ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಬ್ಯಾಂಕಾಕ್‌ನಲ್ಲಿ ಭೂಕಂಪಕ್ಕೆ ಕುಸಿದ ಕಟ್ಟಡ; ಓರ್ವ ಸಾವು 42 ಕಾರ್ಮಿಕರು ಅವಶೇಷದಡಿ ಸಿಲುಕಿರುವ ಶಂಕೆ

ಮಯನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಪಕ್ಕದ ಥೈಲ್ಯಾಂಡ್‌ನಲ್ಲಿಯೂ ಭೂಕಂಪದ ಸಂಭವಿಸಿದ್ದು ಕಟ್ಟಡ ಕುಸಿದು 42 ಕಾರ್ಮಿಕರು ಅವಶೇಷದಡಿ ಸಿಲುಕಿದ್ದು, ಓರ್ವ ಮೃತ ಪಟ್ಟಿದ್ದಾನೆ ಎಂದು ವರದಿಯಾಗಿದೆ.

ಬ್ಯಾಂಕಾಕ್‌ನಲ್ಲಿ ಭೂಕಂಪಕ್ಕೆ ಕುಸಿದ ಕಟ್ಟಡ; ಓರ್ವ ಸಾವು

Profile Vishakha Bhat Mar 28, 2025 2:36 PM

ಮಯನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಪಕ್ಕದ ಥೈಲ್ಯಾಂಡ್‌ನಲ್ಲಿಯೂ ಭೂಕಂಪದ ಸಂಭವಿಸಿದ್ದು ಕಟ್ಟಡ ಕುಸಿದು 42 ಕಾರ್ಮಿಕರು ಅವಶೇಷದಡಿ ಸಿಲುಕಿದ್ದು, ಓರ್ವ ಮೃತ ಪಟ್ಟಿದ್ದಾನೆ ಎಂದು ವರದಿಯಾಗಿದೆ.ಶುಕ್ರವಾರ ಮಧ್ಯಾಹ್ನ 12.50 ಕ್ಕೆ 7.7 ತೀವ್ರತೆಯ ಭೂಕಂಪವಾಗಿದೆ. ಸಾಗೈಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಉತ್ತರ ಥೈಲ್ಯಾಂಡ್‌ನಲ್ಲೂ ಕಂಪನದ ಅನುಭವವಾಗಿದ್ದು, ಬ್ಯಾಂಕಾಕ್‌ನಲ್ಲಿ ಕೆಲವು ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬ್ಯಾಂಕಾಕ್‌ನಲ್ಲಿ ಬಹುಮಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ಕಟ್ಟಡದ ಅಡಿಯಲ್ಲಿ43 ಕಾರ್ಮಿಕರು ಅವಶೇಷಗಳ ನಡುವೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿರುವುದನ್ನು ಪೊಲೀಸರು ತಿಳಿಸಿದ್ದಾರೆ. ಉಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು ಬಿಕ್ಕಟ್ಟನ್ನು ಪರಿಶೀಲಿಸಲು "ತುರ್ತು ಸಭೆ" ನಡೆಸುತ್ತಿದ್ದಾರೆ ಮತ್ತು ರಾಜಧಾನಿ ನಗರದಲ್ಲಿ 'ತುರ್ತು ಪರಿಸ್ಥಿತಿ' ಘೋಷಿಸಿದ್ದಾರೆ.



ಸದ್ಯ ರಕ್ಷಣಾ ಕಾರ್ಯಾರಣೆ ನಡೆಯುತ್ತಿದೆ. ಬ್ಯಾಂಗ್ ಸ್ಯೂ ಜಿಲ್ಲೆಯ ಉಪ ಪೊಲೀಸ್ ಮುಖ್ಯಸ್ಥ ವೊರಾಪತ್ ಸುಕ್ತಾಯಿ ಈ ಕುರಿತು ಪ್ರತಿಕ್ರಿಯಿಸಿ, ನಾವು ಸ್ಥಳಕ್ಕೆ ಬಂದಾಗ ಜನರು ರಕ್ಷಣೆಗಾಗಿ ಕೋರುತ್ತಿದ್ದರು. ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಕಟ್ಟದ ಅವಶೇಷಗಳ ಒಳಗೆ ಸಿಲುಕಿದ್ದವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. "ನೂರಾರು ಜನರು ಗಾಯಗೊಂಡಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ ಆದರೆ ಸಾವುನೋವುಗಳ ಸಂಖ್ಯೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ ಎಂದು ಅವರು ಹೇಳಿದರು. ಬ್ಯಾಂಕಾಕ್‌ನಲ್ಲಿ ಸಂಭವಿಸಿರುವ ಅವಘಡಕ್ಕೆ ದುಖಃ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ:Earthquake : ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ,ಬ್ಯಾಂಕಾಕ್‌ ಸೇರಿದಂತೆ ಹಲವು ಕಡೆ ಕಂಪನದ ಅನುಭವ

ಇನ್ನು ಭೂಕಂಪ ಅನುಭವ ಭಾರತದಲ್ಲಿಯೂ ಆಗಿದ್ದು, ದೆಹಲಿ, ಉತ್ತರ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ಚೀನಾ ಹಾಗೂ ಬಾಂಗ್ಲಾದೇಶದಲ್ಲಿಯೂ ಇದೇ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಮ್ಯಾನ್ಮಾರ್‌ನಲ್ಲಿ, ಇರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಮತ್ತು ಕೆಲವು ವಸತಿ ಕಟ್ಟಡಗಳು ಕುಸಿದಿದೆ ಎಂದು ವರದಿಯಾಗಿದೆ.