ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಸಾವಿನ ಬಗ್ಗೆ ಭಯವಿಲ್ಲ, ಸ್ಮಿತ್ ಮಚ್ಚಾರ್ ಮೇಲೆ ದಾಳಿ ಮಾಡಿದ ನಂತರ ವಿಮಾನ ಪತನಗೊಳಿಸಲು ಬಯಸಿದ್ದೆ”: ಸಂಚು ಎಳೆ ಎಳೆಯಾಗಿ ಬಿಚ್ಚಿಟ್ಟ ಹಮಾಮ್‌ ಅಲ್‌-ಹಮ್ಮಾಯಿ

Hamam al-Hammami: ʼʼನಾನು ಉದ್ದೇಶಪೂರ್ವಕವಾಗಿ ವಿಮಾನವನ್ನು ಪತನಗೊಳಿಸಲು ಬಯಸಿದ್ದೆ. ಸಾವಿಗೆ ತಾನು ಹೆದರುತ್ತಿರಲಿಲ್ಲʼʼ ಎಂದು ಫ್ಲೈದುಬೈ ವಿಮಾನದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾನೆ. ತನಿಖಾಧಿಕಾರಿಗಳು ಇದೀಗ ಹಮ್ಮಾಮಿ ಇಂತಹ ತೀವ್ರಗಾಮಿ ನಡೆಗೆ ತಿರುಗಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ವಿಮಾನ ಪತನಗೊಳಿಸಲು ಬಯಸಿದ್ದೆ ಎಂದು ಒಪ್ಪಿಕೊಂಡ ಸಹ ಪೈಲಟ್

ಫ್ಲೈದುಬೈ ವಿಮಾನ ಮತ್ತು ಸಹ ಪೈಲಟ್‌ ಹಮಾಮ್ ಅಲ್-ಹಮ್ಮಾಮಿ (ಸಂಗ್ರಹ ಚಿತ್ರ) -

Priyanka P
Priyanka P Oct 4, 2026 9:45 PM

ದುಬೈ, ಅ. 4: ಉದ್ದೇಶಪೂರ್ವಕವಾಗಿ ವಿಮಾನ ಪತನಗೊಳಿಸಲು ಬಯಸಿದ್ದಾಗಿ ಫ್ಲೈದುಬೈ ವಿಮಾನದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ (Hamam al-Hammami) ಒಪ್ಪಿಕೊಂಡಿದ್ದಾನೆ. 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಮೇಲೆ ಕೊಡಲಿಯಿಂದ ದಾಳಿ ಮಾಡಿ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಘಟನೆ ಬಳಿಕ ತನಿಖಾಧಿಕಾರಿಗಳ ಮುಂದೆ ತಾನು ಉದ್ದೇಶಪೂರ್ವಕವಾಗಿ ವಿಮಾನವನ್ನು ಪತನಗೊಳಿಸಲು ಬಯಸಿದ್ದೆ. ಸಾವಿಗೆ ತಾನು ಹೆದರುತ್ತಿರಲಿಲ್ಲ ಎಂದು ಹೇಳಿದ್ದಾನೆ.

ಒಮಾನ್‌ ಮೂಲದ ಹಮ್ಮಾಮಿ ಈ ಹಿಂದೆ ಉಗ್ರವಾದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ಆಸಕ್ತಿ ತೋರಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, ಮತ್ತೆ ಕಾಕ್‌ಪಿಟ್‌ಗೆ ಮರಳಿ, ಅಂತಾರಾಷ್ಟ್ರೀಯ ಮಾರ್ಗದಲ್ಲಿ ವಿಮಾನ ಹಾರಿಸಲು ಹೇಗೆ ಅವಕಾಶ ದೊರೆಯಿತು ಎಂಬ ಬಗ್ಗೆ ಇದೀಗ ಪ್ರಶ್ನೆಗಳು ಮೂಡಿವೆ.

ವರದಿಯ ಪ್ರಕಾರ, ಹಮ್ಮಾಮಿ ಒಮ್ಮೆ 2022ರ ಜೂನ್‌ನಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಾಯುಯಾನ ಮತ್ತು ಹಾರಾಟ ತರಬೇತಿಯ ಬಗ್ಗೆ ತನ್ನ ಆಸಕ್ತಿಯನ್ನು ವಿವರಿಸಿದ್ದ. ಈಗ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಅಳಿಸಲಾಗಿದೆ.

ಫ್ಲೈದುಬೈ ವಿಮಾನ ದಾಳಿಕೋರನನ್ನು ಬಿಡಲೊಪ್ಪದ ಪ್ರಯಾಣಿಕರು; ಏನಿದು ಹೊಸ ವಿಡಿಯೊ?

