Valentines Week Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ರೋಸ್ ಪ್ರಿಂಟೆಡ್ ಔಟ್‌ಫಿಟ್ಸ್
Valentines Week Fashion 2025: ವಿಂಟರ್ ಎಂಡ್ ಸೀಸನ್‌ನಲ್ಲಿ ಬರುವ ವ್ಯಾಲೆಂಟೈನ್ಸ್ ವೀಕ್ ಫ್ಯಾಷನ್‌ನಲ್ಲಿ ಇದೀಗ ನಾನಾ ಬಗೆಯ ರೋಸ್ ಪ್ರಿಂಟ್ಸ್ ಇರುವಂತಹ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ ಹಾಗೂ ಟ್ರೆಂಡಿಯಾಗಿವೆ. ರೆಡ್, ಯೆಲ್ಲೊ, ಪಿಂಕ್ ಹೀಗೆ ನಾನಾ ಗುಲಾಬಿ ಹೂವುಗಳ ಚಿಕ್ಕ-ದೊಡ್ಡ ಪ್ರಿಂಟ್ಸ್ ಇರುವಂತಹ ನಾನಾ ವಿನ್ಯಾಸದ ಫ್ರಾಕ್‌ಗಳು, ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
![Valentines Week Fashion 2025](https://cdn-vishwavani-prod.hindverse.com/media/images/Valentines_Week_Fashion_2025_GhszLpz.max-1280x720.jpg)
![ಶೀಲಾ ಸಿ ಶೆಟ್ಟಿ](https://cdn-vishwavani-prod.hindverse.com/media/images/1233333.2e16d0ba.fill-100x100.jpg)
- ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್ ಎಂಡ್‌ನಲ್ಲಿ ಅದರಲ್ಲೂ ವ್ಯಾಲೆಂಟೈನ್ಸ್ ವೀಕ್ ಫ್ಯಾಷನ್‌ನಲ್ಲಿ (Valentines Week Fashion 2025) ಇದೀಗ ನಾನಾ ಬಗೆಯ ರೋಸ್ ಪ್ರಿಂಟೆಡ್ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿದ್ದು, ಟ್ರೆಂಡಿಯಾಗಿವೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಆಗಮಿಸುವ ಮೊದಲನೇ ದಿನದ ರೋಸ್ ಡೇ ಹಿನ್ನೆಲೆಯಲ್ಲಿ ಇವು ಮೊದಲಿಗಿಂತ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಕಲರ್‌ಫುಲ್ ಆಗಿ ಕಾಣಿಸುವ ಗುಲಾಬಿ ಹೂವುಗಳಿರುವ ಪ್ರಿಂಟ್ಸ್‌ನ ಔಟ್‌ಫಿಟ್‌ಗಳು ಈ ಸೀಸನ್‌ನಲ್ಲಿ ಎಲ್ಲಾ ವರ್ಗದ ಯುವತಿಯರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ.
![1](https://cdn-vishwavani-prod.hindverse.com/media/images/1_GpZ1bk4.max-1200x800.jpg)
ಹುಡುಗಿಯರ ಮೆಚ್ಚಿನ ರೋಸ್ ಪ್ರಿಂಟ್ಸ್ ಫ್ರಾಕ್
ರೆಡ್, ಯೆಲ್ಲೊ, ಪಿಂಕ್ ಹೀಗೆ ನಾನಾ ಗುಲಾಬಿ ಹೂವುಗಳ ಚಿಕ್ಕ-ದೊಡ್ಡ ಪ್ರಿಂಟ್ಸ್ ಇರುವಂತಹ ನಾನಾ ವಿನ್ಯಾಸದ ಫ್ರಾಕ್‌ಗಳು, ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ನೀ ಲೆಂತ್ ಫ್ರಾಕ್, ಲಾಂಗ್ ಲೆಂಥ್, ಮಿಡಿ ಸ್ಟೈಲ್, ಮಿನಿ ಸ್ಟೈಲ್ ಹೀಗೆ ನಾನಾ ಬಗೆಯ ಬಾಡಿಕಾನ್, ಅಂಬ್ರೆಲ್ಲಾ, ಶಿಫ್ಟ್ ಮತ್ತು ಕಾಕ್ಟೇಲ್ ಫ್ರಾಕ್‌ಗಳು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಡಿಸೈನರ್ ರಾಶಿ.
