಡ ಮ್ಯಾಚ್ ಆಗುತ್ತದೆ. ಫಂಕಿ ಹೇರ್‌ಸ್ಟೈಲ್‌ಗೆ ಇದು ಸಾಥ್ ನೀಡುತ್ತದೆ.

1

ಮೆಸ್ಸಿ ಬನ್ ಲುಕ್

ಸೀದಾ ಸಾದಾ ತುರುಬಿನ ಕಾಲ ಇದಲ್ಲ! ಎತ್ತಿ ಕಟ್ಟಿದಾಕ್ಷಣಾ ತುರುಬು ಅಂದರೆ ಬನ್ ವಿನ್ಯಾಸ ಆಗುವುದಿಲ್ಲ. ನೋಡಲು ಒಂದು ವೆವ್ವಿಯ ಲುಕ್ ಇಲ್ಲದಿದ್ದರೆ ಅದು ಮೆಸ್ಸಿ ಬನ್‌ ಹೇರ್‌ಸ್ಟೈಲ್‌ ಆಗುವುದಿಲ್ಲ. ಮುಂಭಾಗದಲ್ಲಿ ಕೊಂಚ ಬ್ರೈಡ್‌ನಂತೆ ಕಾಣುವ ಮೆಸ್ಸಿ ಬನ್ ಹೇರ್‌ಸ್ಟೈಲ್‌ ಕಂಫರ್ಟಬಲ್ ಎಂದೆನಿಸುತ್ತದೆ.

ಪರ್ಫೆಕ್ಟ್ ಅಲ್ಲದ ಹನ್ ಹೇರ್ ಸ್ಟೈಲ್

ಅರ್ಧಂಬರ್ಧ ಫ್ರೀ ಹೇರ್ ನೆತ್ತಿ ಮೇಲೆ ಅರ್ಧಕ್ಕೂ ಹೆಚ್ಚು ಎತ್ತಿ ಕಟ್ಟಿದ ಚಿಕ್ಕ ಬನ್ ವಿನ್ಯಾಸ ಇದು ಹನ್ ಹೇರ್‌ಸ್ಟೈಲ್‌. ಸೊಟ್ಟವಾಗಿದ್ದರೂ ಈ ಸ್ಟೈಲ್ ಚೆನ್ನಾಗಿ ಕಾಣಿಸುತ್ತದೆ.

2

ಟಾಪ್ಸಿ ಪೋನಿಟೇಲ್

ಒಂದಕ್ಕೊಂದು ಲಿಂಕ್ ಆಗಿರುವಂತಹ ಸರಪಳಿಯಂತೆ ಕಾಣುವ ಪೋನಿಟೇಲ್ ಇದು. ಮೇಲೊಂದು ಕೆಳಗೊಂದು ಇಲ್ಯೂಷನ್ ನೀಡುತ್ತದೆ. ಇದನ್ನೇ ನಾನಾ ಬಗೆಯಲ್ಲಿ ಹಾಕಬಹುದು.

3

ಫಿಶ್‌ಟೇಲ್ ಬ್ರೈಡ್

ಫ್ರೆಂಚ್ ಫ್ಲಾಟ್‌ನ ನಾನಾ ರೂಪವಿದು. ಹಣೆಯ ಮೇಲ್ಭಾಗದಿಂದಲೇ ಜಡೆ ಹೆಣೆದು ಜಡೆಯ ತುದಿಯ ತನಕ ಹಾಕಬೇಕು. ನೋಡಲು ಫಿಶ್‌ಟೇಲ್‌ನಂತೆ ಕಾಣಿಸುತ್ತದೆ. ಚೂಪಾದ ತುದಿಯು ಬಾಲದಂತಿರುತ್ತದೆ.

ಬ್ರೈಡ್ ಹಾಕ್ ಹೇರ್‌ಸ್ಟೈಲ್‌

ಫ್ರೆಂಚ್ ಫ್ಲಾಟ್ ಜಡೆಯನ್ನು ಉಲ್ಟಾ ಹಾಕಿದಾಗ ಕಾಣುವ ಜಡೆಯೇ ಬ್ರೈಡ್ ಹಾಕ್. ಇದು ಹಳೆಯ ವಿನ್ಯಾಸವೇ ಆದರೂ ಹೊಸ ರೂಪದಲ್ಲಿ ಮರಳಿದೆ. ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

ಈ ಸುದ್ದಿಯನ್ನೂ ಓದಿ | Summer Fashion 2025: ಸೀಸನ್‌ಗೆ ಲಗ್ಗೆ ಇಟ್ಟ ಸಮ್ಮರ್ ಫ್ಯಾಷನ್!

ಸಮ್ಮರ್ ಹೇರ್‌ಸ್ಟೈಲ್‌ ಪ್ರಿಯರಿಗೆ ಟಿಪ್ಸ್

  • ನೋಡಲು ಸಿಂಪಲ್ ಆಗಿ ಸ್ಟೈಲಿಶ್ ಆಗಿರಬೇಕು.
  • ಕತ್ತಿನಿಂದ ಮೇಲಕ್ಕೆ ಇರುವಂತಿರುವ ಹೇರ್‌ಸ್ಟೈಲ್‌ ಬೆಸ್ಟ್.
  • ಆದಷ್ಟೂ ತುರುಬಿನ ಹೇರ್‌ಸ್ಟೈಲ್‌ಗೆ ಪ್ರಾಮುಖ್ಯ ನೀಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)