ತನಿಖಾಧಿಕಾರಿಗಳು ಇದೀಗ ಒಮಾನ್‌ ಮೂಲದ ಹಮ್ಮಾಮಿ ಇಂತಹ ತೀವ್ರಗಾಮಿ ನಡೆಗೆ ತಿರುಗಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಆತ ತನ್ನ ಕ್ಯಾಪ್ಟನ್‌ ಮೇಲೆ ದಾಳಿ ನಡೆಸಿದ ಬಳಿಕ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂಬುದು ಇದೀಗ ಸಾಬೀತಾಗಿದೆ. ಹಮ್ಮಾಮಿಯನ್ನು ಫ್ಲೈದುಬೈ ಸಂಸ್ಥೆ ಹೇಗೆ ನೇಮಕ ಮಾಡಿಕೊಂಡಿತು ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಹಮ್ಮಾಮಿಯ ಮೊದಲ ವಿಮಾನಯಾನ ಸಂಸ್ಥೆಯಾದ ಸರ್ಕಾರಿ ಸ್ವಾಮ್ಯದ ಒಮಾನ್ ಏರ್, ಆತ ಉಗ್ರವಾದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ವೀಕ್ಷಿಸುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತ ಬಳಿಕ ವಿಮಾನ ಹಾರಿಸುವುದನ್ನು ನಿಷೇಧಿಸಿತ್ತು. ನಂತರ ಆತನಿಗೆ ಕಚೇರಿ ಕೆಲಸ ನೀಡಲಾಗಿತ್ತು. ಆ ಬಳಿಕ ಹಮ್ಮಾಮಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉದ್ಯೋಗ ದೊರೆತಿತ್ತು.

ಅದರಲ್ಲಿನ ಹಲವು ಪೋಸ್ಟ್‌ಗಳಲ್ಲಿ ಮಹಿಳೆಯರು ಉದ್ಯೋಗ ಮಾಡುವುದನ್ನು ವಿರೋಧಿಸಲಾಗಿತ್ತು. ಅಲ್ಲದೆ, ಮಹಿಳೆಯರು ಬುರ್ಖಾ ಧರಿಸಬೇಕು ಎಂಬುದು ಆತನ ಆದ್ಯತೆಯಾಗಿತ್ತು ಎನ್ನಲಾಗಿದೆ. 2021ರ ಡಿಸೆಂಬರ್‌ನಲ್ಲಿ ಹಮ್ಮಾಮಿಯು ಅರೇಬಿಕ್ ಭಾಷೆಯಲ್ಲಿ ಮಾಡಿದ್ದ ಪೋಸ್ಟ್‌ವೊಂದರಲ್ಲಿ, ತಾನು ಸಿರಿಯಾ ಅಥವಾ ಲೆಬನಾನ್‌ನ ವ್ಯಕ್ತಿಯಂತೆ ನಟಿಸಿ, ನಕಲಿ ಖಾತೆಯನ್ನು ಸೃಷ್ಟಿಸಿ, ಸೌದಿ ಮಹಿಳೆಯರನ್ನು ಸಂಪರ್ಕಿಸಿದ್ದಾಗಿ ಹೇಳಿದ್ದ ಎನ್ನಲಾಗಿದೆ.

ಗೂಗಲ್ ಇಮೇಜ್ ಕ್ಯಾಶ್ ಮೂಲಕ ಪತ್ತೆಯಾದ ಹಲವು ಪೋಸ್ಟ್‌ಗಳು, ದಾಳಿ ನಡೆದ ದಿನವೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟವಾಗಿದ್ದವು ಎನ್ನಲಾಗಿದೆ. ಅವುಗಳಲ್ಲಿ ಒಂದು ಪೋಸ್ಟ್‌ನಲ್ಲಿ ಮಕ್ಕಾ, ಮದೀನಾ ಮತ್ತು ಜೆರುಸಲೇಂನ ಪವಿತ್ರ ಸ್ಥಳಗಳನ್ನು ಬೆಳಕಿನ ರೇಖೆಗಳು ಸಂಪರ್ಕಿಸಿರುವ ಚಿತ್ರ ಇತ್ತು. ಆ ಚಿತ್ರಕ್ಕೆ ಈಜಿಪ್ಟ್‌ನ 19ನೇ ಶತಮಾನದ ಕವಿ ಮಹಮೂದ್ ಸಾಮಿ ಅಲ್-ಬರುದಿ ರಚಿಸಿದ ರಾಷ್ಟ್ರೀಯತಾವಾದಿ ಅರೇಬಿಕ್ ಕವಿತೆಯೊಂದನ್ನು ಪೋಸ್ಟ್ ಮಾಡಲಾಗಿತ್ತು.