![2](https://cdn-vishwavani-prod.hindverse.com/media/images/2_vnVZ33a.max-1200x800.jpg)
ಗುಲಾಬಿ ಪ್ರಿಂಟೆಡ್ ಮ್ಯಾಕ್ಸಿ ಜಾದೂ
ನಾನಾ ವೆರೈಟಿ ಡಿಸೈನ್‌ನಲ್ಲಿ ದೊರಕುತ್ತಿರುವ ರೋಸ್ ಪ್ರಿಂಟ್ಸ್ ಇರುವಂತಹ ಮ್ಯಾಕ್ಸಿ ಡ್ರೆಸ್‌ಗಳು, ಎಲ್ಲಾ ವಯಸ್ಸಿನ ಮಹಿಳೆಯರಿಗೂ ಆಕರ್ಷಕವಾಗಿ ಕಾಣಿಸುತ್ತವೆ. ಇನ್ನು, ಲಾಂಗ್ ಮ್ಯಾಕ್ಸಿಯಲ್ಲಿ ಗೌನ್ ಶೈಲಿಯವು ಲಂಚ್-ಬ್ರಂಚ್ ಪಾರ್ಟಿಗೆ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ಬಂದಿವೆ. ಹಾಲ್ಟರ್ ನೆಕ್ ಹಾಗೂ ಕೋಲ್ಡ್ ಶೋಲ್ಡರ್, ಫ್ರಿಲ್ ನೆಕ್‌ಲೈನ್‌ನ ರೋಸ್ ಪ್ರಿಂಟೆಡ್ ರೆಟ್ರೊ ಮ್ಯಾಕ್ಸಿ ಡ್ರೆಸ್‌ಗಳು ಎಂತಹವರನ್ನು ಮನಮೋಹಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.
![3](https://cdn-vishwavani-prod.hindverse.com/media/images/3_NiK0iQR.max-1200x800.jpg)
ಗುಲಾಬಿ ಟಾಪ್ ಹಂಗಾಮ
ಇನ್ನು, ಕ್ಯಾನ್ವಾಸ್ ಚಿತ್ರದಂತೆ ಮೂಡಿರುವ ರೋಸ್ ಪ್ರಿಂಟೆಡ್ ಡಿಸೈನ್‌ನ ಜೀನ್ಸ್ ಟಾಪ್ಗಳು, ಕ್ರಾಪ್ ಟಾಪ್‌ಗಳು ಮತ್ತು ಪೆಪ್ಲಮ್ ಟಾಪ್‌ಗಳು ಈ ಸೀಸನ್‌ನಲ್ಲಿ ಟೀನೇಜ್ ಹುಡುಗಿಯರನ್ನು ಸೆಳೆದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಈ ಸುದ್ದಿಯನ್ನೂ ಓದಿ | Valentines Day Fashion 2025: ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ಸಾಥ್ ನೀಡಲು ಬಂತು ಹೃದಯಾಕಾರದ ಕಿವಿಯೊಲೆಗಳು
ರೋಸ್ ಪ್ರಿಂಟೆಡ್ ಡ್ರೆಸ್ ಪ್ರಿಯರಿಗೊಂದಿಷ್ಟು ಟಿಪ್ಸ್
- ಕಲರ್‌ಫುಲ್ ರೋಸ್ ಪ್ರಿಂಟೆಡ್ ಡ್ರೆಸ್‌ಗಳು ಯಂಗ್‌ಲುಕ್ ನೀಡುತ್ತವೆ.
- ಸ್ಲಿಮ್ ಲುಕ್‌ಗಾಗಿ ಆದಷ್ಟೂ ಚಿಕ್ಕ ಚಿಕ್ಕ ರೋಸ್ ಪ್ರಿಂಟೆಡ್ ಡ್ರೆಸ್ ಆಯ್ಕೆ ಮಾಡಿ.
- ನಿಮ್ಮ ಪರ್ಸನಾಲಿಟಿಗೆ ಹೊಂದುವಂತೆ ಗುಲಾಬಿ ಪ್ರಿಂಟ್ಸ್ ಆಯ್ಕೆ ಮಾಡಿ.
- ನೀವು ಧರಿಸುವ ರೋಸ್ ಡಿಸೈನರ್‌ವೇರ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಇರಲಿ.
- ಔಟ್‌ಫಿಟ್‌ಗೆ ತಕ್ಕಂತೆ ಮೇಕಪ್ ಮೈಲ್ಡ್ ಆಗಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)