Winter Shawl Styling 2025: ಚಳಿಗಾಲದಲ್ಲಿ ಶಾಲನ್ನು ಸ್ಟೈಲಿಶ್ ಆಗಿ ಧರಿಸಲು ಇಲ್ಲಿದೆ ಸೂಪರ್ ಐಡಿಯಾ!
Winter Shawl Styling 2025: ವಿಂಟರ್‌ನಲ್ಲಿ ಔಟ್‌ಫಿಟ್ ಮೇಲೆ ಧರಿಸುವ ಶಾಲನ್ನು ಸ್ಟೈಲಾಗಿ ಧರಿಸಬಹುದು. ಯಾವ್ಯಾವ ಶೈಲಿಯವನ್ನು ಹೇಗೆಲ್ಲಾ ಧರಿಸಬಹುದು? ಈ ಕುರಿತಂತೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ. ಬೆಂಗಳೂರು
ವಿಂಟರ್‌ನಲ್ಲಿ ಹೊರಗೆ ಹೋಗುವಾಗ ಬೆಚ್ಚಗಿಡುವ ಶಾಲನ್ನು ಸ್ಟೈಲಾಗಿ (Winter Shawl Styling 2025) ಧರಿಸಿ, ಸ್ಟೈಲಿಶ್ ಆಗಿ ಕಾಣಿಸಬಹುದು. ಇನ್ನು, ಪ್ರತಿಯೊಬ್ಬರ ಬಳಿಯೂ ಒಂದಲ್ಲ, ಒಂದು ಶೈಲಿಯ ಶಾಲು ಎಲ್ಲರ ವಾರ್ಡ್ರೋಬ್‌ನಲ್ಲಿರುತ್ತದೆ. ಸುಮ್ಮನೇ ಹೊದ್ದು ಕೊಳ್ಳುವ ಬದಲು, ಹೇಗೆಲ್ಲಾ ಸ್ಟೈಲಾಗಿ ಧರಿಸಬಹುದು? ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಬ್ಯೂಟಿ ಬ್ಲಾಗ್‌ಗಳು ಹಾಗೂ ಯೂಟ್ಯೂಬ್‌ಗಳು ಟ್ಯುಟೋರಿಯಲ್ ಕೂಡ ನೀಡುತ್ತಿವೆ ಎನ್ನುವ ಸ್ಟೈಲಿಸ್ಟ್ ದೀಕ್ಷಿತಾ, ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಶಾಲು ಆಯ್ಕೆ ಮಾಡಿ
ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಶಾಲನ್ನು ಆಯ್ಕೆ ಮಾಡಿದಾಗ ಅಥವಾ ಶಾಲಿನ ಫ್ಯಾಬ್ರಿಕ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವುದು. ಉದಾಹರಣೆಗೆ, ಸೀರೆ, ಸಲ್ವಾರ್ ಅಥವಾ ವೆಸ್ಟರ್ನ್ ಔಟ್‌ಫಿಟ್‌ಗೆ ತಕ್ಕಂತೆ ಧರಿಸಬೇಕು.
ಹೀಗಿರಲಿ ವುಲ್ಲನ್ ಶಾಲ್ ಸ್ಟೈಲಿಂಗ್
ವುಲ್ಲನ್ ಶಾಲ್ ಆದಲ್ಲಿ ಆದಷ್ಟೂ ಹೆಚ್ಚು ಚಳಿಯಿದ್ದಾಗ ಧರಿಸಬೇಕು. ಯಾಕೆಂದರೆ, ದೇಹ ಅತಿ ಬೇಗ ಬೆಚ್ಚಗಾಗಿ ಸೆಕೆಯಾಗಬಹುದು. ಇದನ್ನು ಪೊಂಚೊ ಶೈಲಿಯಲ್ಲೂ ಧರಿಸಬಹುದು ಅಥವಾ ಸುತ್ತಿಕೊಳ್ಳಬಹುದು.
ಪುರುಷರ ಸ್ಟೈಲಿಂಗ್
ಪುರುಷರು ಶಾಲನ್ನು ಹೊದೆಯುವುದಾದಲ್ಲಿ ಆದಷ್ಟೂ ವುಲ್ಲನ್ ಅವಾಯ್ಡ್ ಮಾಡುವುದು ಉತ್ತಮ. ಇತರೇ ಮೆಟಿರಿಯಲ್‌ನದ್ದು ಯಾವುದಾದರೂ ಓಕೆ. ಮಫ್ಲರ್‌ನಂತೆಯೂ ಧರಿಸಬಹುದು. ಸ್ಟೈಲಾಗಿ ಹೊದಿಯಬಹುದು.
ಹುಡುಗಿಯರ ದುಪಟ್ಟಾದಂತೆ ಸ್ಟೈಲಿಂಗ್
ಡಿಸೈನರ್ ಶಾಲು ಆದಲ್ಲಿ ಹುಡುಗಿಯರು ಉಡುಪಿನ ಒಂದು ಕಡೆಗೆ ಮಾತ್ರ ದುಪಟ್ಟಾದಂತೆ ಧರಿಸಬಹುದು. ಇದು ನೋಡಲು ಚೆನ್ನಾಗಿ ಕಾಣುತ್ತದೆ. ಚಳಿಯಾದಾಗ ಎರಡೂ ಕಡೆ ಹೊದಿಯಬಹುದು.
ದಪ್ಪಗಿನ ಫ್ಯಾಬ್ರಿಕ್ ಶಾಲು
ಶಾಲು ಅತಿ ದಪ್ಪಗಿದ್ದಲ್ಲಿ ಸ್ಟೋಲ್‌ನಂತೆ ಧರಿಸಲು ಕಷ್ಟವಾಗಬಹುದು. ಹಾಗಾಗಿ ಹುಡುಗಿಯರು ಕ್ಯಾಶುವಲ್ ಔಟ್‌ಫಿಟ್ ಮೇಲೆ ಅದನ್ನು ಟೈ ನಂತೆ ಕತ್ತಿಗೆ ಲೂಸಾಗಿ ಸುತ್ತಿಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ | Valentines Day Shopping 2025: ಆಗಲೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್ !
ವಿ ನೆಕ್ ಸ್ಟೈಲಿಂಗ್
ಕೊನೆಯ ಅಂಚನ್ನು ಟೈ ಮಾಡಬೇಕು. ಮುಂಭಾಗಕ್ಕೆ ವಿ ನೆಕ್ ಬರುವ ಹಾಗೆ ಇಳೆ ಬಿಡಬೇಕು. ಇದು ನೋಡಲು ಪೋಂಚೋ ರೀತಿಯಲ್ಲಿ ಕಾಣಿಸುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)