ಅಬ್ಬಬ್ಬಾ ಇಂತಹ ಸಾಹಸವೇ? ವಿಷಕಾರಿ ಹಾವಿನೊಂದಿಗೆ ಒಂದು ಗಂಟೆವರೆಗೆ ಹರಟೆ ಹೊಡೆದ ವಿದ್ಯಾರ್ಥಿ! ವಿಡಿಯೋ ನೋಡಿ
Viral Video: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಬಿಎಸ್ಸಿ ವಿದ್ಯಾರ್ಥಿಯೊಬ್ಬ ನಾಗರಹಾವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಹರಟೆ ಹೊಡಿದಿರುವ ಘಟನೆ ನಡೆದಿದೆ.. ಯುವಕನನ್ನು ಗಿರ್ಜಾ ಶಂಕರ್ ಶರ್ಮಾ ಎಂದು ಗುರುತಿಸಲಾಗಿದ್ದು ಯಾವುದೇ ಭಯ ವಿಲ್ಲದೆ ಆತ ಹಾವಿನ ಜೊತೆ ಸಂವಹನ ನಡೆಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಷಕಾರಿ ಹಾವಿನೊಂದಿಗೆ ವಿದ್ಯಾರ್ಥಿ ಹರಟೆ -
ಮಧ್ಯಪ್ರದೇಶ,ಡಿ. 14: ಸಾಮಾನ್ಯವಾಗಿ ಹಾವೆಂದರೆ ಭಯ ಪಡುವವರೇ ಜಾಸ್ತಿ. ಅದರಲ್ಲೂ ವಿಷಕಾರಿ ಹಾವು ಕಚ್ಚಿದರೆ ಬದುಕುವುದು ತುಂಬಾ ಕಷ್ಟ. ಹೀಗಾಗಿ ಜನ ಹಾವು ಅಂದಾಗ ದೂರ ಸರಿಯುವುದೇ ಹೆಚ್ಚು, ಆದ್ರೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಬಿಎಸ್ಸಿ ವಿದ್ಯಾರ್ಥಿಯೊಬ್ಬ ನಾಗರಹಾವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಹರಟೆ ಹೊಡಿದಿರುವ ಘಟನೆ ನಡೆದಿದೆ.. ಯುವಕನನ್ನು ಗಿರ್ಜಾ ಶಂಕರ್ ಶರ್ಮಾ ಎಂದು ಗುರುತಿಸಲಾಗಿದ್ದು ಯಾವುದೇ ಭಯವಿಲ್ಲದೆ ಆತ ಹಾವಿನ ಜೊತೆ ಸಂವಹನ ನಡೆಸಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ (Viral Video) ಜನರು ಆತಂಕ ವ್ಯಕ್ತ ಪಡಿಸಿದ್ದಾರೆ.
ಯುವಕನು ಹಾವನ್ನು ಮಡಿಲಲ್ಲಿ ನಿಧಾನವಾಗಿ ಹಿಡಿದುಕೊಂಡು ಸುಮಾರು ಒಂದು ಗಂಟೆ ಕಾಲ ಕಳೆದಿದ್ದಾನೆ. ನೆರೆಮನೆಯೊಂದಕ್ಕೆ ನುಗ್ಗಿದ್ದ ಹಾವನ್ನು ಹಿಡಿಯುವ ಸಂದರ್ಭದಲ್ಲಿ ಯುವಕ ಈ ರೀತಿ ಹಾವಿನೊಂದಿಗೆ ಕಾಲ ಕಳೆದಿದ್ದಾನೆ. ವಿಡಿಯೋದಲ್ಲಿ, ಯುವಕ ನಾಗರಹಾವಿನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಅದನ್ನು ತನ್ನ ಮಡಿಲಲ್ಲಿ ನಿಧಾನವಾಗಿ ಹಿಡಿದು ಕೊಂಡು ಸುಮಾರು ಒಂದು ಗಂಟೆ ಕಾಲ ಕಳೆದಿದ್ದಾನೆ.ಈ ಮಧ್ಯೆ ಹಾವು ಆರಾಮದಾಯಕವಾಗಿದ್ದು ಆತನ ಮಾತನ್ನೇ ಆಲಿಸುತ್ತಿರುವುದು ಕಂಡು ಬಂದಿದೆ.
ವಿಡಿಯೋ ನೋಡಿ:
#WATCH | Man Caught In A Hilarious Conversation With #Snake In #Chhatarpur; Video Goes Viral#MadhyaPradesh #MPNews #wildlife pic.twitter.com/FiwLcJq47H
— Free Press Madhya Pradesh (@FreePressMP) January 2, 2026
ಆಶ್ಚರ್ಯಕರ ಸಂಗತಿಯೆಂದರೆ ಆ ನಾಗರಹಾವು ಯಾರ ಮೇಲೂ ದಾಳಿ ಮಾಡದೆ, ಶಾಂತವಾಗಿ ಯುವಕನ ಮಾತುಗಳಿಗೆ ಪ್ರತಿಕ್ರಿಯೆ ನೀಡುವಂತೆ ಕಂಡಿದೆ. ಮಾಹಿತಿಗಳ ಪ್ರಕಾರ, ಗಿರಿಜಾ ಶಂಕರ್ ಅವರ ಕುಟುಂಬವು ಈ ಹಿಂದಿನಿಂದಲೂ ನಾಗ ದೇವರನ್ನು ಪೂಜಿಸಿಕೊಂಡು ಬಂದಿದೆ. ಹಿಂದೆ ಕಷ್ಟಕರವಾದ ಸಮಯದಲ್ಲಿ ನಾಗರಹಾವೊಂದು ತಮ್ಮ ಪೂರ್ವಜರನ್ನು ರಕ್ಷಣೆ ಮಾಡಿತ್ತು ಎಂಬ ಗಾಢ ನಂಬಿಕೆ ಕೂಡ ಇವರಲ್ಲಿದೆ.
Viral Video: ಟಿಕೆಟ್ ತಗೊಂಡಿಲ್ಲಂತಾ ಹೀಗ್ ನಡೆಸ್ಕೊಳ್ಳೋದಾ? ರೈಲ್ವೆ TTEಯ ದರ್ಪವನ್ನೊಮ್ಮೆ ನೋಡಿ
ಈ ಘಟನೆಯನ್ನು ದೇವರ ರಕ್ಷಣೆ ಎಂದು ಬಣ್ಣಿಸಿರುವ ಯುವಕ ಆದರೆ ಹಾವುಗಳು ಅತ್ಯಂತ ಅಪಾಯಕಾರಿ ಸಾಮಾನ್ಯ ಜನರು ಇಂತಹ ಸಾಹಸ ಮಾಡಬಾರದು ಎಂದು ಎಚ್ಚರಿಕೆ ನೀಡಿ ದ್ದಾರೆ.ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ವಿಷಕಾರಿ ಹಾವಿನ ಜೊತೆ ಈ ರೀತಿಯಾಗಿ ಸಾಹಸ ಮೆರೆಯುವುದು ತಪ್ಪು ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಛತ್ತರಪುರದಲ್ಲಿ ವ್ಯಕ್ತಿಯೊಬ್ಬರು ಭಯಂಕರ ವಿಷಪೂರಿತ ನಾಗರ ಹಾವಿನ ಜೊತೆ ತಮಾಷೆಯಾಗಿ ಮಾತನಾಡುತ್ತ ಕುಳಿತಿರುವ ವಿಡಿಯೋ ಎಲ್ಲರನ್ನೂ ದಂಗಾಗಿಸಿತ್ತು ಹಾವು ತನ್ನ ಹತ್ತಿರ ಬರುತ್ತಿದ್ದರೂ ವ್ಯಕ್ತಿ ಶಾಂತವಾಗಿ ಕೂತು ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಅಚ್ಚರಿಯೆಂದರೆ, ಆ ಹಾವೂ ಕೂಡ ಹೆಡೆ ಬಿಚ್ಚಿ ಶಾಂತವಾಗಿ ಆತನ ಹತ್ತಿರವೆ ನಿಂತಿತ್ತು.ಸದ್ಯ ಮದ್ರ ಪ್ರದೇಶದ ಈ ಎರಡು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.